ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಿರುಚಿತ್ರ ‘ಮೌನ’ಕ್ಕೆ ರಾಷ್ಟ್ರಮಟ್ಟದ ಉತ್ತಮ ಛಾಯಾಗ್ರಹಣ ಪ್ರಶಸ್ತಿ

0

ಪುತ್ತೂರು: ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ‘ಮೌನ’ ಕಿರುಚಿತ್ರ ರಾಷ್ಟ್ರ ಮಟ್ಟದ ಸಿನಿಮಾ ಸ್ಪರ್ಧೆಯಲ್ಲಿ ಉತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದುಕೊಂಡಿದೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಆಯೋಜಿಸಿದ ಎರಡನೇ ಆವೃತ್ತಿಯ ‘ಆಳ್ವಾಸ್ ಅರೆನಾ’ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ‘ಮೌನ’ ಕಿರುಚಿತ್ರ ಉತ್ತಮ ಛಾಯಾಗ್ರಹಣ ವರ್ಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಚಿತ್ರದ ಕಥೆಯನ್ನು ಸ್ನಾತಕೋತ್ತರ ಸಮೂಹ ಸಂವಹನ ವಿದ್ಯಾರ್ಥಿಗಳು ರಚಿಸಿದ್ದು, ಕಿರುಚಿತ್ರವನ್ನು ಅಚಲ್ ಉಬರಡ್ಕ ನಿರ್ದೇಶಿಸಿದ್ದಾರೆ. ಕಿರುಚಿತ್ರದ ಛಾಯಾಗ್ರಹಣವನ್ನು ಪ್ರಸೀದ ಕೃಷ್ಣ ಕಲ್ಲೂರಾಯ ಮಾಡಿದ್ದು, ಮುಖ್ಯ ಪಾತ್ರದಲ್ಲಿ ಪೃಥ್ವಿ ಪುಣಚ ಮತ್ತು ಜಗದೀಶ ಜೆ ನಟಿಸಿದ್ದಾರೆ.

LEAVE A REPLY

Please enter your comment!
Please enter your name here