ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್ ಪಾಸ್ ರೂ.13.60 ಕೋಟಿಯ ಕಾಮಗಾರಿಗೆ ಗುದ್ದಲಿ ಪೂಜೆ

0

  • ನವೀಕೃತ ವಸತಿ ಗೃಹ ಉದ್ಘಾಟನೆ, ಸಾಧಕರಿಗೆ ಸನ್ಮಾನ

 

ಪುತ್ತೂರು: ಬಹು ಕಾಲದ ಬೇಡಿಕೆಯಂತೆ ಮೈಸೂರು ವಿಭಾಗದ ನೈರುತ್ಯ ರೈಲ್ವೇ, ಪುತ್ತೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರೈಲ್ವೇ ಇಲಾಖೆ ಮತ್ತು ರಾಜ್ಯ ಸರಕಾರದ ಮೂಲಭೂತ ಸೌಕರ್ಯ ಇಲಾಖೆಯಿಂದ 50-50 ಅನುದಾನದಲ್ಲಿ ರೂ.13.60ಕೋಟಿಯಲ್ಲಿ ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್ ಪಾಸ್ ಕಾಮಗಾರಿಗೆ ಮೇ.21 ಕ್ಕೆ ಶಿಲಾನ್ಯಾಸ ನಡೆಯಿತು.

 

ಆರಂಭದಲ್ಲಿ ಎಪಿಎಂಸಿ ರೈಲ್ವೇ ಗೇಟ್ ಬಳಿ ಸಂಸದ ನಳಿನ್‌ ಕುಮಾರ್ ಕಟೀಲ್ ಗುದ್ದಲಿ ಪೂಜೆ ನೆರವೇರಿಸಿದರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವ ಎಸ್.ಅಂಗಾರ ತೆಂಗಿನ ಕಾಯಿ ಒಡೆದು ಶುಭಹಾರೈಸಿದರು. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ನವೀಕೃತ ಅತಿಥಿಗೃಹ ಉದ್ಘಾಟಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿವಿಧ ಕಾಮಗಾರಿಗಳ ನಾಮಫಲಕ ಅನಾವರಣ ಮಾಡಿದರು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ,ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸಹಾಯಕ ಕಮೀಷನರ್ ಗಿರೀಶ್ ನಂದನ್, ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್,  ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿದರು. ಎಪಿಎಂಸಿ ಸದಸ್ಯರಾದ ತೀರ್ಥಾನಂದ ದುಗ್ಗಲ, ಬಾಲಕೃಷ್ಣ ಬಾಣಜಾಲು, ಮೇದಪ್ಪ ಗೌಡ, ವಿ ಹೆಚ್ ಅಬ್ದುಲ್ ಶಕೂರು, ಪುಲಸ್ತ್ಯಾ ರೈ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ತ್ರಿವೇಣಿ ಪೆರ್ವೋಡಿ, ಕುಶಾಲಪ್ಪ ಗೌಡ, ನಾಮನಿರ್ದೇಶಿತ ಸದಸ್ಯ ಬಾಲಕೃಷ್ಣ ಜೋಯಿಷಾ, ಮೋಹನಾಂಗಿ ಅತಿಥಿಗಳನ್ನು ಗೌರವಿಸಿದರು. ಎಪಿಎಂಸಿ ಸದಸ್ಯ ಕೃಷ್ಣಕುಮಾರ್ ರೈ, ಆದರ್ಶ ಆಸ್ಪತ್ರೆಯ ಡಾ.ಎಂ ಕೆ ಪ್ರಸಾದ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ನಗರಸಭಾ ಸ್ಥಳೀಯ ಸದಸ್ಯ ಪ್ರೇಮ್ ಕುಮಾರ್, ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ಚನಿಲ ತಿಮ್ಮಪ್ಪ ಶೆಟ್ಟಿ , ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್    ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸೇರಿದಂತೆ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ
ಪದ್ಮಶ್ರೀ ಪುರಸ್ಕೃತರಾದ ಮಹಾಲಿಂಗ ನಾಯ್ಕ್ ಅಮೈ, ಹರೇಕಳ ಹಾಜಬ್ಬ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ. ಸವಣೂರು ಸೀತಾರಾಮ ರೈ, ಕೃಷಿ ಸಾಹಸಿ ಲಕ್ಷ್ಮೀ ಎರ್ಕಮನೆ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here