ಬಡಗನ್ನೂರುಃ ಘನತ್ಯಾಜ ನಿರ್ವಹಣೆಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಬರೆಯಲು ಬಡಗನ್ನೂರು ಗ್ರಾ.ಪಂ ಸಭೆಯಲ್ಲಿ ನಿರ್ಣಯಗೊಂಡಿತು.

0

  • ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಮೇ 18 ರಂದು ನಡೆಯಿತು.

15 ಹಣಕಾಸು ಯೋಜನೆಯಲ್ಲಿ  ಘನತ್ಯಾಜ  ನಿರ್ವಹಣೆ ಮಾಡಲು  ಅನುದಾನ ಸಾಕಗುತ್ತಿಲ್ಲ . ಗ್ರಾಮದ ಸಂಪೂರ್ಣ ಸ್ವಚ್ಚತೆ ಮಾಡಿ ಕಸ ವಿಲೇವಾರಿ ಮಾಡಲು ಸರ್ಕಾರ ಈಗ ನೀಡುತ್ತಿರುವ ಅನುದಾನದಿಂದ ಸಾಧ್ಯವಿಲ್ಲ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಉಪಾಧ್ಯಕ್ಷ ಸಂತೋಷ್ ಆಳ್ವ ವಿಷಯ ಪ್ರಸ್ತಾಪ ಮಾಡಿದರು ಈ ಬಗ್ಗೆ ಸರ್ಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಿದರು ಬಳಿಕ ಚರ್ಚಿಸಿ ಸರ್ವಸದಸ್ಯರ ಒಮ್ಮತದಿಂದ ಸರ್ಕಾರಕ್ಕೆ ಬರೆಯಲು ತೀರ್ಮಾನಿಸಲಾಯಿತು.
ಗ್ರಾ.ಪಂ ಸಿಬ್ಬಂದಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಸಿಬ್ಬಂದಿಗಳ ವೇತನ ಹೆಚ್ಚಳ ಮಾಡಿಲ್ಲ. ಉಳಿದ ಪಂಚಾಯತಿಗೆ ಹೋಲಿಕೆ ಮಾಡಿದರೆ ಇದು ಬಹಳ ಕಡಿಮೆ. ನಮ್ಮ ಪಂಚಾಯತಿಗೆ ಅದಾಯ ಕೂಡ ಕಡಿಮೆ ಇದೆ. ಈ ದೃಷ್ಟಿಯಿಂದ ಕನಿಷ್ಠ ವೇತನ ಹೆಚ್ಚಳ ಮಾಡಲಾಗಿದೆ ಎಂದು ಪಿಡಿಒ ವಸೀಮ ಗಂಧದ ಸಭೆಯ ಗಮನಕ್ಕೆ ತಂದರು ಈ ಬಗ್ಗೆ ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು ಬಳಿಕ  ವೇತನ ಹೆಚ್ಚಳ ನಿರ್ಣಯ ಕೈಗೊಳ್ಳಲಾಯಿತು.
ಜಿ.ಪಂ ಹಾಗೂ ಲೋಕೋಪಯೋಗಿ ಇಲಾಖೆ ಸಂಬಂಧಿಸಿದಂತೆ ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ರಸ್ತೆಯ ಮೇಲೆ ಹರಿದು ರಸ್ತೆ ಹಾಳಾಗುತ್ತಿದೆ. ಚರಂಡಿ ದುರಸ್ತಿ ವ್ಯವಸ್ಥೆ ಆಗಬೇಕು ಎಂದು ಉಪಾಧ್ಯಕ್ಷ ಸಂತೋಷ್ ಅಳ್ವ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಪಿಡಿಒ ವಸೀಮ ಗಂಧದ ಜಿ.ಪಂ ಹಾಗೂ ಪಿಡಬ್ಯಡಿ ರಸ್ತೆಯ ಚರಂಡಿ ನಿರ್ಮಾಣ ಹಾಗೂ ದುರಸ್ತಿಗೆ ಆ ಇಲಾಖೆಯಲ್ಲಿ ಪ್ರತ್ಯೇಕ ಅನುದಾನ ಇಟ್ಟಿರುತ್ತಾರೆ.  ಅದರಿಂದ ಆ  ಇಲಾಖೆಯವರು ನಿರ್ವಹಣೆ  ಮಾಡಬೇಕು. ಪಂಚಾಯತ್ ರಸ್ತೆಯ ಚರಂಡಿ ಹಾಗೂ ದುರಸ್ತಿಗಳಿದ್ದರೆ ಪಂಚಾಯತ್  ಅನುದಾನದಲ್ಲಿ ಮಾಡುವ ಎಂದು ಉತ್ತರಿಸಿದರು. ಬಳಿಕ ಈ ಬಗ್ಗೆ ಚರ್ಚಿಸಿ  ಜಿ.ಪಂ ಹಾಗೂ ಪಿಡಬ್ಯೂಡಿ ರಸ್ತೆಯ ಚರಂಡಿ ನಿರ್ಮಾಣ ಹಾಗೂ ದುರಸ್ತಿಗಳನ್ನು ಆ ಇಲಾಖೆ ತಕ್ಷಣ ನಿರ್ವಹಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು  ತೀರ್ಮಾನಿಸಲಾಯಿತು. 
