ಆರ್ಯಾಪು: ಒಕ್ಕಲಿಗ ಸ್ವಸಹಾಯ ಸಂಘಗಳ ರಚನೆ ಬಗ್ಗೆ ಸಮಾಲೋಚನಾ ಸಭೆ

0

ಆರ್ಯಾಪು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಆರ್ಯಾಪು ಗ್ರಾಮ, ಯುವ ಘಟಕ, ಮಹಿಳಾ ಘಟಕ ಆರ್ಯಾಪು ಗ್ರಾಮ ಇವರ ಸಹಕಾರದೊಂದಿಗೆ ಒಕ್ಕಲಿಗ ಸ್ವ ಸಹಾಯ ಸಂಘಗಳ ರಚನೆಯ ಬಗ್ಗೆ ಸಮಾಲೋಚನಾ ಸಭೆ ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ಮೇ೨೨ ರಂದು ನಡೆಯಿತು.

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎ.ವಿ ನಾರಾಯಣ ಮಾತನಾಡಿ ಗೌಡ ಸಮುದಾಯದ ಒಗ್ಗೂಡುವಿಕೆ, ನಾಯಕತ್ವ ಗುಣ, ಪ್ರತಿ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವುದರ ಜೊತೆಗೆ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ದ್ರಷ್ಟಿಯಲ್ಲಿ ಸ್ಥಾಪಿಸಲಾಗಿರಿರುವ ಒಕ್ಕಲಿಗ ಸ್ವ ಸಹಾಯ ಸಂಘಗಳನ್ನು ತಮ್ಮ ಗ್ರಾಮದಲ್ಲೂ ಕಾರ್ಯರೂಪಕ್ಕೆ ತರುವಂತೆ ಮನವಿ ಮಾಡಿದರು. ನಿವೃತ್ತ ಶಿಕ್ಷಕ ವೆಂಕಪ್ಪ ಗೌಡ ಕಾಣಿಕೆ ದೇವಸ್ಯ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಅಧ್ಯಕ್ಷತೆ ವಹಿಸಿದ್ದ ಆರ್ಯಾಪು ಒಕ್ಕಲಿಗ ಗೌಡ ಸೇವಾ ಸಂಘದ ಗ್ರಾಮ ಸಮಿತಿ ಅಧ್ಯಕ್ಷ ದೇವಯ್ಯ ಗೌಡ ದೇವಸ್ಯ ಮಾತನಾಡಿ ಸಮುದಾಯ ಸಂಘಟನೆಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವೇದಿಕೆಯಾಗಿ ಮೂಡಿಬಂದಿದೆ. ನಮ್ಮ ಗ್ರಾಮದಲ್ಲೂ ಸ್ವ ಸಹಾಯ ಸಂಘ ರಚಿಸಿಕೊಂಡು ಸಂಘಟಿತರಾಗೋಣ ಎಂದರು. ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಮೇಲ್ವಿಚಾರಕ ವಿಜಯ ಕುಮಾರ್ ಸ್ವ ಸಹಾಯ ಸಂಘಗಳ ರಚನೆಯ ಬಗ್ಗೆ ಮಾಹಿತಿ ನೀಡಿದರು, ವೇದಿಕೆಯಲ್ಲಿ ಒಕ್ಕಲಿಗ ಗೌಡ ಆರ್ಯಾಪು ಗ್ರಾಮ ಸಮಿತಿ ಗೌರವಾಧ್ಯಕ್ಷ ದಯಾನಂದ ಗೌಡ ಕುಂಟ್ಯಾನ, ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಪರನೀರು, ವಿಶ್ವನಾಥ ಗೌಡ, ಆರ್ಯಾಪು ಬಿ. ವಿಭಾಗದ ಗ್ರಾಮ ಸಮಿತಿ ಅಧ್ಯಕ್ಷ ದಾಮೋದರ ಗೌಡ ಗೆಣಸಿನಕುಮೇರು, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯದ ಉಪಾಧ್ಯಕ್ಷ ಹಾಗೂ ಊರು ಗೌಡರು ಕಿಶೋರ್ ಗೌಡ ಮರಿಕೆ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಗೌಡ ದೇವಸ್ಯ, ಗಿರೀಶ್ ಗೌಡ ಮರಿಕೆ ಉಪಸ್ಥಿತರಿದ್ದರು. ಮೇಘಶ್ರೀ, ಧನ್ಯಶ್ರೀ ಪ್ರಾರ್ಥಿಸಿದರು, ಪವನ್ ದೇವಸ್ಯ ಸ್ವಾಗತಿಸಿದರು, ಶ್ರೀಕಾಂತ್ ಗೌಡ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here