ಪುತ್ತೂರು : ಬೆಳಿಯೂರುಕಟ್ಟೆ ಸರಕಾರಿ ಪ.ಪೂ.ಕಾಲೇಜಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.92 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 37 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಮರೀನಾ ಮೊಂತೆರೊ(594 ಶೇ.95), ಪ್ರಿಯಾಂಕ (590 ಶೇ.94.4), ಫಾತಿಮ (564 ಶೇ.90.24), ಪ್ರೀತಮ್ (552 ಶೇ.88.32), ವಿನ್ಯಾಸ್ (538 ಶೇ.86.08)ರವರು ವಿಶಿಷ್ಟ ಶ್ರೇಣಿ ಹಾಗೂ ತನುಶ್ರೀ (523 ಶೇ.83.68), ಮಹಮ್ಮದ್ ಸುಹೈಬ್ (520 ಶೇ.83.20)ರವರು ಉತ್ತಮ ಅಂಕ ಪಡೆದಿದ್ದಾರೆ.