ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಕೆಯ್ಯೂರು ಕೆಪಿಎಸ್

0

ಕೆಯ್ಯೂರು: ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆಯ್ಯೂರು ಕೆಪಿಎಸ್ ಉತ್ತಮ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 72 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಸಂಸ್ಥೆಯು 86.11% ಫಲಿತಾಂಶ ದಾಖಲಿಸಿದೆ. ಅದರಲ್ಲಿ 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 37 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದಿದ್ದಾರೆ. 
ವಿಶಿಷ್ಟ ಶ್ರೇಣಿ ಪಡೆದವರು: ಎಂ. ನಿಶ್ಮಿತಾ ರೈ (96.16%) , ಸಿಂಚನಾ (95.20%), ಆಯಿಷತ್ ಷಹಮಾ (92%), ಹವ್ಯ ಕೆ (92%), ರಕ್ಷಿತಾ ಕೆ (91.84%), ಫಾತಿಮತ್ ಝಿಯಾನ( 90.40%), ಹಿತಾ(89.76%), ಮಹಮ್ಮದ್ ಪವಾಝ್ (89.76%), ಜಸ್ಮಿತಾ (89.12%).
 601 ಅಂಕ ಪಡೆದ ನಿಶ್ಮಿತಾ ರೈ ಶಾಲೆಯಲ್ಲಿ ಪ್ರಥಮ ಹಾಗೂ 595 ಅಂಕ ಪಡೆದ ಸಿಂಚನಾ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ ಎಂದು ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ಕೆ.ಎಸ್ ವಿನೋದ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here