ಕೆಮ್ಮಾಯಿ: ಎಸ್.ವೈ.ಎಸ್ ವತಿಯಿಂದ ಸಾಧಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0

ಪುತ್ತೂರು: ಎಸ್.ವೈ.ಎಸ್ ಕೆಮ್ಮಾಯಿ ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಕೆಮ್ಮಾಯಿಯಲ್ಲಿರುವ ಎಸ್‌ವೈಎಸ್ ಕಚೇರಿಯಲ್ಲಿ ಮೇ.22ರಂದು ನಡೆಯಿತು.

ರಫೀಕ್ ಸಖಾಫಿ ಬಳ್ಳಾರಿ ಮಾತನಾಡಿ ವಿದ್ಯಾರ್ಥಿಗಳೇ ನೀವು ದೊಡ್ಡ ಕನಸು ಕಾಣಿರಿ ಮತ್ತು ಅದನ್ನು ಈಡೇರಿಸಲು ಸತತ ಪ್ರಯತ್ನ ನಡೆಸಿ ಎಂದು ಕಿವಿಮಾತು ಹೇಳಿದರು.

ಕೆಮ್ಮಾಯಿ ಜಮಾಅತ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಬಶೀರ್ ಹಾಜಿ ಮಾತನಾಡಿ ಕೆಮ್ಮಾಯಿಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆಗೈದಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದು ಹೇಳಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಎಸ್‌ವೈಎಸ್ ಕೆಮ್ಮಾಯಿ ಘಟಕದ ಅಧ್ಯಕ್ಷ ಅಬ್ದುಲ್ ರಹೀಂ ಕೆಮ್ಮಾಯಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಗುರಿ ತಲುಪುವವರೆಗೂ ನಿರಂತರ ಕಠಿಣ ಪರಿಶ್ರಮ ಪಡಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಾದ ಸಫಾ ಮರ್ಯಂ (607), ದೀನಾ ಮೈಮೂನ (558) , ಶಿಯಾ (551) ಆಯಿಷತ್ ಸಫ್ರೀನ, ಝೀನತ್ ನಿಹಾ, ಮುಹಮ್ಮದ್ ಅನೀಶ್, ಖಿಲ್ರ್ ಮುಹಮ್ಮದ್ ಆರಿಫ್, ಡಿ.ಕೆ ನಬೀಲ್, ಮುಹಮ್ಮದ್ ಅಲ್ತಾಫ್, ಸಹೀರ್, ಮುಂತಾದ 11 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಕೆಮ್ಮಾಯಿ ಜಮಾಅತ್ ಉಪಾಧ್ಯಕ್ಷ ಹಸನ್ ಹಾಜಿ ಗಾರ್ಬಲ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಜಿ, ಸಂಶುದ್ದೀನ್ ಗಾರ್ಬಲ್, ಆಸಿಫ್ ಕೆಮ್ಮಾಯಿ, ಅಝೀಝ್ ಕೆಮ್ಮಾಯಿ, ನೌಫಲ್ ಕೆಮ್ಮಾಯಿ, ಉಸ್ಮಾನ್ ಬೀರ್ನಹಿತ್ಲು, ಮುಹಮ್ಮದ್ ಅಫ್ರೀಝ್ ಉಪಸ್ಥಿತರಿದ್ದರು. ಎಸ್‌ವೈಎಸ್ ಕೆಮ್ಮಾಯಿ ಘಟಕದ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸ್ವಾಗತಿಸಿದರು. ರಫೀಕ್ ಕೆಮ್ಮಾಯಿ ವಂದಿಸಿದರು.

LEAVE A REPLY

Please enter your comment!
Please enter your name here