ಕಾಣಿಯೂರಿನಲ್ಲಿ ಮೇಳೈಸಿದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಸನ್ಮಾನ ಸಮಾರಂಭ

0

  • ಸಾಧನೆ ಮಾಡಿದವರ ಗುರುತಿಸಿ ಪ್ರೇರಣೆಯಾಗಬೇಕು – ಮೋಹನ ಗೌಡ
  • ಹೆಚ್ಚಿನ ಸಮಾಜ ಸೇವೆಗೆ ಜವಾಬ್ದಾರಿ ನೀಡಿದ್ದೀರಿ – ಸೀತಾರಾಮ ರೈ
  • ಸಾಧಕರ ಗುರುತಿಸುವಿಕೆ ಸಮಾಜಕ್ಕೆ ಪ್ರೇರಣೆ – ಜಯಸೂರ್‍ಯ ರೈ

 

 

ಕಾಣಿಯೂರು: ಯಕ್ಷಮಿತ್ರರು ಕಾಣಿಯೂರು ಇವರ ಆಶ್ರಯದಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಶ್ರೀ ಜ್ಞಾನಶಕ್ತಿ ಸ್ವಾಮಿ ಕೃಪಾ ಶ್ರಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಹಳೆಯಂಗಡಿ, ಮಂಗಳೂರು ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೇ 17ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಠಾರದಲ್ಲಿ ನಡೆಯಿತು.

 

ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಮಾತನಾಡಿ, ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದಾಗ ಪ್ರಶಸ್ತಿ ಪಡೆಯಲು ಸಾಧ್ಯ, ಅತ್ಯುನ್ನತ್ತ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಮೂಲಕ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ, `ಸಹಕಾರಿ ರತ್ನ’ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಕೆ. ಸೀತಾರಾಮ ರೈಯವರು, ಈಗ ಮಾಡುತ್ತಿರುವ ಸಮಾಜಸೇವೆಗಿಂತ ಇನ್ನೂ ಹೆಚ್ಚಿನ ಸಮಾಜಸೇವೆ ಮಾಡುವಂತೆ ನಮಗೆ ಹೆಚ್ಚು ಜವಾಬ್ದಾರಿ ನೀಡಿದ್ದೀರಿ. ಸನ್ಮಾನಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವುದು ವಿಶೇಷ ಕಾರ್ಯಕ್ರಮವಾಗಿದ್ದು, ಮುಂದಿನ ಸಮಾಜಕ್ಕೆ ಪ್ರೇರಣೆಯಾಗಲಿ ಎಂದರು.

ಕಲಾವಿದ ದಿವಾಕರ ಕಾಣಿಯೂರುರವರಿಗೆ ಗೌರವಾರ್ಪಣೆ
ಹರೇಕಳ ಹಾಜಬ್ಬ, ಸವಣೂರು ಸೀತಾರಾಮ ರೈ, ಅಮೈ ಮಹಾಲಿಂಗ ನಾಯ್ಕರಿಗೆ ಸನ್ಮಾನ

ಪಾವಂಜೆ ಮೇಳದ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಉಪಸ್ಥಿತರಿದ್ದರು. ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ನಾಯ್ಕ್ ತೋಟ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ, ಏಲಡ್ಕ ಶ್ರೀ ಶಿರಾಡಿ ರಾಜನ್ ಮತ್ತು ಚಾಮುಂಡಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎಳುವೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಗುಂಡಿಗದ್ದೆ, ಕೊಡಿಮಾರು ಗೆಳೆಯರ ಬಳಗದ ಅಧ್ಯಕ್ಷ ರಂಜಿತ್ ಹೊಸೊಕ್ಲು, ಕಾಣಿಯೂರು ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಅನಿಲ, ಕಾಣಿಯೂರು ಯಕ್ಷಮಿತ್ರ ಬಳಗದ ರಕ್ಷಿತ್ ಭಂಡಾರಿ ಕಾಣಿಯೂರು, ಬಾಲಚಂದ್ರ ಅಬೀರ ಮೇಗಿನಮನೆ, ಸೀತಾರಾಮ ಅನಿಲ, ಬಾಬು ಮಾದೋಡಿ ಗಣೇಶ್ ನಾರ್ಯ ಬೈತಡ್ಕ, ದಿನೇಶ್ ಪೈಕ, ಚೇತನ್ ಕಟ್ಟತ್ತಾರು, ಮೋನಪ್ಪ ಬಂಡಾಜೆ ಉಪಸ್ಥಿತರಿದ್ದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ ಸನ್ಮಾನ ಪತ್ರ ವಾಚಿಸಿದರು. ಕಾಣಿಯೂರು ಯಕ್ಷಮಿತ್ರ ಬಳಗದ ಸಂಚಾಲಕ ಹರಿಪ್ರಸಾದ್ ರೈ ಕಾಣಿಯೂರು ಸ್ವಾಗತಿಸಿ, ನಾರಾಯಣ ಭಟ್ ಕಾಣಿಯೂರು ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಸಹಕಾರಿ ರಂಗದ ಭೀಷ್ಮ ಕರ್ನಾಟಕ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ. ಸೀತಾರಾಮ ರೈ ಸವಣೂರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಮತ್ತು ಅಮೈ ಮಹಾಲಿಂಗ ನಾಯ್ಕರವರಿಗೆ ಸನ್ಮಾನ ಮತ್ತು ಯುವ ಯಕ್ಷಗಾನ ಕಲಾವಿದ ದಿವಾಕರ ಕಾಣಿಯೂರುರವರಿಗೆ ಗೌರವಾರ್ಪಣೆ ನಡೆಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಮತ್ತು ಮಹಾಲಿಂಗ ನಾಯ್ಕ ಅಮೈ ಹಾಗೂ ಪಟ್ಲ ಸತೀಶ್ ಶೆಟ್ಟಿಯವರ ಯಕ್ಷದ್ರುವ ಫೌಂಡೇಶನ್‌ಗೆ ಕಾಣಿಯೂರು ಯಕ್ಷಮಿತ್ರರು ವತಿಯಿಂದ ತಲಾ ರೂ ೧೦ಸಾವಿರ ದೇಣಿಗೆ ನೀಡಲಾಯಿತು. ಬ್ಯಾಂಡ್ ವಾಲಗ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ಪ್ರಶಸ್ತಿ ಪುರಸ್ಕೃತರು ಹಾಗೂ ಗಣ್ಯ ಅತಿಥಿಗಳನ್ನು ಸಭಾ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

LEAVE A REPLY

Please enter your comment!
Please enter your name here