ಎಸ್ಸೆಸ್ಸೆಲ್ಸಿ: ಸರ್ವೆ ಕಲ್ಪನೆ ಸರಕಾರಿ ಪ್ರೌಢ ಶಾಲೆಗೆ ಶೇ. 92 ಫಲಿತಾಂಶ

0

  • 7 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

 

 

ಪುತ್ತೂರು: 2021-22ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ವೆ ಕಲ್ಪನೆ ಸರಕಾರಿ ಪ್ರೌಢ ಶಾಲೆಗೆ ಎ.ಗ್ರೇಡ್ ನೊಂದಿಗೆ 92% ಫಲಿತಾಂಶ ಲಭಿಸಿದೆ. ಕರ್ಮಿನಡ್ಕ ರಾಮಣ್ಣ ಮತ್ತು ಕಮಲರವರ ಪುತ್ರ ಕೀರ್ತನ್ 591(94.56%) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು ನೆಕ್ಕಿಲು ಎಸ್ ಅಶೋಕ ಮತ್ತು ಎನ್ ಸವಿತಾರವರ ಪುತ್ರಿ ರಶ್ಮಿತಾ ಎನ್ 589(94.24%)ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ಕಲ್ಪನೆ ಕೆ.ಇಬ್ರಾಹಿಂ ಬ್ಯಾರಿ ಮತ್ತು ಕೆ.ವಿ ಸಫಿಯರವರ ಪುತ್ರಿ ಆಯಿಶತ್ ಸಫಾನ 577 (92.32)ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಬಾಕುಡ ಅಬ್ದುಲ್ ರಝಾಕ್ ಮತ್ತು ಐಸಬಿಯವರ ಪುತ್ರಿ ಝೌರ 566 ಅಂಕ (90.56%), ಆಲ್‌ಮಜಲು ಕೃಷ್ಣಪ್ಪ ಎಚ್.ಎಸ್ ಮತ್ತು ರೇಖಾ ಎಚ್.ಎಸ್‌ರವರ ಪುತ್ರಿ ಸ್ನೇಹ 538 ಅಂಕ (86.08%), ರೆಂಜಲಾಡಿ ಇಸುಬು ಎ ಮತ್ತು ಜೈನಾಬಿ ಅವರ ಪುತ್ರಿ ಇಂಶೀನ 537 ಅಂಕ (85.92%) ಸೊರಕೆ ಜಯಂತ ಮತ್ತು ಲಲಿತಾರವರ ಪುತ್ರಿ ಮಧುಶ್ರೀ 532 ಅಂಕ (85.10%)ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 25 ಮಕ್ಕಳಲ್ಲಿ 7 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 10 ಮಂದಿ ಪ್ರಥಮ ದರ್ಜೆ, 4 ಮಂದಿ ದ್ವಿತೀಯ ದರ್ಜೆ 2 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ ಶೆಟ್ಟಿ ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here