ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು – ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • 34-ನೆಕ್ಕಿಲಾಡಿ ಗ್ರಾಮ ಪಂಚಾಯತ್

ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ

34-ನೆಕ್ಕಿಲಾಡಿ ಗ್ರಾಮ ಪಂಚಾಯತ್‌ನಲ್ಲಿ ಲಂಚ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಸಿ.ಸಿ ಕ್ಯಾಮರಾ ಮೂಲಕ ಪ್ರತಿಯೊಂದು ಕೆಲಸಗಳನ್ನು ಗಮನಿಸಲಾಗುತ್ತದೆ. ಗ್ರಾಮದ ಯಾವುದೇ ಕಾಮಗಾರಿಗಳಲ್ಲಿ ಅವ್ಯವಹಾರ, ಕಳಪೆ ಕಾಮಗಾರಿ ಆಗದಂತೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರ ಮೂಲಕ ಗಮನಿಸಲಾಗುವುದು. ಲಂಚ, ಭ್ರಷ್ಟಾಚಾರದ ವಿರುದ್ಧ ಈಗಾಗಲೇ ಗ್ರಾ.ಪಂ. ನಿರ್ಣಯ ಅಂಗೀಕರಿಸಲಾಗಿದೆ. ಸುದ್ದಿ ಜನಾಂದೋಲನಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪ್ರಶಾಂತ್, ಅಧ್ಯಕ್ಷರು, 34ನೆಕ್ಕಿಲಾಡಿ ಗ್ರಾಮ ಪಂಚಾಯತ್

——————————————————–

ಆಂದೋಲನದಿಂದ ಸಾರ್ವಜನಿಕರಲ್ಲಿ ಜಾಗೃತಿ ಉಂಟಾಗುತ್ತದೆ

ಸುದ್ದಿ ಪತ್ರಿಕೆ ಹಮ್ಮಿಕೊಂಡ ಈ ಆಂದೋಲನ ಶ್ಲಾಘನೀಯ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ವ್ಯಕ್ತಿಯಲ್ಲಿ ನೈತಿಕತೆ ಇರಬೇಕು. ಫಲಕ ಹಿಡಿದುಕೊಂಡರೆ ಭ್ರಷ್ಟಾಚಾರ ನಿರ್ಮೂಲನೆ ಆಗುವುದಿಲ್ಲ. ಸಾರ್ವಜನಿಕರಲ್ಲಿ ಇದರಿಂದ ಜಾಗೃತಿ ಉಂಟಾಗುತ್ತದೆ. ಸರಕಾರಿ ಕಛೇರಿಗಳಲ್ಲಿ ಸ್ವಲ್ಪ ಮಟ್ಟಿಗೆ ಭ್ರಷ್ಟಾಚಾರ ನಿರ್ಮೂಲನೆ ಆಗಿದೆ. ನಾನು ಒಬ್ಬ ಸರಕಾರಿ ವೈದ್ಯನಾಗಿದ್ದೆ ಈ ತನಕ ಭ್ರಷ್ಟಾಚಾರ ನಡೆಸಿಲ್ಲ. ಭ್ರಷ್ಟಾಚಾರ ದೇಶದಲ್ಲಿಯೇ ನಿರ್ಮೂಲನೆ ಆಗಬೇಕು. ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿ ಭ್ರಷ್ಟಾಚಾರ ಮುಕ್ತ ಆಗಲು ಸಂಪೂರ್ಣ ಸಹಕಾರ ಇದೆ. ಡಾ. ಬಿ. ರಘು ಶಾಂತಿನಗರ, ಖ್ಯಾತ ವೈದ್ಯರು

——————————————————–

ನೆಕ್ಕಿಲಾಡಿ ಗ್ರಾ.ಪಂ. ಭ್ರಷ್ಟಾಚಾರದ ವಿರುದ್ಧ ನಿರ್ಣಯ ಕೈಗೊಂಡಿರುವುದು ಉತ್ತಮ ಬೆಳವಣಿಗೆ

೩೪ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತವಾಗಲಿದೆ. ಈ ಹಿಂದೆಯೂ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸಿದ್ದೇವೆ. ಯಾವ ರೀತಿಯಲ್ಲಿಯೂ ಭ್ರಷ್ಟಾಚಾರ ಆಗದಂತೆ, ಕಳಪೆ ಕಾಮಗಾರಿ ನಡೆಯದಂತೆ, ಸರಕಾರಿ ಅನುದಾನ ದುರ್ಬಳಕೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಸುದ್ದಿ ಬಳಗದಿಂದ ನಡೆಯುತ್ತಿರುವ ಜನಾಂದೋಲನ ನಮಗೆ ಇನ್ನಷ್ಟು ಶಕ್ತಿ ತುಂಬಿದೆ. ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಲಂಚ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಯವರು ನಿರ್ಣಯ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಮತ್ತು ಶ್ಲಾಘನೀಯವಾಗಿದೆ. ಭ್ರಷ್ಟಾಚಾರ ಯಾರೇ ನಡೆಸಿದರೂ ಅದನ್ನು ವಿರೋಧಿಸುತ್ತೇವೆ. ಭ್ರಷ್ಟಾಚಾರದ ವಿರುದ್ಧ ಯಾರು ಹೋರಾಟ ನಡೆಸಿದರೂ ಅವರಿಗೆ ಬೆಂಬಲ ನೀಡುತ್ತೇವೆ. ಎ.ಜತೀಂದ್ರ ಶೆಟ್ಟಿ, ಅಧ್ಯಕ್ಷರು, ನಮ್ಮೂರು ನೆಕ್ಕಿಲಾಡಿ

——————————————————–

ಭ್ರಷ್ಟಾಚಾರ ಮುಕ್ತ ಆಗಲು ಸಹಕಾರ
ಸುದ್ದಿ ಬಳಗದ ಆಂದೋಲನ ನೋಡುತ್ತಿದ್ದೇವೆ. ಇದರಿಂದ ಎಲ್ಲಾ ಅಧಿಕಾರಿ ವರ್ಗವೇ ಹೆದರಿಕೆಯಲ್ಲಿದ್ದಾರೆ. ಭ್ರಷ್ಟಾರಾದವರು ಈ ಆಂದೋಲನದಿಂದ ಸ್ವಲ್ಪ ಆಲೋಚಿಸಿಯೇ ಮಾತನಾಡುತ್ತಾರೆ. ನೆಕ್ಕಿಲಾಡಿ ಗ್ರಾ.ಪಂ.ಭ್ರಷ್ಟಾಚಾರ ಮುಕ್ತ ಆಗಲು ಸಂಪೂರ್ಣ ಸಹಕಾರ ಇದೆ. ಹಾರುನ್ ರಶೀದ್ ಅಗ್ನಾಡಿ,ಮಾಜಿ ಅಧ್ಯಕ್ಷರು,ಉಪ್ಪಿನಂಗಡಿ ವರ್ತಕ ಸಂಘ

LEAVE A REPLY

Please enter your comment!
Please enter your name here