ಪ್ರೇಕ್ಷಕರನ್ನು ಸಂಗೀತದಲೆಯಲ್ಲಿ ತೇಲಿಸಿದ ಗಾನಸಿರಿ ಮುಸ್ಸಂಜೆ ಮಧುರ ಗಾನ

0

ಪುತ್ತೂರು:  ಗಾಯಕ ಮತ್ತು ಸಂಗೀತ ಗುರು ಡಾ|ಕಿರಣ್ ಕುಮಾರ್ ಗಾನಸಿರಿಯವರ ನೇತೃತ್ವದಲ್ಲಿ ಕಳೆದ ೨೦ ವರ್ಷಗಳಲ್ಲಿ ೨೧ ಸಾವಿರ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಿರುವ ಪ್ರಸಿದ್ಧ ಸಂಗೀತ ಸಂಸ್ಥೆ ಗಾನಸಿರಿ ತನ್ನ ವಿಭಿನ್ನ ಮತ್ತು ವಿಶಿಷ್ಟ ರೀತಿಯ ಸಂಗೀತ ಕಾರ್ಯಕ್ರಮಗಳ ಸಂಯೋಜನೆಗೆ ಹೆಸರುವಾಸಿ. ಇದೀಗ ೨೦೨೨ರ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಭ್ರಮಿಸಲು ಹಮ್ಮಿಕೊಂಡಿದ್ದ ಮುಸ್ಸಂಜೆ ಮಧುರ ಗಾನ ಸಂಗೀತ ಸಂಜೆ ಕಾರ್ಯಕ್ರಮ ನಟರಾಜ ವೇದಿಕೆಯಲ್ಲಿ ನಡೆಯಿತು. ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್ ಕೃಷ್ಣಾರಾಧ್ಯಂ ಬ್ರಹ್ಮರಕೂಟ್ಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸುವಲ್ಲಿ ಗುರುವಿನ ಪಾತ್ರದ ಬಗ್ಗೆ ತಿಳಿಸಿದರು. ಕಿರಣ್ ಕುಮಾರ್‌ರ ಮಾತೃಶ್ರೀ ಯವರಾದ ಭಾರತಿ ಎನ್.ಕೆ ತಿಮ್ಮಪ್ಪ ಪೂಜಾರಿ, ಗಾನಸಿರಿಯ ಪೋಷಕ ಎಸ್. ಗೋಪಾಲಕೃಷ್ಣ ಆಚಾರ್ಯ, ಗಾನಸಿರಿಯ ಹಿರಿಯ ವಿದ್ಯಾರ್ಥಿನಿ ಮತ್ತು ಖ್ಯಾತ ಗಾಯಕಿ, ನಟಿ ಕವಿತಾ ದಿನಕರ್ ಉಪಸ್ಥಿತರಿದ್ದರು.

 

ಸುಗಮ ಸಂಗೀತ ರತ್ನ ಡಾಕಿರಣ್ ಕುಮಾರ್‌ರೊಂದಿಗೆ ಇವರ ಶಿಷ್ಯೆ ಸಂಸ್ಥೆಯ ಸಹಶಿಕ್ಷಕಿ ಮತ್ತು ರಾಜ್ಯ ಮಟ್ಟದ ಗಾನಕಲಾ ರತ್ನ ಪ್ರಶಸ್ತಿ ಪುರಸ್ಕೃತ ಗಾಯಕಿ ಶ್ರೀಲಕ್ಷ್ಮಿ ಎಸ್. ಪುತ್ತೂರು ಮತ್ತು ನಮ್ಮ ಟಿವಿ ಸುಪರ್ ಸಿಂಗರ್ ಖ್ಯಾತಿಯ ಗಾನಸಿರಿಯ ಗಾಯಕ ವರುಣ್ ಕುಮಾರ್ ಎಸ್.ರವರು ಕನ್ನಡದ ಅತಿ ಮಧುರ ಭಕ್ತಿ, ಭಾವ, ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಕಿರಣ್ ಕುಮಾರ್‌ರ ಸೋರುತಿಹುದು ಮನೆಯ ಮಾಳಿಗಿ, ಶ್ರೀಲಕ್ಷ್ಮಿ ಎಸ್.ರವರ ಸತ್ಯಂ ಶಿವಂ ಸುಂದರಂ, ವರುಣ್ ಕುಮಾರ್‌ರ ಸೋಜುಗದ ಸೂಜು ಮಲ್ಲಿಗಿ ವಿಶಿಷ್ಟ ಪ್ರಸ್ತುತಿ ಮನವಸೆಳೆಯಿತು. ಡಾ. ಕಿರಣ್ ಕುಮಾರ್‌ರಿಗೆ ಶ್ರೀ ಲಕ್ಷ್ಮಿ ಮತ್ತು ವರುಣ್‌ರಿಂದ ಗುರು ವಂದನೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಮಟ್ಟದ ಗಾನಕಲಾ, ವಿಶ್ವ ಮಾನ್ಯ ಕನ್ನಡಿಗ ಯುವ ಸಂಗೀತ ಪ್ರಶಸ್ತಿ ಪಡೆದ ಶಿಷ್ಯೆ ಶ್ರೀಲಕ್ಷ್ಮಿಯವರಿಗೆ ಗುರುಗಳು ಅಭಿನಂದನಾ ಫಲಕ ನೀಡಿ ಆಶೀರ್ವದಿಸಿದರು. ನಾಡಿನ ಖ್ಯಾತ ಕಲಾವಿದರಾದ ಅರುಣ್ ರಾಯ್ ಉಡುಪಿ, ವಾಮನ್ ಕಾರ್ಕಳ ಮತ್ತು ಗಿರೀಶ್ ಪೆರ್ಲ ಹಿಮ್ಮೇಳದಲ್ಲಿ ಕೈಚಳಕ ತೋರಿದರು. ಧನ್ಯ ಪ್ರಭು ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ಜ್ಯೋತಿ, ಪ್ರದೀಪ್ ಕರಾಯ, ದೀಪ್ತಿ ಪ್ರಭು, ಅಖಿಲಾ ನೆಕ್ರಜೆ, ಶ್ರೇಯ ಉಪ್ಪಿನಂಗಡಿ ವಿವಿಧ ಕಾರ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here