ಕೋಡಿಂಬಾಡಿಯಲ್ಲಿ ರಸ್ತೆಯ ಅಂಚಿಗೆ ಮಣ್ಣು ಹಾಕಿ ಸಂಚಾರಕ್ಕೆ ತೊಂದರೆ, ಅನಧಿಕೃತ ಕಟ್ಟಡ ನಿರ್ಮಾಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರಿಂದ ಪಿಡಿಓಗೆ ದೂರು

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಪಣಿಪಾಲು ಕೊಂಬಕೋಡಿ ನಿವಾಸಿಗಳು ಸಂಚರಿಸುವ ರಸ್ತೆಯ ಅಂಚಿನಲ್ಲಿ ಮಣ್ಣು ಹಾಕಿ ಸಂಚಾರಕ್ಕೆ ಅಡೆ ತಡೆ ಮಾಡಿ ರಸ್ತೆಯ ಅಂಚಿನಲ್ಲಿ ಅನಧಿಕೃತ ವಾಣಿಜ್ಯ ಕಟ್ಟಡ ಕಟ್ಟುತ್ತಿರುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ.‌
ಕೊಂಬಕೋಡಿ ಪಣಿಪಾಲು ನಿವಾಸಿಗಳಾದ ಶ್ರೀನಿವಾಸ ಆಚಾರ್ಯ, ಸೀತಾರಾಮ ಆಚಾರ್ಯ,
ಜನಾರ್ದನ ಆಚಾರ್ಯ, ಮಾಧವ ಆಚಾರ್ಯ ಮತ್ತು ಚಿದಾನಂದ ರೈಯವರು
ಪಿಡಿಓಗೆ ದೂರು ಸಲ್ಲಿಸಿದ್ದು
‘ನಮ್ಮೆಲ್ಲರ ಮನೆಗಳಿಗೆ ಸಂಪರ್ಕ ರಸ್ತೆಯಾಗಿರುವ
ಕೊಂಬಕೋಡಿ ಪಣಿಪಾಲ್ ರಸ್ತೆ ಅಂಚಿನಲ್ಲಿ ಸ್ಥಳೀಯ ನಿವಾಸಿ ಜಯಾನಂದರವರ
ಸ್ಥಳದ ಭಾಗಶಃ ಜಾಗವನ್ನು ಜಿಸಿಬಿಯಲ್ಲಿ ಸಮತಟ್ಟು ಮಾಡಿ ಸದ್ರಿ ಸ್ಥಳದ ಮಳೆ ನೀರನ್ನು ನಾವು ಹೋಗುವ
ಸಾರ್ವಜನಿಕ ರಸ್ತೆಯಾದ ಕೊಂಬಕೋಡಿ ಪಣಿಪಾಲ್ ಸಾರ್ವಜನಿಕ ರಸ್ತೆಗೆ ಹಾಯಿಸಿ ಮತ್ತು ಮಣ್ಣನ್ನು
ಸಾರ್ವಜನಿಕ ರಸ್ತೆ ಇಕ್ಕೆಲಕ್ಕೆ ಹಾಕಿ ಭಾಗಶಃ ರಸ್ತೆಯ ನೀರು ಹೋಗುವ ಚರಂಡಿಯ ಜಾಗವನ್ನು ಅತಿಕ್ರಮಿಸಿ
ಹಾಗೂ ಸದ್ರಿ ರಸ್ತೆ ಅಂಚಿನಲ್ಲಿ ಅನಧಿಕೃತ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು ಕೂಡಲೇ ಸದ್ರಿ
ರಸ್ತೆಯನ್ನು ಜಯಾನಂದ ಅವರಲ್ಲಿ ಸರಿಪಡಿಸಿ ಮತ್ತು ಅನಧಿಕೃತ ಕಟ್ಟಡಕ್ಕೆ ನಿರ್ಮಾಣಕ್ಕೆ ನೋಟಿಸು ನೀಡಿ
ಕೂಡಲೇ ತಡೆ ಹಿಡಿಯಬೇಕಾಗಿ ಮತ್ತು ಕಾನೂನು ರೀತ್ಯಾ ಕ್ರಮ ಕೈಕೊಳ್ಳಬೇಕಾಗಿ ವಿನಂತಿ’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here