ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ, ದೀಕ್ಷಾ ಸಮಾರಂಭ

0

ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಹಾಗೂ ಶಾಲಾ ಪ್ರಾರಂಭೋತ್ಸವವು ಜರುಗಿತು.

ಸಂಸ್ಥೆಯ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರರವರು ಮಾತನಾಡಿ ಸಾಧನೆಯನ್ನು ಮಾಡುತ್ತಾ ಜ್ಞಾನವನ್ನು ಗಳಿಸಿ ಸಮಾಜದ ಬೇರೆ ಬೇರೆ ಸ್ಥಳಗಳಲ್ಲಿ ಮಿಂಚು ವಂತಾಗಲಿ ಶ್ರೀಕೃಷ್ಣ ಪರಮಾತ್ಮನು ಕೀರ್ತಿ, ಶ್ರೇಯಸ್ಸು, ಸಂಪತ್ತನ್ನು ನೀಡಲಿ ಎಂದು ಆಶೀರ್ವದಿಸಿದರು. ಸಂಚಾಲಕರಾದ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ ಮಾನವೀಯತೆಯಿಂದ ಪ್ರಬುದ್ಧರಾಗಿ ಬೆಳೆದರೆ ಅದುವೇ ಶಿಕ್ಷಣ. ಶ್ರಮಪಟ್ಟು ಕಲಿತು ಸುಸಂಸ್ಕತ ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ದತ್ತ ಮೆಡಿಕಲ್ಸ್ ಮಾಲಕರಾದ ರಾಮದಾಸ್ ಪ್ರಭುರವರು ಶೈಕ್ಷಣಿಕ ವರ್ಷಕ್ಕೆ ಶುಭಾಶಯ ಕೋರಿದರು. ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. 

 

ಶಾಲಾ ಮುಖ್ಯೋಪಾಧ್ಯಾಯರಾದ ಜಯಮಾಲಾ ವಿ ಎನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ದೀಕ್ಷೆ ನೀಡಿದರು. ಮತ್ತು ಆರತಿ ಬೆಳಗಿ ತಿಲಕವಿಡುವ ಮೂಲಕ ಹೊಸ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲಾಯಿತು. 
ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಕೆದಿಲಾಯ ರವರು ಎಲ್ಲರನ್ನೂ ಸ್ವಾಗತಿಸಿ ರವಿಶಂಕರ್ ರವರು ಧನ್ಯವಾದಗೈದರು.

LEAVE A REPLY

Please enter your comment!
Please enter your name here