ಶಾಂತಿನಗರ ಸರಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ 93ಶೇಕಡಾ ಫಲಿತಾಂಶ

0

  • 9ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ 
  • 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಗೆ 93.10 ಶೇಕಡಾ ಫಲಿತಾಂಶ ಲಭಿಸಿದೆ.

 


ಪರೀಕ್ಷೆಗೆ ಹಾಜರಾಗಿದ್ದ 32 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು ಶಾಲೆಗೆ ಎ ಗ್ರೇಡ್ ದೊರೆತಿದೆ. ಒಂಬತ್ತು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಈರ್ವರು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಈರ್ವರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಬೇರಿಕೆ ನಿವಾಸಿ ನಾರಾಯಣ ನಾಯ್ಕ ಮತ್ತು ಮಮತಾ ದಂಪತಿಯ ಪುತ್ರಿ ಮಾನಸ 612 ಅಂಕ, ಶಾಂತಿನಗರ ನಿವಾಸಿಗಳಾದ ವಾಮನ ನಾಯ್ಕ ಮತ್ತು ವಿಮಲಾರವರ ಪುತ್ರ ಸುಜಿತ್ ವಿ. 604 ಅಂಕ, ಕೋಡಿಂಬಾಡಿಯ ವೆಂಕಪ್ಪ ನಾಯ್ಕ್ ಮತ್ತು ಮನೋರಮಾರವರ ಪುತ್ರ ಅಶ್ವಿನ್ ವಿ. ನಾಯ್ಕ್ 589 ಅಂಕ, ನೆಕ್ಕಿಲಾಡಿಯ ಪ್ರಭಾಕರ ನಾಯಕ್ ಮತ್ತು ಶಾರದಾರವರ ಪುತ್ರಿ ಪ್ರತೀಕ್ಷಾ 586 ಅಂಕ, ನೆಕ್ಕಿಲಾಡಿಯ ನಾರಾಯಣ ನಾಯ್ಕ್ ಮತ್ತು ಅಕ್ಕಮ್ಮರವರ ಪುತ್ರಿ ನವ್ಯ ಜಿ 570 ಅಂಕ, ಸೇಡಿಯಾಪು ನಿವಾಸಿಗಳಾದ ಐತ್ತಪ್ಪ ಮೂಲ್ಯ ಮತ್ತು ಉಮಾವತಿರವರ ಪುತ್ರ ಹರ್ಷರಾಜ್ 554 ಅಂಕ, ಬೆಳ್ಳಿಪ್ಪಾಡಿಯ ಜಯರಮ ಗೌಡ ಮತ್ತು ಶಿವಮ್ಮರವರ ಪುತ್ರಿ ಮೇಘ 550 ಅಂಕ, ನೆಕ್ಕಿಲಾಡಿಯ ಅಶ್ರಫ್ ಮತ್ತು ಅಸ್ಯಮ್ಮರವರ ಪುತ್ರಿ ಸಫ್‌ನಾಝ್ 535 ಅಂಕ, ನೆಕ್ಕಿಲಾಡಿಯ ಸುರೇಶ್ ಮತ್ತು ಅನುರಾಧಾರವರ ಪುತ್ರಿ ಅಕ್ಷತಾರವರು 534 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here