ಡಾ| ಎಂ.ಎನ್. ರಾಜೇಂದ್ರ ಕುಮಾರ್‌ರವರಿಗೆ ಔಟ್ ಸ್ಟ್ಯಾಂಡಿಂಗ್ ಲೀಡರ್ ಶಿಪ್ ಅವಾರ್ಡ್ ಪ್ರದಾನ

0

ಮಂಗಳೂರು : ಇನ್ಸ್ಟಿಟ್ಯೂಟ್ ಅಫ್ ಎಕನಾಮಿಕ್ ಸ್ಟಡೀಸ್ ನವದೆಹಲಿ ಇದರ ವತಿಯಿಂದ ನವದೆಹಲಿಯಲ್ಲಿ ನಡೆದ ನೆಟ್ ವರ್ಕಿಂಗ್ ನೆಕ್ಸ್ಟ್- ಇಂಡಸ್ಟ್ರಿ ಇನ್ ಸಿಗ್ನಿಯಾ ಟಟ ಕಾನ್ಫರೆನ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ `ಸಹಕಾರ ರತ್ನ’ ಡಾ| ಎಂ.ಎನ್ ರಾಜೇಂದ್ರ ಕುಮಾರ್‌ರವರಿಗೆ ಪ್ರತಿಷ್ಠಿತ ಔಟ್ ಸ್ಟ್ಯಾಂಡಿಂಗ್ ಲೀಡರ್ ಶಿಪ್ ಅವಾರ್ಡ್‌ನ್ನು ಪ್ರದಾನ ಮಾಡಲಾಯಿತು.
ನವದೆಹಲಿಯ ಇಂಡಿಯಾ ಹಬಿಟಾಟ್ ಸೆಂಟರ್ ಸಿಲ್ವರ್ ಓಕ್ ಹಾಲ್‌ನಲ್ಲಿ ಮೇ ೧೯ರಂದು ನಡೆದ ಕಾನ್ಫರೆನ್ಸ್‌ನಲ್ಲಿ ಅಸ್ಸಾಂ ಗವರ್ನರ್ ಪ್ರೊ| ಎಚ್.ಇ. ಜಗದೀಶ್ ಮುಖಿರವರಿಂದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಔಟ್ ಸ್ಟ್ಯಾಂಡಿಂಗ್ ಲೀಡರ್ ಶಿಪ್ ಅವಾರ್ಡ್ ಜೊತೆಗೆ ಗೋಲ್ಡ್ ಮೆಡಲ್ ಸ್ವೀಕರಿಸಿದರು.

ಡಾ| ರಾಜೇಂದ್ರ ಕುಮಾರ್ ಅವಾರ್ಡ್ ಪಡೆದುಕೊಳ್ಳುತ್ತಿರುವುದು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂಡಿಯನ್ ಪೊಡಿಯಾಟ್ರಿ ಅಸೋಸಿಯೇಷನ್ ಅಧ್ಯಕ್ಷ ಡಾ| ಎ.ಪಿ.ಎಸ್.ಸುರಿ , ಸಾರ್ವಜನಿಕ ಉದ್ಯಮಗಳ ಸ್ಥಾಯಿ ಸಮ್ಮೇಳನದ ಡೈರೆಕ್ಟರ್ ಜನರಲ್ ಡಾ.ಅತುಲ್ ಸೊಬಟಿ, ಇಂಡಿಯನ್ ಇಂಧನ ಅಭಿವೃದ್ಧಿ ಏಜೆನ್ಸಿಸ್ ಅಧ್ಯಕ್ಷ ಕೆ.ಎಸ್.ಪೋಪ್ಲಿ , ಹಿಟಾಚಿ ರೈಲ್ ಎಸ್ ಟಿಎಸ್ ಇಂಡಿಯಾ ಇದರ ನಿರ್ದೇಶಕ ಡಾ.ಮನೋಜ್ ಕುಮಾರ್ , ಅಹ್ಲುವಾಲಿಯಾ ಕಂಟ್ರಾಕ್ಟ್ ಇಂಡಿಯಾ ಇದರ ಅಧ್ಯಕ್ಷ ಬಿಕ್ರಮ್ ಜಿತ್ ಅಹ್ಲುವಾಲಿಯಾ ನವದೆಹಲಿಯ ಇನ್ಸ್ಸಿ ಟ್ಯೂಟ್ ಅಫ್ ಎಕನಾಮಿಕ್ ಸ್ಟಡೀಸ್ ಸಂಸ್ಥೆಯ ಅಧ್ಯಕ್ಷೆ/ಕಾರ್ಯನಿರ್ವಾಹಕ ನಿರ್ದೇಶಕಿ ಸಂಗೀತಾ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೋಟ್ಟು, ಹಾಗೂ ಜಯಪ್ರಕಾಶ್ ಉಪಸ್ಥಿತರಿದ್ದರು.

