ಮೇ.21: ಮೂಡಂಬೈಲು ಡಾ. ರವಿ ಶೆಟ್ಟಿಯವರ ಯಶೋಗಾಥೆ ಆಧರಿಸಿದ `ರವಿತೇಜ’ ಪುಸ್ತಕ ಬಿಡುಗಡೆ ಸಮಾರಂಭ

0

ಪುತ್ತೂರು: ಅನಿವಾಸಿ ಭಾರತೀಯ ಉದ್ಯಮಿ, ಸಾಂಸ್ಕೃತಿಕ ಸಂಘಟಕ ಮೂಡಂಬೈಲು ಡಾ.ರವಿ ಶೆಟ್ಟಿ ಕತಾರ್ ಇವರ ಯಶೋಗಾಥೆ ಆಧರಿಸಿದ `ರವಿತೇಜ’ ಪುಸ್ತಕ ಬಿಡುಗಡೆ ಸಮಾರಂಭ ಮೇ 21ರಂದು ಅಪರಾಹ್ನ ಪುತ್ತೂರು ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ನಡೆಯಲಿದೆ.

 

 

ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಕನ್ನಡದಲ್ಲಿ ರವಿತೇಜ ಕೃತಿ ಬರೆದಿದ್ದು ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಮಿಥಾಲಿ ಪ್ರಸನ್ನ ರೈ ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ಹಿರಿಯ ವಿಧ್ವಾಂಸರು, ವಿಶ್ರಾಂತ ಕುಲಪತಿಗಳಾದ ಪ್ರೊ.ಬಿ.ಎ ವಿವೇಕ ರೈ ಅವರು ರವಿತೇಜ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಡಾ.ರವಿ ಶೆಟ್ಟಿ ಮೂಡಂಬೈಲು ಅವರು ಇಂಗ್ಲೀಷಿಗೆ ಅನುವಾದಿಸಿದ “೧೦೧ ಸುಭಾಷಿತಗಳು’ ಕೃತಿಯನ್ನು ಅನಿವಾಸಿ ಉದ್ಯಮಿ ಸರ್ವೋತ್ತಮ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ.
ಲೇಖಕರಾದ ಡಾ.ನರೇಂದ್ರ ರೈ ದೇರ್ಲ ಕೃತಿ ಪರಿಚಯ ಮಾಡಲಿದ್ದಾರೆ. ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತ ಕುಮಾರ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ತುಕಾರಾಮ ಪೂಜಾರಿ, ಕವಿ ಶಾಂತಾರಾಮ ಶೆಟ್ಟಿ ಬೆಂಗಳೂರು ಕೃತಿಕಾರರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ. ಐಲೇಸಾ ಸಾರಥಿ ಡಾ.ರಮೇಶ್ಚಂದ್ರ ತಂಡದವರಿಂದ ಗಾನ ಸೌರಭ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here