ಕೆಮ್ಮಾರ: ದಅವಾ ಕಾಲೇಜಿನ ಭೋಜನ ಗೃಹಕ್ಕೆ ಶಿಲಾನ್ಯಾಸ

0

  • ಪ್ರತಿಭಾವಂತ ವಿದ್ಯಾರ್ಥಿಗಳ ಸೃಷ್ಟಿ ಕಾಲದ ಬೇಡಿಕೆ-ಎ.ವಿ. ಉಸ್ತಾದ್

ಉಪ್ಪಿನಂಗಡಿ: ಮಕ್ಕಳಿಗೆ ಧಾರ್ಮಿಕ, ಲೌಕಿಕ ಶಿಕ್ಷಣವನ್ನು ಸಮಾನವಾಗಿ ನೀಡಿ ಅವರನ್ನು ನಾಡಿನ ಪ್ರತಿಭಾವಂತ ಪ್ರಜೆಗಳಾಗಿ ರೂಪಿಸುವುದು ಕಾಲಘಟ್ಟದ ಆವಶ್ಯವಾಗಿದೆ ಎಂದು ಕೇರಳದ ಖ್ಯಾತ ಶಿಕ್ಷಣ ತಜ್ಞ, ನಂದಿ ಜಾಮಿಯಾ ದಾರುಸ್ಸಲಾಂ ಕಾಲೇಜ್‌ನ ಮುಖ್ಯಸ್ಥ ಶೈಖುನಾ ಎ.ವಿ. ಉಸ್ತಾದ್ ಹೇಳಿದರು.

ಅವರು ಕೆಮ್ಮಾರ ಶಕ್ತಿ ನಗರ ಶಂಸುಲ್ ಉಲಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧೀನದ ದಅವಾ ಮತ್ತು ಶರೀಅತ್ ಕಾಲೇಜ್‌ನಲ್ಲಿ ಮರ್ಹೂಂ ಡಾ. ಶಾಹ್ ಉಸ್ತಾದ್ ಸ್ಮಾರಕ ಬೋಜನಾ ಗೃಹಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಫಾಳಿಲಾ ಮಹಿಳಾ ಶರೀಅತ್ ಮತ್ತು ಪಿ.ಯು. ಕಾಲೇಜ್‌ನ ಪ್ರಸಕ್ತ ಸಾಲಿನ ತರಗತಿಯನ್ನು ಎ.ವಿ. ಉಸ್ತಾದ್ ಉದ್ಘಾಟಿಸಿದರು.

ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಮ್ಮಾರದ ದಅವಾ ಹಾಗೂ ಶರೀಅತ್ ವಿಭಾಗದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು, ಈ ಸಂಸ್ಥೆ ಬಲಪಡಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಕೋಶಾಧಿಕಾರಿ ಹಸೈನಾರ್ ಹಾಜಿ ಕೊಯಿಲ, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಸಂಸ್ಥೆಯ ಪ್ರಾಧ್ಯಾಪಕ  ಹನೀಫ್ ದಾರಿಮಿ ನೆಕ್ಕಿಲಾಡಿ, ಅಬ್ದುಲ್ ಹಮೀದ್ ದಾರಿಮಿ ಆತೂರು, ಸಿದ್ದಿಕ್ ದಾರಿಮಿ ಪನ್ಯ, ಸಂಸ್ಥೆಯ ಜೊತೆ ಕಾರ್ಯದರ್ಶಿ ಹುಸೈನ್ ಬಡಿಲ, ಸದಸ್ಯ ಕಲಂದರ್, ಸ್ಥಳೀಯ ಮದ್ರಸ ಕಮಿಟಿ ಅಧ್ಯಕ್ಷ ಎನ್. ಎ. ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.

ಸಮಸ್ತ ಹನೀಫಿ ಉಲಮಾ ಸಂಘಟನೆಯ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ, ಮದ್ರಸ ಅಧ್ಯಾಪಕ ಅಬ್ದುಲ್ ರಝಾಕ್ ದಾರಿಮಿ ವಂದಿಸಿದರು.

LEAVE A REPLY

Please enter your comment!
Please enter your name here