ಒಕ್ಕಲಿಗರ ಯಾನೆ ವಕ್ಕಲಿಗರ ಸಮುದಾಯ ಸೇವಾ ಸಂಘದ ಮಹಾಸಭೆ, ದಶಮಾನೋತ್ಸವ: ಸಾಧಕರಿಗೆ ಸನ್ಮಾನ – ಪ್ರತಿಭಾ ಪುರಸ್ಕಾರ

0

  • ಸಮಾಜದ ಏಳ್ಗೆಗಾರಿ ಒಕ್ಕಲಿಗರು ಮುಂದೆ ಬರಬೇಕು – ವಸಂತಿ ಬಿ
  • ಮನೆವಾತಾವರಣ ಉತ್ತಮವಾಗಿದ್ದರೆ ಸಮುದಾಯಕ್ಕೆ ಶಕ್ತಿ ಸಿಗುತ್ತದೆ – ನಾರಾಯಣ ಮೈಲಾಟಿ
  • ಹಿರಿಯ ಸಂಸ್ಕಾರ ಜೀವನ ಮಾರ್ಗದರ್ಶನ – ಲಲಿತ ಎನ್
  • ಸಮಾಜ ಬಾಂಧವರ ಸಹಕಾರ ಅಗತ್ಯ – ರಾಧಾಕೃಷ್ಣ ಒಕ್ಕಲಿಗ

ಪುತ್ತೂರು: ದಕ್ಷಿಣ ಕನ್ನಡ ಪನಿಯಾಲ್ ಕೇರಳ ಮೂಲದ ಒಕ್ಕಲಿಗರ ಯಾನೆ ವಕ್ಕಲಿಗರ ಸಮುದಾಯ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ದಶಮಾನೋತ್ಸವ ಸಮಾರಂಭ ಮೇ 22 ರಂದು ದರ್ಬೆ ಸಣ್ಣ ಕೈಗಾರಕಾ ಅಭಿವೃದ್ದಿ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಮಾಜದ ಏಳ್ಗೆಗಾರಿ ಒಕ್ಕಲಿಗರು ಮುಂದೆ ಬರಬೇಕು :
ದಶಮಾನೋತ್ಸವ ಸಮಾರಂಭ ಉದ್ಘಾಟಿಸಿದ ಮಡಿಕೇರಿ ಸರಕಾರಿ ಆಸ್ಪತ್ರೆಯ ಪ್ರಭಾರ ಶುಶ್ರೂಷಕ ಅಧೀಕ್ಷಕಿ ವಸಂತಿ ಬಿ ಅವರು ಮಾತನಾಡಿ ಸಂಘ 10 ವರ್ಷ ಆದರೂ ಸಮಾಜ ಬಾಂಧವರ ಸೇರುವಿಕೆ ವಿರಳವಾಗಿದೆ. ನಮ್ಮ ಸಮಾಜದಲ್ಲಿ ಅತೀ ಹೆಚ್ಚು ಪ್ರತಿಭೆಗಳಿವೆ. ಆ ಪ್ರತಿಭೆಗಳು ವೇದಿಕೆಯನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಮುಂದೆ ಬರಬೇಕೆಂದರು.


ಮನೆವಾತಾವರಣ ಉತ್ತಮವಾಗಿದ್ದರೆ ಸಮುದಾಯಕ್ಕೆ ಶಕ್ತಿ ಸಿಗುತ್ತದೆ:
ಯೋಗಾಸನ ಮತ್ತು ತಾಲೀಮು ಪರಿಣತ ನಾರಾಯಣ ಮೈಲಾಟ ಅವರು ಮಾತನಾಡಿ ಸಂಘಟನೆಗೆ ಬಹಳ ಮುಖ್ಯ ನಮ್ಮ ಆರೋಗ್ಯ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಯೋಗಾಸನ ಮಾಡಿ. ಯೋಗಾಸನಕ್ಕೆ ವಯೋಮಿತಿ ಅಗತ್ಯವಿಲ್ಲ. ಗುರುವಿನ ಅಗತ್ಯವಿದೆ. ಇವೆಲ್ಲದಕ್ಕೂ ಮುಖ್ಯ ಮನೆ ವಾತಾವರಣ ಉತ್ತಮವಾಗಿರಬೇಕು. ಆಗ ಸಮುದಾಯಕ್ಕೆ ಶಕ್ತಿ ಸಿಗುತ್ತದೆ ಎಂದರು.

