ಹಾರಾಡಿಯಲ್ಲಿ ಪುತ್ತೂರು ಡಯಾಗ್ನಾಸ್ಡಿಕ್ ಲ್ಯಾ ಬೋರೇಟರಿಯ ದ್ವಿತೀಯ ಶಾಖೆ ಶುಭಾರಂಭ

0

ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಜಿ.ಎಲ್ ಕಾಂಪ್ಲೆಕ್ಸ್ ಬಳಿ ಕಾರ್ಯಾಚರಿಸುತ್ತಿರುವ ಪುತ್ತೂರು ಡಯಾಗ್ನಾಸ್ಟಿಕ್ ಲ್ಯಾಬೋರೇಟರಿ ಇದರ ದ್ವಿತೀಯ ಶಾಖೆಯು ಹಾರಾಡಿ ಅನ್ನಪೂರ್ಣೇಶ್ವರಿ ಕಾಂಪ್ಲೆಕ್ಸ್ ನಲ್ಲಿ ಮೇ 19 ರಂದು ಶುಭಾರಂಭಗೊಂಡಿತು.


ಮಾಯಿದೆ ದೇವುಸ್ ಚರ್ಚ್ ಪುತ್ತೂರು ಇಲ್ಲಿನ ಸಹಾಯಕ ಧರ್ಮಗುರುಗಳಾದ ವಂ|ಕೆವಿನ್ ಲಾರೆನ್ಸ್ ಡಿ”ಸೋಜರವರು ಪವಿತ್ರ ಜಲ ಸಿಂಪಡಿಸಿ ಆಶೀರ್ವಚನಗೈಯ್ದರು. ಆಯುರ್ವೇದಿಕ್ ಸ್ಪೆಷಲಿಸ್ಟ್ ಡಾ.ನಾರಾಯಣ ಅಸ್ರ್ರರವರು ಲ್ಯಾಬೋರೇಟರಿಯನ್ನು ಉದ್ಘಾಟಿಸಿ, ಸಂಸ್ಥೆಯು ಯಶಸ್ಸು ಪಡೆಯಲೆಂದು ಶುಭ ಹಾರೈಸಿದರು.

ಪುತ್ತೂರು ಡಯಾಗ್ನಾಸ್ಡಿಕ್ ಲ್ಯಾ ಬೋರೇಟರಿಯ ಮುಖ್ಯಸ್ಥ ನೋಯಲ್ ಡಿ’ಸೋಜರವರು ಸ್ವಾಗತಿಸಿ,ಇಲ್ಲಿ ರಕ್ತ, ಕಫ, ಮಲ, ಮೂತ್ರ ಪರೀಕ್ಷೆ ಮಾಡಲಾಗುವುದು, ಸಾರ್ವಜನಿಕರು ಸಹಕರಿಸಿ ಎಂದು ಹೇಳಿ ವಂದಿಸಿದರು. ಈ ಸಂದರ್ಭದಲ್ಲಿ ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ, ಪುತ್ತೂರು ಡಯಾಗ್ನಾಸ್ಡಿಕ್ ಲ್ಯಾ ಬೋರೇಟರಿಯ ಮುಖ್ಯಸ್ಥ ನೋಯಲ್ ಡಿ’ಸೋಜರವರ ಪತ್ನಿ ಬ್ಯೂಲ ಡಿ’ಸೋಜ, ಪುತ್ರ ನೀಲ್ ಡಿ’ಸೋಜ, ಚೇತನಾ ಆಸ್ಪತ್ರೆಯ ಸಿಬ್ಬಂದಿ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here