ಆಲಂಕಾರು ಹಿ.ಪ್ರಾ ಶಾಲಾ ಪ್ರಾರಂಭೋತ್ಸವ

0

 

ಆಲಂಕಾರು : ಆಲಂಕಾರು ಹಿ.ಪ್ರಾ ಶಾಲೆಯಲ್ಲಿ ಮಕ್ಕಳನ್ನು ಬ್ಯಾಂಡ್ ವಾದನದೊಂದಿಗೆ ಆರತಿ ಬೆಳಗುವುದರ ಮೂಲಕ ಹೂ ಮತ್ತು ಪನ್ನಿರನ್ನು ಸಿಂಪಡಿಸಿ ಸ್ವಾಗತಿಸಿಲಾಯಿತು. ನಂತರ ಆಲಂಕಾರು ಸರಕಾರಿ ಶಾಲೆಯಿಂದ ಮಕ್ಕಳ ಮೆರವಣಿಗೆ ಬ್ಯಾಂಡ್‌ಸೆಟ್‌ನೊಂದಿಗೆ ಆಲಂಕಾರು ಪೇಟೆಯಲ್ಲಿ ಮೆರವಣಿಗೆ ಸಾಗಿ ನಂತರ ಶಾಲಾ ಮುಂಭಾಗದಲ್ಲಿ ಮೆರವಣಿಗೆ ಸಂಪನ್ನಗೊಂಡಿತು ನಂತರ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯಗುರು ನಿಂಗರಾಜು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ಈ ವರ್ಷ ಆಲಂಕಾರು ಪ್ರಾಥಮಿಕ ಶಾಲೆಯಲ್ಲಿ ಯು.ಕೆ.ಜಿ ಮತ್ತು ಎಲ್.ಕೆ.ಜಿ ಒಟ್ಟು ೪೦೦ ಮಂದಿ ವಿಧ್ಯಾರ್ಥಿಗಳು ಸೇರ್ಪಡೆಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಸ್ವಾಗತಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದಯಾನಂದ ಕರ್ಕೆರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಅರೋಗ್ಯದ ಅರೋಗ್ಯ ಇಲಾಖೆಯ ಯಶ್ವಿತ ಹಾಗು ಕಿರಿಯ ಅರೋಗ್ಯ ಸಹಾಯಕಿ ಸರೋಜಿನಿ ಮಾಹಿತಿ ನೀಡಿದರು. ಸಿ.ಆರ್.ಪಿ ಯಶೋದ ಸಂದರ್ಭೋಚಿತವಾಗಿ ಮಾತನಾಡಿದರು. ಭೋಧಕ, ಭೋದಕೇತರ ವರ್ಗದವರು ಶಾಲಾ ಎಸ್.ಡಿ.ಎಂ.ಸಿಯವರು ಹೂ ನೀಡಿ ಸ್ವಾಗತಿಸಿದರು. ಶಾಲಾ ಶಿಕ್ಷಕ ಜಯಪ್ರಕಾಶ್ ರೈ ವಂದಿಸಿದರು. ಶಾಲಾ ಎಸ್‌ಡಿಎಂಸಿ ಸದಸ್ಯರಾದ ದಿನೇಶ್ ದೇವಾಡಿಗ, ಅಬುಬಕ್ಕರ್ ನೆಕ್ಕರೆ, ನೋಣಯ್ಯಗೌಡ, ರವಿಪೂಜಾರಿ, ವಿನುತ, ಕೃಷ್ಣ ಗಾಣಂತಿ, ಸೌಮ್ಯ, ಸುವರ್ಣಲತಾ, ನಾಗೇಶ್, ಹರೀಶ್ ಗೌಡ, ಕಮಲ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here