ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು – ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • ಕೊಳ್ತಿಗೆ ಗ್ರಾಮ ಪಂಚಾಯತ್

ಕೊಳ್ತಿಗೆ ಗ್ರಾ.ಪಂ.ನಲ್ಲಿ ಲಂಚ ಮುಕ್ತ ಮಾಡಲು ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ

 

 

ಕೊಳ್ತಿಗೆ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ಪಂಚಾಯತ್ ಮಟ್ಟದಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ. ಪಂಚಾಯತ್ ಮಟ್ಟದಲ್ಲಿ ಯಾವುದೇ ಲಂಚ, ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಲಾಗಿದೆ. ಗ್ರಾಮಸ್ಥರು ನೇರವಾಗಿ ಬಂದು ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು. ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವಾಗಬೇಕು ಎಂಬುದು ಸರಕಾರಿ ಅಧಿಕಾರಿಗಳ ವಲಯದಲ್ಲಿ ಅನುಷ್ಠಾನವಾದರೆ ಇದು ಖಂಡಿತ ಸಾಧ್ಯವಿದೆ. ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡುತ್ತೇವೆ ಈ ಬಗ್ಗೆ ಪ್ರಯತ್ನ ಮಾಡುತ್ತೇವೆ. ಲಂಚ, ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುವಂತೆ ಮಾಡಿದ ಸುದ್ದಿಯ ಡಾ.ಯು.ಪಿ.ಶಿವಾನಂದರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. – ಶ್ಯಾಮ್‌ಸುಂದರ್ ರೈ , ಅಧ್ಯಕ್ಷರು ಕೊಳ್ತಿಗೆ ಗ್ರಾಪಂ

ಗ್ರಾಮಸ್ಥರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ

 


ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವಾಗಬೇಕಾದರೆ ಮೊದಲನೆಯದಾಗಿ ಗ್ರಾಮಸ್ಥರಿಗೆ ಲಂಚ, ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಮತ್ತು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಇದನ್ನು ಸುದ್ದಿ ಪತ್ರಿಕೆ ಮಾಡುತ್ತಿದೆ. ಅದೇ ರೀತಿಯಲ್ಲಿ ಗ್ರಾಮದಲ್ಲಿ ಗ್ರಾಮಸ್ಥರನ್ನು ಸೇರಿಸಿ ಸಭೆ ನಡೆಸಿ ಅವರಿಗೆ ನಾವು ಲಂಚ, ಭ್ರಷ್ಟಾಚಾರದಿಂದ ಆಗುವ ತೊಂದರೆಗಳನ್ನು ಮತ್ತು ಇದನ್ನು ತಡೆಗಟ್ಟುವ ಬಗ್ಗೆಯೂ ಮಾಹಿತಿ ನೀಡಬೇಕಾಗಿದೆ. ಕೊಳ್ತಿಗೆಯಲ್ಲಿ ಬಹಳಷ್ಟು ಮಂದಿ ರೈತರೇ ಇರುವುದರಿಂದ ಅವರಿಗೆ ಈ ಲಂಚ, ಭ್ರಷ್ಟಾಚಾರದ ಅಗತ್ಯತೆಯೂ ಇರುವುದಿಲ್ಲ. ನಮ್ಮ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ನಾವೆಲ್ಲರೂ ಪ್ರಯತ್ನ ಪಡುತ್ತೇವೆ. ತೀರ್ಥಾನಂದ ದುಗ್ಗಳ, ಸದಸ್ಯರು ಎಪಿಎಂಸಿ ಪುತ್ತೂರು

 

ಕೊಳ್ತಿಗೆ ಗ್ರಾಮ ಶೇ.75 ಲಂಚ, ಭ್ರಷ್ಟಾಚಾರ ಮುಕ್ತವಾಗಿದೆ

ಕೊಳ್ತಿಗೆ ಗ್ರಾಮದಲ್ಲಿ ಸರಕಾರಿ ಶಾಲೆಗಳು ಲಂಚ,ಭ್ರಷ್ಟಾಚಾರ ಮುಕ್ತವಾಗಿವೆ, ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಲಂಚ, ಭ್ರಷ್ಟಾಚಾರ ಮುಕ್ತವಾಗಿದೆ, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಯಾವುದೇ ಲಂಚ, ಭ್ರಷ್ಟಾಚಾರವಿಲ್ಲ, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಲಂಚ, ಭ್ರಷ್ಟಾಚಾರ ಇಲ್ಲ ಹಾಗೆಯೇ ಗ್ರಾಮ ಪಂಚಾಯತ್, ಕಂದಾಯ ಇಲಾಖೆಯಲ್ಲೂ ಲಂಚ, ಭ್ರಷ್ಟಾಚಾರ ಮುಕ್ತವಾಗಲು ಪ್ರಯತ್ನ ನಡೆಯುತ್ತಿದೆ. ಒಟ್ಟಿನಲ್ಲಿ ಗ್ರಾಮ ಶೇ.೭೫ ಲಂಚ, ಭ್ರಷ್ಟಾಚಾರ ಮುಕ್ತವಾಗಿದೆ. ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮ ಮಾಡುವಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಪ್ರಮೋದ್ ಕೆ.ಎಸ್, ಅಧ್ಯಕ್ಷರು ಕೊಳ್ತಿಗೆ ಗ್ರಾಮ ಅರಣ್ಯ ಸಮಿತಿ, ಸದಸ್ಯರು ಗ್ರಾಪಂ

ಕೊಳ್ತಿಗೆಯನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮ ಮಾಡುತ್ತೇವೆ

ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮ ಎಂಬುದು ಒಂದು ಒಳ್ಳೆಯ ಪರಿಕಲ್ಪನೆಯಾಗಿದೆ. ಈ ನಿಟ್ಟಿನಲ್ಲಿ ಡಾ.ಯು.ಪಿ ಶಿವಾನಂದರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೊಳ್ತಿಗೆ ಗ್ರಾಮದಲ್ಲಿ ಈಗಾಗಲೇ ಪಂಚಾಯತ್ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡಿಯೇ ಮಾಡುತ್ತೇವೆ. ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಯಾವುದೇ ರೀತಿಯ ಲಂಚ, ಭ್ರಷ್ಟಾಚಾರ ನಡೆಯುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ.ಗ್ರಾಮದ ಸರ್ವ ಜನರ ಸಹಕಾರ ಹಾಗೂ ಅಧಿಕಾರಿ ಮತ್ತು ಸರಕಾರ ಪ್ರೋತ್ಸಾಹ ನೀಡಿದರೆ ಖಂಡಿತ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡಲು ಸಾಧ್ಯವಿದೆ. ವಸಂತ ಕುಮಾರ್ ರೈ ದುಗ್ಗಳ, ಅಧ್ಯಕ್ಷರು ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ಸದಸ್ಯರು ಗ್ರಾಪಂ

LEAVE A REPLY

Please enter your comment!
Please enter your name here