ಎಸೆಸ್ಸೆಲ್ಸಿ ಪರೀಕ್ಷೆ:ಸುದಾನ ಪ್ರೌಢಶಾಲೆಗೆ ಶೇ.99.20 ಫಲಿತಾಂಶ

0

ಪುತ್ತೂರು: 2021-22ನೇ ಸಾಲಿನ ಶೈಕ್ಷಣಿಕ ಸಾಲಿನ ಫಲಿತಾಂಶವು ಪ್ರಕಟಗೊಂಡಿದ್ದು, ನೆಹರುನಗರದ ಸುದಾನ ಪ್ರೌಢಶಾಲೆಗೆ ಶೇ.99.20 ಫಲಿತಾಂಶ ಲಭಿಸಿದ್ದು, ಶಾಲೆಯ ವಿದ್ಯಾರ್ಥಿನಿ ಕೊಂಬೆಟ್ಟು ನಿವಾಸಿ ರೂಪೇಶ್ ಶೇಟ್ ಹಾಗೂ ಪವಿತ್ರಾರವರ ಪುತ್ರಿ ಕೆ.ಅರ್ಪಿತಾ ಶೇಟ್‌ರವರು 624 ಅಂಕಗಳನ್ನು ಗಳಿಸಿ ಶಾಲೆಯಲ್ಲಿ ಅಗ್ರಸ್ಥಾನಿಯಾಗಿದ್ದು, ರಾಜ್ಯದಲ್ಲಿ ದ್ವಿತೀಯ ರ್‍ಯಾಂಕ್‌ನ್ನು ಗಳಿಸಿಕೊಂಡಿದ್ದಾರೆ.

ಒಟ್ಟು 125ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಇದರಲ್ಲಿ 67 ಮಂದಿ ಹುಡುಗರು ಹಾಗೂ 58 ಮಂದಿ ಹುಡುಗಿಯರು ಆಗಿರುತ್ತಾರೆ. ಒಟ್ಟು 37 ಮಂದಿ ವಿದ್ಯಾರ್ಥಿಗಳು 600 ಅಂಕಗಳಿಗಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದ್ದಾರೆ. ಇದರಲ್ಲಿ ನೆಹರುನಗರ ನಿವಾಸಿ ಸಿ.ಆರ್ ಜಗದೀಶ ಹಾಗೂ ರೇಖಾಮಣಿ ಪಿ.ರವರ ಪುತ್ರಿ ಧನ್ವಿಣಿ ಜೆ, ಬನ್ನೂರು ನಿವಾಸಿ ಮೊಹಮ್ಮದ್ ಇಕ್ಬಾಲ್ ಹಾಗೂ ರಮ್ಲತ್ ಎಸ್.ರವರ ಪುತ್ರಿ ಫಾತಿಮತ್ ಇರ್ಫಾನಾ, ಉರ್ಲಾಂಡಿ ನಿವಾಸಿ ಎಂ.ಮನೋಹರ್ ಶೆಟ್ಟಿ ಹಾಗೂ ಗಾಯತ್ರಿ ಎಂ.ರವರ ಪುತ್ರಿ ತನ್ವಿತಾ ಎಂ.ಶೆಟ್ಟಿರವರು ತಲಾ 623 ಅಂಕಗಳನ್ನು ಗಳಿಸಿ ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರೆ, ರಾಜ್ಯದಲ್ಲಿ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಬೊಳ್ವಾರು ನಿವಾಸಿ ಯು.ಪಾಂಡುರಂಗ ಕಿಣಿ ಹಾಗೂ ಯು.ಪ್ರತಿಭಾ ಪಿ.ಕಿಣಿರವರ ಪುತ್ರಿ ಯು.ಪ್ರತೀಕ್ಷಾ ಕಿಣಿರವರು 622 ಅಂಕಗಳನ್ನು ಗಳಿಸಿ ಶಾಲೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದು, ರಾಜ್ಯದಲ್ಲಿ ಚತುರ್ಥ ಸ್ಥಾನವನ್ನು ಗಳಿಸಿದ್ದಾರೆ.

86 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 36 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಈರ್ವರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here