ಹಿರಿಯ ಸಂಸ್ಕಾರ ಜೀವನ ಮಾರ್ಗದರ್ಶನ:
ಮಂಗಳೂರಿನ ಲಲಿತ ಎನ್ ಅವರು ಮಾತನಾಡಿ ನಮ್ಮ ಸಮಾಜ ಬಾಂಧವರ ಮಕ್ಕಳಿಗೆ ಐ.ಎ.ಎಸ್, ಐಪಿಎಸ್ ಕಲಿಯಲು ಪ್ರೋತ್ಸಾಹ ನೀಡಬೇಕು. ಇದಕ್ಕಾಗಿ ನಮ್ಮ ಹಿರಿಯರ ಸಂಸ್ಕಾರವನ್ನು ಪಾಲಿಸಬೇಕು. ಅದು ನಮಗೆ ಜೀವನ ಮಾರ್ಗವಾಗಲಿದೆ. ಈ ಕುರಿತು ಸಭೆ ಸಮಾರಂಭದಲ್ಲಿ ಸಿಂಹವಾಲೋಕನ ಮಾಡಬೇಕೆಂದರು.

ಸಮಾಜ ಬಾಂಧವರ ಸಹಕಾರ ಅಗತ್ಯ:
ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗರ ಯಾನೆ ವಕ್ಕಲಿಗರ ಸಮುದಾಯ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಒಕ್ಕಲಿಗ ಅವರು ಮಾತನಾಡಿ ನಮ್ಮ ಸಮಾಜ ಬಾಂಧವರಲ್ಲಿ ಅನೇಕರು ಉತ್ತಮ ವ್ಯವಸ್ಥೆಯಲ್ಲಿ ಇದ್ದಾರೆ. ಅವರೆಲ್ಲ ಸಂಘಕ್ಕೆ ಸಹಕಾರ ನೀಡುವಂತೆ ವಿನಂತಿಸಿದರು.

ಸನ್ಮಾನ – ಪ್ರತಿಭಾ ಪುರಸ್ಕಾರ:
ಸಂಘದ ಅಧ್ಯಕ್ಷರಾದ ಕೆಎಸ್ಸಾರ್ಟಿಸಿ ಮಂಗಳೂರು ಇದರ ಸಂಚಾರ ನಿಯಂತ್ರಕ ರಾಧಾಕೃಷ್ಣ ಒಕ್ಕಲಿಗ ಬಿ, ಮಡಿಕೇರಿ ಸರಕಾರಿ ಆಸ್ಪತ್ರೆಯ ಪ್ರಭಾರ ಶುಶ್ರೂಷಕಿ ಅಧೀಕ್ಷಕಿ ವಸಂತಿ, ನಿವೃತ ಎ.ಎಸ್.ಐ ಭಾಸ್ಕರ ಪ್ರಸಾದ್ ಜಾಲ್ಸೂರು ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಮತ್ತು ವಿಶೇಷ ಸಾಧಕರನ್ನು ಗೌರವಿಸಲಾಯಿತು.

ಶ್ರದ್ದಾಂಜಲಿ:
ಸಂಘದ ಸದಸ್ಯರಾಗಿದ್ದು ನಿಧನರಾದ ಕು ಕಾವ್ಯ ಬಿ ಆರ್, ಸಂಘದ ಮಾಜಿ ಗೌರವಾಧ್ಯಕ್ಷ ಮಂಜುನಾಥ ಅವರ ಆತ್ಮಕ್ಕೆ ಚಿರಶಾಂತಿಗಾಗಿ ಒಂದು ನಿಮಿಷದ ಮೌನಪ್ರಾರ್ಥನೆ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಫರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೃಣಾಲಿ, ಶ್ರೀಲಕ್ಷ್ಮೀ, ಚೈತ್ರ ಅವರು ಅತಿಥಿಗಳನ್ನು ಪರಿಚಯಿಸಿದರು. ಸಂಘದ ಪದಾಧಿಕಾರಿ ಜನಾರ್ದನ ವರದಿ ವಾಚಿಸಿದರು. ಕೋಶಾಧಿಕಾರಿ ಭಾಸ್ಕರ್ ಲೆಕ್ಕಪತ್ರ ಮಂಡಿಸಿದರು. ಲಕ್ಷ್ಮೀ , ಮೃಣಾಲಿ, ಸೃಜನ ಪ್ರಾರ್ಥಿಸಿದರು. ಸಂಘದ ವಿವಾಹ ವೇದಿಕೆ ಸಂಚಾಲಕ ಶಂಕರ ನೆಹರುನಗರ ಸ್ವಾಗತಿಸಿದರು. ಶಿಕ್ಷಕಿ ಪುನಿತಾ ಶಂಕರ್ ಮತ್ತು ಜಿ.ಪಂ ಪ್ರಥಮ ದರ್ಜೆ ಸಹಾಯಕಿ  ಶೋಭಾ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ವಂದಿಸಿದರು.

LEAVE A REPLY

Please enter your comment!
Please enter your name here