ಕೆದಂಬಾಡಿ: ಫಿಲೋಮಿನಾ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

0

ಪುತ್ತೂರು:ಹಳ್ಳಿಯತ್ತ ನಮ್ಮ ಚಿತ್ತ ಎಂಬ ಘೋಷವಾಕ್ಯದೊಂದಿಗೆ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರವು ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕೆದಂಬಾಡಿಯಲ್ಲಿ ಉದ್ಘಾಟನೆಗೊಂಡಿತು.


ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಇದರ ಅದ್ಯಕ್ಷರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ಜೈಶಂಕರ್ ರೈ ಬೆದ್ರುಮಾರುರವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿ, ಎನ್.ಎಸ್.ಎಸ್ ಒಂದು ರಾಷ್ಟ್ರೀಯ ಯೋಜನೆಯಾಗಿದ್ದು, ಇದು ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾದದ್ದು ಅಲ್ಲ. ರಾಜಕೀಯ ಅಭಿಮತಗಳಿಂದಲೂ ಮುಕ್ತವಾಗಿದೆ. ರಾಷ್ಟ್ರಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದದ್ದು, ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿದ್ಯಾ ಸಂಸ್ಥೆಗೆ ಕರ್ತವ್ಯ ಬದ್ಧತೆಯಿಂದ ತಮ್ಮ ಕೊಡುಗೆ ನೀಡಬೇಕು ಮತ್ತು ಜನಪರ ಕಾಳಜಿಯ ಕೆಲಸವನ್ನು ಮಾಡುವ ಅಭಿರುಚಿಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಢಿಸಿಕೊಳ್ಳಬೇಕು. ಇಂಥ ಉದಾತ್ತ ಗುಣವನ್ನು ಪ್ರೇರಿಸುವಲ್ಲಿ ಎನ್‌ಎಸ್‌ಎಸ್ ಕೊಡುಗೆ ಮುಖ್ಯವೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಡಿ.ವೈ.ಎಸ್.ಪಿ ಶಾಂತರಾಮ ರೈ ಮುಂಡಲಾಗುತ್ತು, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ರತನ್ ರೈ ಕುಂಬ್ರ, ಶಾಲೆಯ ಮುಖ್ಯ ಶಿಕ್ಷಕಿ  ನಾಗವೇಣಿ ಕೆ. ವಿದ್ಯಾರ್ಥಿಗಳ ಜೀವನಕ್ಕೆ ಮತ್ತು ಎನ್‌ಎಸ್‌ಎಸ್ ಶಿಬಿರಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಊರಿನ ಹಲವು ಗಣ್ಯರು, ಶಿಬಿರದ ಇನ್ನೋರ್ವ ಯೋಜನಾಧಿಕಾರಿ  ಪುಷ್ಪಏನ್ ಮತ್ತು ಸಹ ಶಿಬಿರಾಧಿಕಾರಿಗಳಾದ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಸುವರ್ಣ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜೇಸ್ಲಿನ್ ಡಿ’ಕುನ್ಹಾ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಾಸುದೇವ ಎನ್ ಸ್ವಾಗತಿಸಿ, ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾರಾಧಾಕೃಷ್ಣ ಗೌಡ ವಂದಿಸಿದರು. ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.

ಎನ್‌ಎಸ್‌ಎಸ್ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿ ಸಾಮಾಜಿಕ ಸಹಿಷ್ಣುತೆಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಪಾಠಕ್ಕೆ ಎಷ್ಟು ಗಮನ ಹರಿಸಬೆಕೋ, ಅಷ್ಟೇ ಗಮನವನ್ನು ವ್ಯಕ್ತಿತ್ವ ರೂಪಿಸುವ ಪಠ್ಯೇತರ ಚಟುವಟಿಕೆಗಳ ಕಡೆಗೂ ನೀಡಬೇಕು. ವಿದ್ಯಾರ್ಥಿ ಜೀವನವೆನ್ನುವುದು ಭವಿಷ್ಯದ ವ್ಯಕ್ತಿತ್ವವನ್ನು ರೂಪಿಸುವ ಕ್ಷಣಗಳು ಮತ್ತು ಜ್ಞಾನ ಹಾಗೂ ಸಂಸ್ಕಾರದ ವೃದ್ಧಿಗೆ ಆಸ್ಪದವಾಗಿದೆ. ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋ, ಪ್ರಾಂಶುಪಾಲರು, ಫಿಲೋಮಿನಾ ಕಾಲೇಜು

LEAVE A REPLY

Please enter your comment!
Please enter your name here