ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು – ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • ಬನ್ನೂರು ಗ್ರಾಮ ಪಂಚಾಯತ್

 

ಜನಾಂದೋಲನದಿಂದ ಸಮಾಜ ಎಚ್ಚೆತ್ತುಕೊಂಡಿದೆ

ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿಯ ಜನಾಂದೋಲನದಿಂದ ಸಮಾಜ ಎಚ್ಚೆತ್ತುಕೊಂಡಿದೆ. ಲಂಚ, ಭ್ರಷ್ಟಾಚಾರ ದೇಶ, ರಾಜ್ಯ, ಜಿಲ್ಲೆ, ತಾಲೂಕಿನಲ್ಲಿ ನಿಲ್ಲಬೇಕು. ಇದು ನಿಲ್ಲಬೇಕಾದರೆ ಗ್ರಾಮ ಮಟ್ಟದಿಂದಲೇ ನಾವು ಅಂದೋಲನವನ್ನು ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಂಚ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಬಹಿಷರಿಸುತ್ತೇವೆ. ಜಯ ಏಕ, ಅಧ್ಯಕ್ಷರು, ಗ್ರಾಮ ಪಂಚಾಯತ್ ಬನ್ನೂರು

——————————————————

ಲಂಚ-ಭ್ರಷ್ಟಾಚಾರದ ವಿರುದ್ಧದ ಆಂದೋಲನ ಉತ್ತಮ ಕೆಲಸ

ಸುದ್ದಿ ಕೈಗೆತ್ತಿಕೊಂಡ ಲಂಚ-ಭ್ರಷ್ಟಾಚಾರ ವಿರುದ್ಧದ ಆಂದೋಲನ ಉತ್ತಮ ಕೆಲಸ. ಇದನ್ನು ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಬೆಂಬಲಿಸಬೇಕು. ಹಾಗಾದರೆ ಮಾತ್ರ ಈ ಅಂದೋಲನ ಯಶಸ್ವಿಯಾಗುತ್ತದೆ. ಇದು ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಹೋಗಬೇಕು, ಸಾರ್ವಜನಿಕರು ಸಂಪೂರ್ಣ ಕೈ ಜೋಡಿಸಬೇಕು. ಹೋರಾಟಕ್ಕೆ ನಮ್ಮ ಬೆಂಬಲವಿದೆ, ಲಂಚ, ಭ್ರಷ್ಟಾಚಾರ ನಿಲ್ಲಬೇಕು. ರಾಜಶೇಖರ ಜೈನ್ ಬನ್ನೂರು
ಉಪಾಧ್ಯಕ್ಷರು, ಬನ್ನೂರು ರೈತರ ಸೇವಾ ಸಹಕಾರಿ ಸಂಘ

——————————————————
ಜನಾಂದೋಲನಕ್ಕೆ ಸಂಪೂರ್ಣ ಬೆಂಬಲ
ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿಯ ಜನಾಂದೋಲನ ಉತ್ತಮ ಕೆಲಸ. ಭ್ರಷ್ಟಾಚಾರ ನಡೆದರೆ ಜನಸಾಮಾನ್ಯರಿಗೆ ಭಾರೀ ತೊಂದರೆಯಾಗುತ್ತದೆ. ಇದು ದೇಶ ವ್ಯಾಪ್ತಿಯಲ್ಲಿ ಈಗ ಕಡಿಮೆಯಾಗುತ್ತಿದ್ದು ಇದು ಸಂಪೂರ್ಣ ಕಡಿಮೆಯಾಗಬೇಕಾಗಿದೆ, ಈ ಬಗ್ಗೆ ನಮ್ಮ ಗ್ರಾಮ ಪಂಚಾಯತು ಆಡಳಿತ ಮಂಡಳಿ ಸಹ ಚಿಂತಿಸಿದ್ದು ನಾವು ನಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸುತ್ತಿದ್ದೇವೆ. ರಮಣಿ ಡಿ. ಗಾಣಿಗ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಗ್ರಾ. ಪಂ. ಬನ್ನೂರು

——————————————————

ಭ್ರಷ್ಟಾಚಾರ ರಾಜ್ಯ, ದೇಶದಲ್ಲಿಯೇ ನಿಲ್ಲಬೇಕು
ಸುದ್ದಿ ಪತ್ರಿಕೆ ಆಂದೋಲನವನ್ನು ಕೈಗೆತ್ತಿಕೊಂಡು ಹಲವು ಸಮಯದಿಂದ ಸಾರ್ವಜನಿಕರ ಬೆಂಬಲದೊಂದಿಗೆ ಕೆಲಸ ಮಾಡುತ್ತಿದೆ. ಲಂಚ, ಭ್ರಷ್ಟಾಚಾರ ನಮ್ಮ ಊರು, ರಾಜ್ಯ ಹಾಗೂ ದೇಶದಲ್ಲಿಯೇ ನಿಲ್ಲಬೇಕು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆಸಲು ನಾವು ಬಿಡುವುದಿಲ್ಲ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು, ಬನ್ನೂರು ರೈತರ ಸೇವಾ ಸಹಕಾರಿ ಸಂಘ

LEAVE A REPLY

Please enter your comment!
Please enter your name here