ಪಡುಮಲೆ  ಶ್ರೀ ದೇವರ ಗರ್ಭಗುಡಿಗೆ ಷಡಧಾರ ಪ್ರತಿಷ್ಠೆ , ನಿಧಿಕುಂಭ ಸ್ಥಾಪನೆ ಮತ್ತು ನಿಧಿಸಮರ್ಪಣೆ ಹಾಗೂ  ಗರ್ಭನ್ಯಾಸ ಮತ್ತು ಇಷ್ಟಿಕಾನ್ಯಾಸ ಕಾರ್ಯಕ್ರಮ

0

 

 

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶ್ರೀ ದೇವರ ಗರ್ಭಗುಡಿಗೆ ಷಡಧಾರ ಪ್ರತಿಷ್ಠೆ , ನಿಧಿಕುಂಭ ಸ್ಥಾಪನೆ ಮತ್ತು ನಿಧಿಸಮರ್ಪಣೆ ಹಾಗೂ ಗರ್ಭನ್ಯಾಸ ಮತ್ತು ಇಷ್ಟಿಕಾನ್ಯಾಸ ಕಾರ್ಯಕ್ರಮ ಮೇ 20 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪ್ರಾರಂಭದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರಿಗೆ ಆಚಾರ್ಯ ಮುಖೇನೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಕ್ಷೇತ್ರ ತಂತ್ರಿಗಳಾದ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರದ ಶಿಲ್ಪಿಗಳಾದ ಕಾಸರಗೋಡು, ಬೆದ್ರಡ್ಕ ಶ್ರೀ ರಮೇಶ್ ಕಾರಂತರ ಉಪಸ್ಥಿತಿಯಲ್ಲಿ ಮೆ.20 ರಂದು ಬೆಳಗ್ಗೆ ಗಂ 10.15 ರಿಂದ 11.30 ರ ವರೆಗಿನ ಮೀನಾ ಲಗ್ನ ಸುಮುಹೂರ್ತದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗರ್ಭಗುಡಿಗೆ ಷಡಧಾರ ಪ್ರತಿಷ್ಠೆ , ನಿಧಿಕುಂಭ ಸ್ಥಾಪನೆ ಮತ್ತು ನಿಧಿಸಮರ್ಪಣೆ ಹಾಗೂ ಗರ್ಭನ್ಯಾಸ ಮತ್ತು ಇಷ್ಟಿಕಾನ್ಯಾಸ ಕಾರ್ಯಕ್ರಮ ನಡೆಯಿತು.

ಬಳಿಕ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರಿಂದ ಅರ್ಶಿವಾಚನ ನೀಡಿದರು. ಸಂದರ್ಭದಲ್ಲಿ ದೇವಸ್ಥಾನದ ಪವಿತ್ರಪಾಣಿ ಕೇಶವ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಾಚ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ಲು,ವ್ಯವಸ್ಥಾಪನಾ ಸದಸ್ಯರಾದ ಚಂದ್ರಶೇಖರ ಆಳ್ವ ಗಿರಿಮನೆ, ನಾರಾಯಣ ಭಟ್ ಬಿರ್ನೋಡಿ, ಪ್ರಧಾನ ಅರ್ಚಕ ಮಹಾಲಿಂಗ ಭಟ್, ಪ್ರಭಾಕರ ಗೌಡ ಕನ್ನಯ, ಅಪ್ಪಯ್ಯ ನಾಯ್ಕ ತಲೆಂಜಿ,, ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಅಳ್ವ,ಸದಸ್ಯ ರವಿರಾಜ ರೈ ಸಜಂಕಾಡಿ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಹಾಗೂ ಜೀರ್ಣೋದ್ಧಾರ ಸಮಿತಿಕ ಸದಸ್ಯರು ಮತ್ತು ಊರ ಭಕ್ತಾಧಿಗಳು ಭಾಗವಹಿಸಿದರು.

 

ನಿಧಿ ಸಮರ್ಪಣೆ
ಶ್ರೀ ಕ್ಷೇತ್ರದ ಪ್ರಧಾನ ಗ್ರಾಮ ದೇವರಿಗೆ ಊರ ಭಕ್ತಾಧಿಗಳಿಂದ ಸುಮಾರು 5 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಸಮರ್ಪಣೆ ಮಾಡಲಾಯಿತು. ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here