ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಭಿ ಶಿಕ್ಷಣ ಕಾರ್ಯಕ್ರಮ

0

ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಹೊಸದಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ನಡೆಸಿದ ಅಭಿ ಶಿಕ್ಷಣ ಕಾರ್ಯಕ್ರಮವನ್ನು   ಶಾಲಾ ಸಂಚಾಲಕರಾದ ಪ್ರಹ್ಲಾದ ಜೆ.ಶೆಟ್ಟಿ ಉದ್ಘಾಟಿಸಿದರು.

 

ಬಳಿಕ ಮಾತನಾಡಿದ ಅವರು  ಬಾಲವಿಕಾಸ ಸಂಸ್ಥೆ ಮಕ್ಕಳ ಭಾವಿಜೀವನಕ್ಕಾಗಿ ಆರಂಭವಾದ ಸಂಸ್ಥೆಯಾಗಿದೆ. ಈ ಸಂಸ್ಥೆಯು ಮಕ್ಕಳಿಗೆ ವಿಧ್ಯೆಯ ಜೊತೆ ಸಂಸ್ಕೃತಿಯನ್ನು ಕಲಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ.  

ಸಂಸ್ಥೆಯ ಮುಖ್ಯ ಶೈಕ್ಷಣಿಕ ಅಧಿಕಾರಿಯವರಾದ ರವೀಂದ್ರ ಡಿ. ರವರು ಮಾತನಾಡಿ  ಇಂದಿನ ಮಕ್ಕಳೇ ಮುಂದಿನ ಸಮಾಜದ ಉತ್ತಮ ಆಸ್ತಿ. ಆತ್ಮವಿಶ್ವಾಸವೇ ಶಿಕ್ಷಣದ ನಿಜವಾದ ಉದ್ದೇಶ ಎಂದರು. ಬಳಿಕ  ನೂತನ ತಂತ್ರಜ್ಞಾನದಲ್ಲಿ ಬಳಸಲಾಗುವ ಡಿಜಿಟಲ್ ಬೋರ್ಡ್ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು.

ಸಹಶಿಕ್ಷಕಿ ರಶ್ಮಿ ಕೆ.ಫೆರ್ನಾಂಡೀಸ್ ರವರು ನೂತನ ಶೈಕ್ಷಣಿಕ ವರ್ಷದ ನೀತಿ – ನಿಯಮಗಳು ಹಾಗೂ ಶಾಲಾ ಕಿರುಪರಿಚಯವನ್ನು ಮಾಡುವುದರ ಜೊತೆಗೆ “ವಿದ್ಯಾರ್ಥಿಗಳೊಂದಿಗೆ ಪೋಷಕರ ಪಾತ್ರ” ದ ಕುರಿತಾಗಿ ಮಾತನಾಡಿದರು.

ಬಾಲವಿಕಾಸ ಟ್ರಸ್ಟ್‌ನ ಉಪಾಧ್ಯಕ್ಷರಾದ ಅಪ್ರಾಯ ಪೈ, ಬಾಲವಿಕಾಸ ಟ್ರಸ್ಟ್ ಸದಸ್ಯೆ ಸುಭಾಷಿಣಿ ಎ. ಶೆಟ್ಟಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸನಿಹ , ಶ್ರೇಯಾ , ನಿರೀಕ್ಷಾ, ಸ್ವಸ್ತಿ, ದೇವಿಕಾ, ರಕ್ಷಿತ ವಾಬಲೆ, ವೈಷ್ಣವಿ , ಸ್ಪರ್ಶರವರ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ.ಶೆಟ್ಟಿರವರು ಸ್ವಾಗತಿಸಿದರು. ಸಹಶಿಕ್ಷಕಿ ಯಜ್ಞೇಶ್ವರಿ ಎನ್. ವಂದಿಸಿದರು. ಸಹಶಿಕ್ಷಕಿ  ಸುಧಾ ಎನ್.ರಾವ್ ಹಾಗೂ  ಶ್ರುತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here