ಖ್ಯಾತ ಪಿಟೀಲು ವಾದಕ ಚೆನ್ನೈ ಡಾ| ಮುಲೈವಾಸಲ್ ಜಿ ಚಂದ್ರಮೌಳಿಯವರಿಂದ ಪರ್ಲಡ್ಕ ಬಹುವಚನಮ್ ನಲ್ಲಿ ಕು. ಅರ್ಪಿತಾ ಶೇಟ್ ಜೊತೆಯಾಗಿ ವಾದ್ಯ ದ್ವಯ ಸಂಗೀತ

0

ಪುತ್ತೂರು: ಪರ್ಲಡ್ಕದಲ್ಲಿರುವ ಬಹುವಚನಮ್ ಮತ್ತು ಕಾಮಾಕ್ಷಿ ಸಂಗೀತ ಕಲಾ ಶಾಲೆ ಪುತ್ತೂರು ಇದರ ವತಿಯಿಂದ ಖ್ಯಾತ ಪಿಟೀಲು ವಾದಕ ಚೆನ್ನೈಯ ಡಾ| ಮುಲೈವಾಸಲ್ ಜಿ ಚಂದ್ರಮೌಳಿ ಅವರಿಂದ ವಾದ್ಯ ದ್ವಯ ಸಂಗೀತ ಕಾರ್ಯಕ್ರಮ ನಡೆಯಿತು. ರೂಪೇಶ್ ಶೇಟ್ ಮತ್ತು ಪವಿತ್ರ ರೂಪೇಶ್ ಶೇಟ್ ದಂಪತಿಯ ಪುತ್ರಿ ಕು ಅರ್ಪಿತಾ ಶೇಟ್ ಅವರು ಜೊತೆಯಾಗಿ ಪಿಟೀಲು ನುಡಿಸಿದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ. ಸುಧಾ ಎಸ್ ರಾವ್ ಮತ್ತು ಸಪ್ತಸ್ವರ ಸಂಗೀತ ಕಲಾಶಾಲೆಯ ನಿರ್ದೇಶಕಿ ರಮಾ ಪ್ರಭಾಕರ್ ಅವರು ದೀ ಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಹುವಚನಂನ ನಿರ್ದೇಶಕ ಡಾ| ಶ್ರೀಶಕುಮಾರ್ ಅವರು ಸ್ವಾಗತಿಸಿ ಕಳೆದ ೧೮ ವರ್ಷಗಳಿಂದ ಬೇರೆ ಬೇರೆ ಕಾರಣಗಳಿಂದ ಸಾಂಸ್ಕೃತಿಕ ಕೇಂದ್ರಕ್ಕೆ ತೆರೆದು ಕೊಂಡ ಈ ಸ್ಥಳದಲ್ಲಿ ಕಳೆದ ೫ ವರ್ಷಗಳಿಂದ ಹಲವು ಕಾರ್ಯಕ್ರಮ ನಿರಂತರ ನಡೆಯುತ್ತಿದೆ. ಮುಂದೆ ಜೂನ್ ತಿಂಗಳಲ್ಲಿ ಏಕ ವ್ಯಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಜು. ೧೨ಕ್ಕೆ ಭಾಮಿ ಅವರಿಂದ ಕಚೇರಿ ನಡೆಯಲಿದೆ. ಬಹವಚನಂ ಆಶ್ರಯದಲ್ಲಿ ಒದು ಎಕ್ರೆ ಜಾಗದಲ್ಲಿ ಅಶ್ವತ್ಥ ಗಿಡಗಳನ್ನು ಬೆಳೆಸುವ ಮೂಲಕ ಶುದ್ದಗಾಳಿಗೆ ನೀರೆಯುತ್ತಿದೆ ಎಂದರು.

ವಾದ್ಯ ದ್ವಯ ಸಂಗೀತ:
ಸರಳ ಉದ್ಘಾಟನಾ ಕಾರ್ಯಕ್ರಮದ ಬಳಿಕ ಡಾ} ಮುಲೈವಾಸಲ್ ಜಿ ಚಂದ್ರಮೌಳಿ ಅವರಿಂದ ಪಿಟೀಲು ವಾದನ ನಡೆಯಿತು. ಪಿಟೀಲು ವಾದನದಲ್ಲಿ ಕು.ಅರ್ಪಿತಾ ಶೇಟ್ ಸಾತ್ ನೀಡಿದರು. ಮೃದಂಗದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್, ಘಟಂನಲ್ಲಿ ತುಮಕೂರು ಶಶಿಶಂಕರ್, ಮೋರ್ಸಿಂಗ್‌ನಲ್ಲಿ ರಮೇಶ್, ತಂಬೂರದಲ್ಲಿ ಚೈತನ್ಯ ಅವರು ಸಹಕರಿಸಿದರು. ಮೆಸ್ಕಾಂ ನಿವೃತ್ತ ಇಂಜಿನಿಯರ್ ಶಿವಾನಂದ ಶೇಟ್, ಡಾ| ಶ್ರೀಶಕುಮಾರ್, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ದಿವಾಕರ್ ಕೆ.ಪಿ, ಪಾರ್ವತಿ ಪದ್ಯಾಣ, ಶಾಂತಲ ಶೇಟ್, ಪವಿತ್ರ ರೂಪೇಶ್, ದೀಪಕ್ ಕೆ.ಪಿ, ಶ್ರೇಯ ಕೊಳತ್ತಾಯ, ವೇಣುಗೋಪಾಲ್ ಕಲಾವಿದರನ್ನು ಗೌರವಿಸಿದರು. ಬಹುಚನಂ ಕಾರ್ಯಕ್ರಮದ ಪ್ರೋತ್ಸಾಹಕರಾಗಿದ್ದು ಮೇ ೨೧ಕ್ಕೆ ನಿಧನರಾದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಶ್ರೀಧರ್ ಭಟ್ ಅವರ ಆತ್ಮಕ್ಕೆ ಚಿರಶಾಂತಿಗಾಗಿ ಕಾರ್ಯಕ್ರಮದ ಆರಂಭದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.

LEAVE A REPLY

Please enter your comment!
Please enter your name here