ಬ್ಯಾಂಕಿನ ಪ್ರಗತಿಯ ರೂವಾರಿ: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆಗಾಗಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡಿರುವ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಜಿಲ್ಲೆಯ ಸಹಕಾರ ರಂಗದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ತರುವುದರ ಜೊತೆಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಸರ್ವಾಂಗೀಣ ಪ್ರಗತಿಯ ರೂವಾರಿ ಆಗಿದ್ದಾರೆ. ೧೯೯೪ರಿಂದ ಎಸ್‌ಸಿಡಿಸಿಸಿ ಬ್ಯಾಂಕ್ ನ್ನು ಸತತ ೨೮ ವರ್ಷಗಳ ಸುದೀರ್ಘ ಅವಧಿಯಲ್ಲಿ ಮುನ್ನಡೆಸುತ್ತಿರುವ ಇವರು, ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಉತ್ಕೃಷ್ಟ ಬ್ಯಾಂಕಿಂಗ್ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಶ್ರಮ ವಹಿಸಿದ್ದಾರೆ.

ಬ್ಯಾಂಕಿಂಗ್ ಸೇವೆಯಲ್ಲಿ ಹೊಸ ಆವಿಷ್ಕಾರ : ಹಲವಾರು ವಿನೂತನ ಯೋಜನೆಗಳ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್ ನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರದ್ದಾಗಿದೆ. ಸಹಕಾರಿ ರಂಗದಲ್ಲಿ ಹೊಸ ಹೊಸ ಅವಿಷ್ಕಾರದೊಂದಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಾ , ಎಸ್‌ಸಿಡಿಸಿಸಿ ಬ್ಯಾಂಕ್ ನ್ನು ಜನಸಾಮಾನ್ಯರ ಬ್ಯಾಂಕನ್ನಾಗಿ ರೂಪಿಸುವ ಮೂಲಕ ಸಹಕಾರಿ ರಂಗಕ್ಕೆ ಹೊಸ ಆಯಾಮವನ್ನು ಇವರು ತಂದುಕೊಟ್ಟಿದ್ದಾರೆ. ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ಇವರದ್ದು. ಮೊಬೈಲ್ ಬ್ಯಾಂಕ್‌ನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು.

ಪ್ರಶಸ್ತಿಗಳ ಸರಮಾಲೆ : ರಾಜೇಂದ್ರ ಕುಮಾರ್ ಅವರು ಅಧ್ಯಕ್ಷರಾದ ಬಳಿಕ ಎಸ್‌ಸಿಡಿಸಿಸಿ ಬ್ಯಾಂಕಿಗೆ ೧೯ ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ ೧೮ ಬಾರಿ ನಬಾರ್ಡ್ ಪ್ರಶಸ್ತಿ, ೨ ಬಾರಿ ಬ್ಯಾಂಕಿಂಗ್ ಪ್ರೋಂಟಿಯರ್ಸ್ ಪ್ರಶಸ್ತಿ ಹಾಗೂ ೨ ಬಾರಿ ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ ಕೂಡ ಲಭಿಸಿದೆ. ಮಾತ್ರವಲ್ಲ ಇವರ ಸಾಮಾಜಿಕ ಸ್ಪಂದನೆಯ ಕಾರ್ಯಗಳನ್ನು ಪರಿಗಣಿಸಿ ಇವರಿಗೆ ಹಲವಾರು ರಾಷ್ಟ್ರೀಯ – ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯ ‘ ಗೌರವ ಡಾಕ್ಟರೇಟ್ ‘ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸರಕಾರದಿಂದ ‘ ಸಹಕಾರ ರತ್ನ ‘ ಪ್ರಶಸ್ತಿಯೂ ಲಭಿಸಿದೆ. ಮಾತ್ರವಲ್ಲ `ಸಹಕಾರ ವಿಶ್ವ ಬಂಧುಶ್ರೀ’, `ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ’, `ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ’, `ಬೆಸ್ಟ್ ಚೇರ್ ಮೆನ್ ನ್ಯಾಷನಲ್ ಎವಾರ್ಡ್’, `ನ್ಯಾಷನಲ್ ಎಕ್ಸ್‌ಲೆನ್ಸ್ ಎವಾರ್ಡ್’, `ಔಟ್ ಸ್ಟೆಂಡಿಂಗ್ ಗ್ಲೋಬಲ್ ಲೀಡರ್ ಶಿಪ್ ಎವಾರ್ಡ್ -೨೦೧೯’, `ಬಹು ಪ್ರಭಾವಶಾಲಿ ಸಹಕಾರ ನಾಯಕ -೨೦೧೯ರ ಪ್ರಶಸ್ತಿ’ `ಇಂಟರ್ ನ್ಯಾಷನಲ್ ಐಕಾನ್ ಅವಾರ್ಡ್ – ೨೦೨೧’ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ನೀಡಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ರಾಷ್ಟ್ರೀಯ , ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಸಂದಿವೆ.

LEAVE A REPLY

Please enter your comment!
Please enter your name here