ಎಸ್ ಡಿ ಪಿ ಐ ವಿಟ್ಲ ಬ್ಲಾಕ್ ಸಮಿತಿಗೆ ಆಯ್ಕೆ

0

  • ಅಧ್ಯಕ್ಷರಾಗಿ ಬದ್ರುದ್ದೀನ್ ಪುಣಚ, ಕಾರ್ಯದರ್ಶಿಯಾಗಿ ಫಾರೂಕ್ ತವಕ್ಕಲ್ ಕಬಕ

ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಟ್ಲ ಬ್ಲಾಕ್ ಸಮಿತಿಗೆ ಪದಾಧಿಕಾರಿಗಳಿಗೆ ಚುನಾವಣೆಯು ವಿಟ್ಲದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.

 

ಅಧ್ಯಕ್ಷರಾಗಿ ಬದ್ರುದ್ದೀನ್ ಪುಣಚ, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ತವಕ್ಕಲ್ ಕಬಕ, ಉಪಾಧ್ಯಕ್ಷರಾಗಿ  ಸಿದ್ದೀಕ್ ಉರಿಮಜಲು, ಜೊತೆ ಕಾರ್ಯದರ್ಶಿಯಾಗಿ ಸಫ್ವಾನ್ ಮರೆಕ್ಕಣಿ ಕೋಶಾಧಿಕಾರಿಯಾಗಿ ರಫೀಕ್ ಮರೆಕ್ಕಣಿ ಆಯ್ಕೆಯಾದರು. ಚುನಾವಣೆಯನ್ನು ಜಿಲ್ಲಾ ಸಮಿತಿ ಸದಸ್ಯರಾದ ಖಾದರ್ ಪರಂಗಿಪೇಟೆ ರವರು ನಡೆಸಿದರು. ಎಸ್ ಡಿ ಪಿ ಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಪ್ರಧಾನ ಕಾರ್ಯದರ್ಶಿ ರಹಿಮಾನ್ ಪುರುಷರಕಟ್ಟೆ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿಗಳಾದ ಶಾಕಿರ್ ಅಳಕೆಮಜಲು, ವಿಟ್ಲ ಡಿವಿಶನ್ ಅಧ್ಯಕ್ಷರಾದ ಶಾಫಿ ಮಾಳಿಗೆ, ಕಾರ್ಯದರ್ಶಿ ನಝೀರ್ ಪುಣಚ, ಕಬಕ ಡಿವಿಶನ್ ಕಾರ್ಯದರ್ಶಿ ಸಜ್ಜದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಮುನೀರ್ ಎಂ ಕೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here