ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ತುಳು-ರಾಮಕುಂಜಕ್ಕೆ ಶೇ.100 ಫಲಿತಾಂಶ

0

ರಾಮಕುಂಜ: 2021-22ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ತೃತೀಯ ಭಾಷೆ ತುಳು ಆಯ್ದು ಪರೀಕ್ಷೆ ಬರೆದಿದ್ದ ಎಲ್ಲಾ 20 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ.

 

16 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದುಕೊಂಡಿದ್ದು ಉಳಿದ 4 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮನೋಜ್ ಬಿ.ಕೆ., ಲಿಶಿಕ್ ಕೆ.ಜೆ., ಗೋವಿಂದ ರಾಜು ಎನ್., ಜಿತೇಶ್ ಕೆ., ರಿತೇಶ್ ಗೌಡ, ಶ್ರವಣ್ ಕೆ.ಎಸ್., ಪವನ್‌ಕುಮಾರ್, ಸೃಜನ್ ಕೆ., ಮನ್ವಿತಾ, ಲೀಕ್ಷಿತಾ ಎಸ್.ಬಿ., ಚರಣ್ಯ ಪಿ., ನಿಶಾಂತ್, ವಿನೀಶ್ ಬಿ., ತಾನ್ಯ, ಸುಮನ್‌ದೀಪ್ ಬಿ.ಎಸ್., ಗ್ರೀಷ್ಮಾ ಎ. 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ. ಅನುಶ್ರಿ, ಪ್ರಣವ್ ಕೆ., 78 ಹಾಗೂ ಬೆನೇಂದ್ರ ಕೆ., ಧನುಷ್ ಜಿ.ಕೆ.,76 ಅಂಕ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here