ಮೇ.25: ಬೊಳ್ವಾರಿನಲ್ಲಿ ಮಹಿಳೆಯರ ಸಿದ್ಧ ಉಡುಪುಗಳ ತಯಾರಿಕಾ ಘಟಕ ಎಸ್.ಬಿ ಎಂಟರ್‌ಪ್ರೈಸಸ್ ಶುಭಾರಂಭ

0

ಪುತ್ತೂರು: ಮಹಿಳೆಯರ ಸಿದ್ಧ ಉಡುಪುಗಳ ತಯಾರಿಕಾ ಘಟಕವಾದ ಎಸ್.ಬಿ ಎಂಟರ್‌ಪ್ರೈಸಸ್(ಶ್ರೀ ಭಗವತಿ ಎಂಟರ್‌ಪ್ರೈಸಸ್) ಸಂಸ್ಥೆಯು ಬೊಳ್ವಾರು ಮುಖ್ಯ ರಸ್ತೆಯ ಆಕ್ಸಿಸ್ ಬ್ಯಾಂಕಿನ ಎದುರುಗಡೆ ಇರುವ ಜಿ.ಎಲ್ ಟ್ರೇಡ್ ಸೆಂಟರ್‌ನಲ್ಲಿ ಮೇ.25 ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಸಂಸ್ಥೆಯನ್ನು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶಾಸಕ ಸಂಜೀವ ಮಠಂದೂರುರವರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಯಂತ್ರ ಚಾಲನೆಯನ್ನು ಜೀ.ಎಲ್ ಸಮೂಹ ಸಂಸ್ಥೆಗಳ ಚೇರ್‌ಮ್ಯಾನ್  ರಾಜಿ ಬಲರಾಮ, ಬಲರಾಮ ಆಚಾರ್ಯರವರು ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಉಪಾಧ್ಯಕ್ಷೆ  ವಿದ್ಯಾ ಆರ್.ಗೌರಿ, ಚನಿಲ ತಿಮ್ಮಪ್ಪ ಶೆಟ್ಟಿ, ಪಡೀಲ್ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಯು.ಮಹಮದ್ ಹಾಜಿ ಪಡೀಲು, ಉಜಿರೆ ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೇವಸ್ಥಾನದ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಹಿರಿಯ ಟೈಲರ್ ಪಿ.ಆನಂದ ಟೈಲರ್‌ರವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ  ಮಮತಾ ನಾರಾಯಣ್ ಬಲ್ನಾಡುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here