ಎಸ್‌ಎಸ್‌ಎಲ್‌ಸಿ: ಆಲಂಕಾರು ಶ್ರೀ ದುರ್ಗಾಂಬಾಕ್ಕೆ ಶೇ.80.4 ಫಲಿತಾಂಶ

0

ಆಲಂಕಾರು: 2021-22ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶೇ.80.4 ತೇರ್ಗಡೆ ಫಲಿತಾಂಶ ಬಂದಿದೆ.


ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 56 ವಿದ್ಯಾರ್ಥಿಗಳ ಪೈಕಿ 45 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 80.4 ಫಲಿತಾಂಶ ಬಂದಿದೆ. 8 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 9 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸನತ್ 595, ಧನ್ಯಶ್ರೀ 564, ಪ್ರಥಮ್ ಕುಮಾರ್ 564, ಅಭಿಲಾಷಾ 552, ಹರ್ಷಿತಾ 547, ಅರ್ಚನಾ 541, ಶ್ರೇಯಾ 537, ಮನೀಶ್ 533, ಆಯಿಷತ್ ಶಂಶೀರಾ 510, ಮೈತ್ರಿ 507, ಹರ್ಷಿತ್ ಬಿ.ಎನ್. 506, ಲಿಖಿನ್ ಕುಮಾರ್ 501, ರಾಮ್‌ಪ್ರಸಾದ್ 501 ಅಂಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here