ವಲಯ ಅರಣ್ಯ ಹಾಗೂ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡುವಂತೆ ಸಂಬಂಧ ಪಟ್ಟ ಇಲಾಖೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಈಶ್ವರಮಂಗಲ ಸುಳ್ಯಪದವು ಲೋಕೋಪಯೋಗಿ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಬರೆಯಲಾಗಿತ್ತು. ಅದರೆ ತೆರವು ಗೊಳಿಸುವಲ್ಲಿ ವಿಳಂಬಗೊಂಡಿತ್ತು. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದಾಗ ರಸ್ತೆ ಬದಿಯ ಮರ ಕಡಿದು ಹಾಕಿದ್ದಾರೆ ಆದರೆ ಈ ವರೆಗೆ ಕಡಿದು ಹಾಕಿದ ಮರವನ್ನು ತೆರವುಗೊಳಿಸಿಲ್ಲ. ಇದರಿಂದ  ಚರಂಡಿಯಲ್ಲಿ ನೀರು ನಿಂತು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸದಸ್ಯ ರವಿರಾಜ ರೈ ಸಜಂಕಾಡಿ ಹೇಳಿದರು ಈ ಬಗ್ಗೆ  ಎಡಿ ಎಲ್ ಆರ್  ರವರೆಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
 
ಅಕ್ಷರದಾಸೋಹ ಸಿಬ್ಬಂದಿ ಅಯ್ಕೆ ವಿಚಾರದಲ್ಲಿ ಚರ್ಚೆ
ಬಡಗನ್ನೂರು ದ.ಕ.ಜಿ.ಪಂ ಉ.ಪ್ರಾ.ಶಾಲಾ ಅಕ್ಷರದಾಸೋಹ ಸಿಬ್ಬಂದಿಯೋರ್ವರು ನಿವೃತ್ತಿ ಹೊಂದಲಿರುವ ನಿಟ್ಟಿನಲ್ಲಿ ನೂತನ ಸಿಬ್ಬಂದಿ ಅಯ್ಕೆ ಪ್ರಕ್ರಿಯೆಯನ್ನು ಗ್ರಾ.ಪಂ ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಹಾಗೂ ಮುಖ್ಯ ಶಿಕ್ಷಕರು ಸೇರಿ ಅಯ್ಕೆ  ಪದ್ದತಿ ಇದರಲ್ಲಿ ಪಂಚಾಯತಿಗೆ ಯಾವ ಅಧಿಕಾರ ಇಲ್ಲ. ಅದರೆ ಶಾಲಾ ಮುಖ್ಯ ಶಿಕ್ಷಕರು ತಮ್ಮ ಭಾರ ತಪ್ಪಿಸುವ ನಿಟ್ಟಿನಲ್ಲಿ  ಅಯ್ಕೆ ವಿಚಾರದಲ್ಲಿ ಪಂಚಾಯತಿಗೆ ನೀಡಿದ್ದಾರೆ. ಈ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸದಸ್ಯರ ಒಮ್ಮತದಿಂದ ಸುಜಾತ ಎಂಬಾಕೆಯನ್ನು ಅಯ್ಕೆ ಮಾಡುವ ಬಗ್ಗೆ ನಿರ್ಣಯ ಕೈಗೊಂಡಿದ್ದೇವೆ. ಆದರೆ ಈಗ ಪಂಚಾಯತಿನ ಗಮನಕ್ಕೆ ತರದೆ ಶಾಲಾಭಿವೃದ್ದಿ ಸಮಿತಿ ಸದಸ್ಯರು ಇನ್ನೋರ್ವ ಪ್ರೇಮ ಎಂಬಾಕೆಯನ್ನು ಅಯ್ಕೆ ಮಾಡಿರುವುದು ಎಷ್ಟು ಸರಿ  ಆಗಿದ್ದರೆ ಮೊದಲೇ ಅಯ್ಕೆ ಪ್ರಕ್ರಿಯೆ ಮಾಡಬೇಕಿತ್ತು ಪಂಚಾಯತಿಗೆ ಯಾಕೆ ಮಾಡಲು ಹೇಳಿದ್ದು ಎಂದು ಉಪಾಧ್ಯಕ್ಷ ಸಂತೋಷ್ ಆಳ್ವ ಅಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶ್ರೀಮತಿ ಕೆ .ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಮಾತ್ರ ಬೆಲೆ ಇರವುದೋ ಪಂಚಾಯತ್ ಸದಸ್ಯರಿಗೆ ಬೆಲೆ ಇಲ್ಲವೋ ಎಂದು ಪ್ರಶ್ನಿಸಿದರು ನಮ್ಮ ನಿರ್ಣಯ ಬದಲಾವಣೆ ಮಾಡಲು ಸಾಧ್ಯವಿಲ್ಲ  ಅಯ್ಕೆ ಮಾಡಿದ ಸಿಬ್ಬಂದಿಗೆ ಅವರೇ ಸಂಬಳ ನೀಡಲಿ ಎಂದು ಗರಂ ಅದರು.
ಶಾಲಾಭಿವೃದ್ದಿ ಸಮಿತಿಯವರು ಪ್ರೇಮ ಎಂಬಾಕೆಯನ್ನು ಆಯ್ಕೆ ಮಾಡಿ ಅನುಮೋದನೆಗೆ ಕಳಿಸಿದ್ದಾರೆ ಇದಕ್ಕಿಂತ ಮೊದಲು ಅವರಿಗೆ ಪಿಡಿಒ ಬೆಕಾಗಿಲ್ಲವಂತೆ ಈಗ ಪಿಡಿಒ ಬೇಕಾಗಿದ್ದಾರೆ. ಬಂದ ಅರ್ಜಿಯನ್ನು ಹಾಗೆ ಇಟ್ಟುಕೊಂಡಿದ್ದೇನೆ. ನನ್ನ ಹಾಗೂ ಅಧ್ಯಕ್ಷರ ಸಹಿ ಅಗತ್ಯ ಎಂದು ಪಿಡಿಒ ವಸೀಮ ಗಂಧದ ಹೇಳಿದರು.
 ವೇದಿಕೆಯಲ್ಲಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ಪಿಡಿಒ ವಸೀಮ ಗಂಧದ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ ರವಿರಾಜ ರೈ ಸಜಂಕಾಡಿ, ಧರ್ಮೇಂದ್ರ ಪದಡ್ಕ, ಲಿಂಗಪ್ಪ ಮೋಡಿಕೆ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮೂಲೆ, ವೆಂಕಟೇಶ್ ಕನ್ನಡ್ಕ,ಪುಷ್ಪಾವತಿ ದೇವಕಜ್ಜೆ, ಸುಶೀಲ ಪಕ್ಕೊಡು, ಜ್ಯೋತಿ ಅಂಬಟೆಮೂಲೆ, ಸವಿತಾ ನೇರೋತ್ತಡ್ಕ, ಸುಜಾತ ಎಂ, ದಮಯಂತಿ ನೆಕ್ಕರೆ, ಕಲಾವತಿ ಗೌಡ ಪಟ್ಲಡ್ಕ ಹೇಮಾವತಿ ಮೋಡಿಕೆ ಉಪಸ್ಥಿತರಿದ್ದರು
ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here