ಮೇ.24: ಉಪ್ಪಿನಂಗಡಿ ಸಹಕಾರಿ ಸಂಘದಲ್ಲಿ ಅಮೃತ ಮಹೋತ್ಸವ ವಿಚಾರ ಗೋಷ್ಠಿ-2

0

  • ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷಿಕೆ, ತರಬೇತಿ

ಉಪ್ಪಿನಂಗಡಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಇದರ ಅಮೃತ ಮಹೋತ್ಸವ-2022 ಅಮೃತ ಸಂಗಮ (ಕೃಷಿ ವಿಚಾರ) ಗೋಷ್ಠಿ “ಅಡಿಕೆಗೆ ಔಷಧಿ ಸಿಂಪಡಣೆಯ ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ” ಕಾರ್‍ಯಕ್ರಮ ಮೇ. 24ರಂದು ಹಿರೇಬಂಡಾಡಿ ಸಮುದಾಯ ಭವನದಲ್ಲಿ ಜರಗಲಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್‍ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ನಿರ್ದೇಶಕ ಕುಕ್ಕಪ್ಪ ಗೌಡ ಸರೋಳಿ ಅಧ್ಯಕ್ಷತೆ ವಹಿಸಲಿದ್ದು, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಮತ್ತಿತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಗತಿಪರ ಕೃಷಿಕರಾದ ಜನಾರ್ದನ ಭಟ್ ಮತ್ತು  ಜಾನಕಿ ಇವರನ್ನು ಸನ್ಮಾನಿಸಲಾಗುವುದು. ತರಬೇತಿ ಮತ್ತು ಪ್ರಾತ್ಯಕ್ಷಿಕೆಯ ಸಂಪನ್ಮೂಲ ವ್ಯಕ್ತಿಗಳಾಗಿ ರಮೇಶ್ ಭಟ್ ಕೂಜಳ್ಳಿ, ಆರ್.ಜಿ. ಹೆಗಡೆ ಮೂರೂರು ಕಲ್ಲಬ್ಬೆ, ಬಾಲಸುಬ್ರಹ್ಮಣ್ಯ ಹಾಸನ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here