ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ- ಶೇಖರ ಗೌಂಡತ್ತಿಗೆ

0

ಹಿರೇಬಂಡಾಡಿ :ಹಿರೇಬಂಡಾಡಿ ಶಾಲೆಯ ಶಿಕ್ಷಣದೊಂದಿಗೆ ಮನೆಯ ಸಂಸ್ಕಾರದ ಶಿಕ್ಷಣವು ಜೊತೆಗೂಡಿದಾಗ ವಿದ್ಯೆಗೆ ಹೆಚ್ಚಿನ ಮಹತ್ವ ಸಿಗುತ್ತದೆ ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣದಿಂದ ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖರ ಗೌಂಡತ್ತಿಗೆ ತಿಳಿಸಿದರು.

ಅವರು ಮೇ 5ರಂದು ಪಾಲೆತ್ತಡಿ ಗುರುಶ್ರೀ ಸಮುದಾಯ ಭವನದಲ್ಲಿ ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ಗ್ರಾಮ ಸಮಿತಿಯ ವತಿಯಿಂದ ನಡೆದ ವಾರ್ಷಿಕ ಮಹಾಸಭೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷರಾದ ವಸಂತ ಕಜೆ ವಹಿಸಿದ್ದರು.


ಪುತ್ತೂರು ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಮಹೇಶ್ಚಂದ್ರ ಸಾಲ್ಯಾನ್, ತಾಲ್ಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿ ವಿಮಲಾ ಸುರೇಶ್, ಉಪ್ಪಿನಂಗಡಿ ವಲಯ ಸಂಚಾಲಕರಾದ ಅಶೋಕ್ ಕುಮಾರ್ ಪಡ್ಪು ಸಂದರ್ಭೋಚಿತವಾಗಿ ಮಾತನಾಡಿದರು.

ಸಮಾಜದ ಒಂದು ಕುಟುಂಬದ ಸದಸ್ಯರ ವೈದ್ಯಕೀಯ ನೆರವಿಗಾಗಿ ಸಾಂತ್ವನ ನಿಧಿಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಉಪಸ್ಥಿತರಿದ್ದ ಎಲ್ಲಾ ಸಮಾಜದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ನಿಶ್ಮೀತಾ ಪ್ರಾರ್ಥಿಸಿ, ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ಪವಿತ್ರ ಎಲಿಯ ಸ್ವಾಗತಿಸಿ, ಗ್ರಾಮ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಕಾರೆದಕೋಡಿ ವರದಿ ಮಂಡಿಸಿ, ಧನ್ಯವಾದಗೈದರು. ನವೀನ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸದಾಶಿವ ಬಂಗೇರ ಎಲಿಯ, ಸುಂದರ ಎಲಿಯ,ಲಕ್ಷ್ಮೀಶ ನಿಡ್ಡೆಂಕಿ, ಹರೀಶ್ ಪಾಲೆತ್ತಡಿ, ಗಂಗಾಧರ ಎಲಿಯ,ವಿಠಲ ಪರಕೊಡಂಗೆ, ಶಿವಚಂದ್ರ ನಿಡ್ಡೆಂಕಿ, ವಾಸಪ್ಪ ಕೆರ್ನಡ್ಕ, ಪುನೀತ್ ದಾಸರ ಮೂಲೆ, ಎಲ್ಯಣ್ಣ ಸೆಟ್ಲಪಾಲ್, ಸವಿತಾ ಎಲಿಯ, ವಿದ್ಯಾ ನಿಡ್ಡೆಂಕಿ, ಭಾರತಿ ನಿಡ್ಡೆಂಕಿ, ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here