ಪುತ್ತೂರು ವಿಭಾಗದ ಅಂಚೆ ಇಲಾಖೆಯ ಸ್ಥಾಪನಾ ದಿನಾಚರಣೆ

0

ಪುತ್ತೂರು: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ 43ನೇ ಸ್ಥಾಪನಾ ದಿನಾಚರಣೆ ಮೇ 20ರಂದು ಬಂಟ್ವಾಳದ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಬಂಟ್ವಾಳ, ರಾರಾಸಂ ಫೌಂಡೇಷನ್, ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ರೆಡ್ ಡ್ರಾಪ್ ಮಂಗಳೂರು, ಮತ್ತು ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ, ಆಧಾರ್ ಕ್ಯಾಂಪನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಎ. ಜೆ. ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ‘ಮಹಿಳೆಯರಿಗಾಗಿ ಕ್ಯಾನ್ಸರ್ ಅರಿವು’ ಕಾರ್ಯಕ್ರಮದೊಂದಿಗೆ, 43 ನೇ ಸ್ಠಾಪನಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯ ವಿಜೇತರಿಗೆ ಹಾಗೂ 2021-22 ನೇ ಸಾಲಿನ ಇಲಾಖೆಯ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಇಲಾಖಾ ಮತ್ತು ಇಲಾಖೇತರ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷೆ ಡಾ. ಏಂಜೆಲ್ ರಾಜ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಡಾ| ವಸಂತ ಬಾಳಿಗ ಹಾಗೂ ರಾರಾಸಂ ಫೌಂಡೇಶನ್(ರಿ), ಬಂಟ್ವಾಳದ ಅಧ್ಯಕ್ಷ. ರಾಧಾಕೃಷ್ಣ ಇವರು ಉಪಸ್ಥಿತರಿದ್ದರು. ಬಂಟ್ವಾಳ ಅಂಚೆ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ ಎಂ.ಸ್ವಾಗತಿಸಿದರು, ಸ್ಥಾನೀಯ ಸಹಾಯಕ ಅಂಚೆ ಅಧೀಕ್ಷಕರು, ಪುತ್ತೂರು ಅಂಚೆ ವಿಭಾಗದ ಮೋಹನ ಬಿ, ವಂದಿಸಿದರು. ವಿಭಾಗೀಯ ತರಬೇತುದಾರ ರೋಹನ್ ಲೂಯೀಸ್ ಎ ಕಾರ್ಯಕ್ರಮ ನಿರೂಪಿಸಿದರು. ಇಲಾಖಾ ಸಿಬ್ಬಂದಿ ಹಾಗೂ ಸಾರ್ವಜನಿಕರೂ ಸೇರಿದಂತೆ 47 ಮಂದಿ ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here