ಕಡಬ ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆ

0

  • ರಸ್ತೆ ಬದಿಯಲ್ಲಿ ಅಪಾಯಕಾರಿ ಮರ ಬಿದ್ದು ತೊಂದರೆಯಾದರೆ ಅರಣ್ಯ, ಮೆಸ್ಕಾಂ, ಪಿಡಬ್ಲ್ಯೂಡಿ ಇಲಾಖಾ ಅಧಿಕಾರಿಗಳೇ ಹೊಣೆ-ಎ.ಸಿ. ಗಿರೀಶ್ ನಂದನ್

ಕಡಬ: ಮಳೆಗಾಳ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಪ್ರಾಕೃತಿಕ ವಿಕೋಪಗಳಿಂದ ಆಗುವ ತೊಂದರೆಯನ್ನು ಎದುರಿಸಲು ಕಡಬ ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರ ಅಧ್ಯಕ್ಷತೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಮೇ.21ರಂದು ನಡೆಯಿತು.

 

ಅಪಾಯಕಾರಿ ಮರ ತೆರವು ವಿಚಾರದಲ್ಲಿ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಎ.ಸಿ,ಯವರು ಅಪಾಯಕಾರಿ ಮರ ತೆರವು ವಿಚಾರದಲ್ಲಿ ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರು ಮುತುವರ್ಜಿ ವಹಿಸಬೇಕು, ಮೂರು ಇಲಾಖೆಗಳು ಸಂಪರ್ಕವನ್ನುಟ್ಟುಕೊಂಡು ಕಾರ್‍ಯನಿರ್ವಹಿಸಬೇಕು, ಸಣ್ಣ ಸಣ್ಣ ಸಮಸ್ಯೆಗಳಿಗೂ ಪತ್ರ ವ್ಯವಹಾರ ಮಾಡುತ್ತಾ ಕಾಲಹರಣ ಮಾಡಬಾರದು, ತಹಸೀಲ್ದಾರ್ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲ ನಿರ್ವಹಿಸಬೇಕು, ಒಂದೂ ವೇಳೆ ಅಪಾಯಕಾರಿ ಮರಗಳನ್ನು ಕೂಡಲೇ ಗುರುತಿಸಬೇಕು, ಈಗಾಗಲೇ ಗುರುತಿಸಿದ ಮರಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು, ಒಂದು ವೇಳೆ ರಸ್ತೆ ಬದಿಗಳಲ್ಲಿ ಅಪಾಯಕಾರಿ ಮರ ಬಿದ್ದು ಏನಾದರೂ ತೊಂದರೆಯಾದರೆ ಅದಕ್ಕೆ ಅರಣ್ಯ, ಮೆಸ್ಕಾಂ.ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳೇ ಹೊಣೆ ಇದನ್ನು ನಡಾವಳಿಗೆ ಸೇರಿಸಿ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಸೂಚಿಸಿದರು.

ಇಲಾಖಾ ಅಧಿಕಾರಿಗಳು ಕಛೇರಿ ಮುಗಿದ ಬಳಿಕವೂ ಮೊಬೈಲ್ ಕಾಲ್ ರಿಸಿವ್ ಮಾಡಬೇಕು:

ಸಭೆಯಲ್ಲಿ ಮಾತನಾಡಿದ ಗಿರೀಶ್ ನಂದನ್ ಅವರು ನಾವು ಜನರಿಗೆ ಸರ್ವಿಸ್ ಕೊಡಬೇಕಾದವರು, ಆದುದರಿಂದ ಕಛೇರಿ ಸಮಯ ಮುಗಿದ ಬಳಿಕ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಅವರ ತುರ್ತು ಸಮಸ್ಯೆಗಳಿಗೆ ಸ್ಪಂಧಿಸಬೇಕು ಎಮದು ಎಸಿಯವರು ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ತೊಂದರೆಯಾಗದಂತೆ ಮತ್ತು ಬಿ.ಎಸ್.ಎನ್.ಎಲ್, ಟವರ್‌ಗಳಿಗೆ ಸಂಪರ್ಕಿಸಲಾದ ವಿದ್ಯುತ್‌ಗಳನ್ನು ಆದಷ್ಟು ಕಡಿತ ಆಗದಂತೆ ನೋಡಿಕೊಳ್ಳಬೇಕು ಎಮದು ಮೆಸ್ಕಾಂ ಅಧಿಕಾರಿಯವರಿಗೆ ಹೇಳಿದರು. ಮಳೆಗಾಲದಲ್ಲಿ ಗೃಹರಕ್ಷಕ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನೀಡಬೇಕೆಂದು ಕಡಬ ಎಸ್.ಐ. ಆಂಜನೇಯ ರೆಡ್ಡಿ ವಿನಂತಿಸಿದರು. ಇದಕ್ಕೆ ಉತ್ತರಿಸಿದ ಎ.ಸಿ.ಯವರು ತುರ್ತು ಸಂದರ್ಭಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ಕೊಡಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದು ಕಿರಿಯ ಅಧಿಕಾರಿಗಳು ಸಭೆಗೆ ಹಾಜರಾಗಿದ್ದು ಈ ಬಗ್ಗೆ ಪ್ರಶ್ನಿಸಿದ ಎ.ಸಿ.ಯವರು ಇಂತಹ ಅಗತ್ಯ ಸಭೆ ಇರುವುದು ಮೊದಲೇ ಗೊತ್ತಿಲ್ಲವೇ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿದ್ದ ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಗ್ರಾ.ಪಂ. ಪಿಡಿಒಗಳು ಆಯಾ ಗ್ರಾಮದಲ್ಲಿ ಶಿಥಿಲಗೊಂಡಿರುವ ಮನೆಗಳ ಸಮೀಕ್ಷೆ ಮಾಡಬೇಕು, ಮತ್ತು ಅಪಾಯಕಾರಿ ಮರಗಳ ತೆರವಿಗೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ವೇದಿಕೆಯಲ್ಲಿ ಕಡಬ ತಹಸೀಲ್ದಾರ್ ಅನಂತಶಂಕರ್ ಬಿ. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರಮೂಲ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಉಪ ತಹಸೀಲ್ದಾರ್ ಮನೋಹರ್ ಕೆ.ಟಿ, ಗೋಪಾಲ ಕಲ್ಲುಗುಡ್ಡೆ, ಕಂದಾಯ ನಿರಿಕ್ಷಕ ಅವಿನ್ ರಂಗತ್‌ಮಲೆ ಸೇರಿದಂತೆ ಮೆಸ್ಕಾಂ, ಜಿ.ಪಂ. ಇಂಜಿನಿಯರ್, ಕೃಷಿ, ತೋಟಗಾರಿಕೆ, ವೈದ್ಯಾಧಿಕಾರಿ, ಪಶುವೈದ್ಯಕೀಯ ಸೇರದಂತೆ ಹಲವು ಇಲಾಖಾ ಅಧಿಕಾರಿಗಳು, ಗ್ರಾಮಕರಣಿಕರು, ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು, ಕಂದಾಯ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here