ಎಎಲ್‌ಎಸ್ ಕ್ಲಾಸಿಕ್ ಪುತ್ತೂರು ವತಿಯಿಂದ ಸೌದಿ ಅರೇಬಿಯಾದ ಜಿದ್ದಾದಲ್ಲಿ ತುಳುನಾಡು ಪ್ರೀಮಿಯರ್ ಲೀಗ್ 2ನೇ ಸೀಸನ್ ಪಂದ್ಯಾಕೂಟಕ್ಕೆ ಚಾಲನೆ

0

ಪುತ್ತೂರು: ಎಎಲ್‌ಎಸ್ ಕ್ಲಾಸಿಕ್ ಪುತ್ತೂರು ವತಿಯಿಂದ ತುಳುನಾಡು ಪ್ರೀಮಿಯರ್ ಲೀಗ್ ಎರಡನೇ ಸೀಸನ್ ಸಿಕ್ಸ್ ಡಾಟ್ ಟ್ರೋಫಿ ಕ್ರೀಡಾಕೂಟವು ಸೌದಿ ಅರೇಬಿಯಾದ ಜಿದ್ದಾದಲ್ಲಿ ಮೇ.13ರಂದು ಪ್ರಾರಂಭಗೊಂಡಿತು.

 

ಶಾಹುಲ್ ಹಮೀದ್ ಮಾಲಕತ್ವದ ಈಸ್ಸಾ ಇಲೆವೆನ್ ಉಡುಪಿ, ಜೇಸನ್ ಡಿಕೋಸ್ಟಾ ಮಾಲಕತ್ವದ ಕುಡ್ಲ ಬುಲ್ಸ್, ಖಲಂದರ್ ಮಾಲಕತ್ವದ ದೋಸ್ತ್ ಕ್ರಿಕೆಟರ್ಸ್ ಕಂಚಿನಡ್ಕ ಮತ್ತು ಮೊದಲ ಸೀಸನ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ಸರ್ಫರಾಝ್ ಮಾಲಕತ್ವದ ನೈಟ್ ರೈಡರ್ಸ್ ಕಂಬಾಡ್ ತಂಡಗಳು ಸಾಥ್ ನೀಡಿತು.

ಉದ್ಘಾಟನಾ ಸಮಾರಂಭದಲ್ಲಿ ಗ್ರೇಲೈನ್ ಕಾಂಟ್ರಾಕ್ಟಿಂಗ್ ಕಂಪೆನಿ ಮಾಲಕರಾದ ಝೈನುದ್ದೀನ್ ಮುನ್ನೂರು, ಅಬ್ದುಲ್ ಸಲೀಂ ಘಣಿ, ಇರ್ಶಾದ್ ಸಿಕ್ಸ್ ಡಾಟ್ಸ್, ರಯೀಸ್ ಅಹ್ಮದ್ ಮತ್ತು ಬಾಬು ಸತ್ತಾರ್ ಮೊದಲಾದವರು ಬೃಹತ್ ಸಿಕ್ಸ್ ಡಾಟ್ಸ್ ಟ್ರೊಫಿಯನ್ನು ಅನಾವರಣಗೊಳಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕ್ಲಾಸಿಕ್ ಪುತ್ತೂರು ಇದರ ಮಾಲಕ ಹುರೈಸ್ ಪುತ್ತೂರು, ಎ.ಎಲ್.ಎಸ್ ಮ್ಯಾನೇಜರ್ ಇಫ್ರಾಝ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here