ಕೆಯ್ಯೂರು ಕೆಪಿಎಸ್ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ

0

  • ಪ್ರತಿ ಮಗೂವೂ ಕಟ್ಟ ಕಡೆಯ ಸ್ವಾಭಿಮಾನ, ಸ್ವಾವಲಂಬಿಯಾಗಿ ದೇಶದ ಪ್ರಜೆಯಾಗಬೇಕು-ಸಚಿವ ನಾಗೇಶ್

 

ಕೆಯ್ಯೂರು: ಸರಕಾರವು ವಿದ್ಯಾ ಕ್ಷೇತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಮತ್ತು ಹಣವನ್ನು ನೀಡುತ್ತದೆ ಈ ನಿಟ್ಟಿನಲ್ಲಿ ವ್ಯಕ್ತಿ ಯಾವಾಗ ಸಮಾಜಮುಖಿಯಾಗಿ ತನ್ನ ಬಗ್ಗೆ ಯೋಚನೆ ಮಾಡುದಕ್ಕಿಂತ ತ್ಯಾಗದ ಮೂಲಕ ತ್ಯಾಗ ಯಾರು ಜಾಸ್ತಿ ಮಾಡುತ್ತಾರೋ ಅವರೇ ಶ್ರೇಷ್ಠರು, ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನಿತೀಯಿಂದ ಸಾಮಾಜಿಕ ಬದಲಾವಣೆ ಸಾದ್ಯವಿದೆ ಎಂದರು. ಕೆಪಿಎಸ್ ಕೆಯ್ಯೂರು ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಕ್ಕೆ ಎರಡು ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಕಟ್ಟಡದ ಶಂಕುಸ್ಥಾಪನೆ, ಶಿಲಾ ಪಲಕದ ಅನಾವರಣ ಕಾರ್ಯಕ್ರಮ ಮೇ ೨೦ ರಂದು ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೆರವೇರಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ , ಮಾತಾನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮತಾನಾಡಿ ಸರಕಾರದ ಮೆಕಾಲೆ ಪದ್ದತಿಯ ಬದಲಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಡಲಕ ಬದಲಾವಣೆ ಮಾಡುವ ಮೂಲಕ ಮತ್ತೊಮ್ಮ ದೇಶ ಜಗತ್ತಿನ ಗುರು ಸ್ಥಾನಕ್ಕೆ ಏರಿಸಲಿದೆ ಎಂದರು. ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಸಚೀವರಿಗೆ ಪುಸ್ತಕ, ನಟರಾಜನ ವಿಗ್ರಹ ನೀಡುದರ ಮೂಲಕ ಗೌರವಾರ್ಪಣೆ ಮಾಡಿದರು. ಶಾಸಕರಿಗೆ ಶಿವಾಜಿ ವಿಗ್ರಹ ನೀಡುದರ ಮೂಲಕ ಅಭಿನಂದಿಸಿದರು.ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆಪಿಎಸ್ ಕೆಯ್ಯೂರು ೮೬.೧೧% ಫಲಿತಾಂಶ ದಾಖಲಿಸಿದೆ.

ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಎಂ. ನಿಶ್ಮಿತಾ ರೈ , ಸಿಂಚನಾ, ಆಯಿಷತ್ ಷಹಮಾ, ಹವ್ಯ ಕೆ , ರಕ್ಷಿತಾ ಕೆ , ಫಾತಿಮತ್ ಝಿಯಾನ, ಹಿತಾ, ಮಹಮ್ಮದ್ ಪವಾಝ್, ಜಸ್ಮಿತಾ ಕೆ.


ಇವರನ್ನು ಸಚೀವರು ಹೂ, ಸ್ಮರಣಿಕೆ ನೀಡಿ ಗೌರವಿಸಿದರು. ಕೆಪಿಎಸ್ ಕೆಯ್ಯೂರು, ಚೆನ್ನಾವಾರ ಶಾಲೆಯ ವಿದ್ಯಾರ್ಥಿಗಳು ಸಚಿವರಿಗೆ ಮನವಿ ಪ್ರತಿಯನ್ನು ಹಸ್ತಾಂತರಿಸಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು ಲೋಕೇಶ್ ಸಿ, ಉಪನಿರ್ದೇಶಕ ಪ.ಪೂ.ಶಿಕ್ಷಣ ಇಲಾಖೆ ಮಂಗಳೂರು ದ.ಕ. ಜಯಣ್ಣಸಿ.ಡಿ, ಕೆಪಿಎಸ್ ಪದವಿ ಪೂರ್ವ ಕಾಲೇಜು ಕೆಯ್ಯೂರು ಕಾರ್ಯದ್ಯಕ್ಷ, ಶಶಿಧರ ರಾವ್ ಬೊಳಿಕಲ, ಕೆಪಿಎಸ್ ಪ್ರೌಡಶಾಲಾ ವಿಭಾಗ ಕಾರ್ಯಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಜಯಂತಿ ಎಸ್ ಭಂಡಾರಿ, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯ ಗುರು ಬಾಬು, ಪುತ್ತೂರು ಪಿ ಡ ಬ್ಯುಲ್ ಇಂಜಿನಿಯರ್ ಪ್ರಮೋದ್, ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆ, ಸಂಪ್ಯ ಗ್ರಾಮಾಂತರ ಠಾಣಾಧಿಕಾರಿ ಉದಯರವಿ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ, ಕೆಪಿಎಸ್‌ನ ಪ್ರಭಾರ ಪ್ರಾಂಶುಪಾಲ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ವಂದಿಸಿ , ಲಿಟ್ಲ್ ಪ್ಲವರ್ ಶಾಲೆ ದರ್ಬೆ ಪುತ್ತೂರು ಬಾಲಕೃಷ್ಣ ಪೊರುದಳು ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರು ಮತ್ತು ಸರ್ವಸದಸ್ಯರು, ಶಾಲಾಭಿವೃದ್ದಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿಗಳು, ವಿಧ್ಯಾರ್ಥಿವೃಂದ, ಮಕ್ಕಳ ಪೋಷಕರು, ಸಂಘ ಸಂಸ್ಥೆಗಳ ಪಧಾದಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here