Breaking News

ಪೂರ್ವ ರೋಟರಿ ಕ್ಲಬ್ ವತಿಯಿಂದ’ಗುರುವಂದನೆ’ ಕಾರ್ಯಕ್ರಮ

 

 

ಪುತ್ತೂರು: ಪೂರ್ವ ರೋಟರಿ ಕ್ಲಬ್ ಪುತ್ತೂರುಖR.I.Dist.3181ಇದರ ವತಿಯಿಂದ 2022-23ನೇ ಸಾಲಿನಲ್ಲಿ 10ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಪ್ರಥಮ, ದ್ವಿತೀಯ ಸ್ಥಾನಿಗಳಾಗಿ ಹೊರಹೊಮ್ಮಲುಕಾರಣೀಭೂತರಾದಗುರು ವೃಂದವನ್ನು ಗುರುತಿಸಿ ಸನ್ಮಾನಿಸುವ ‘ಗುರುವಂದನೆ’ ಕಾರ್ಯಕ್ರಮವು ಮೇ.೨೩ರಂದು   ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಜರುಗಿತು.

 

ಈ ಕಾರ್ಯಕ್ರಮದಲ್ಲಿ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ೧೦ನೇ ತರಗತಿಯ ಮಕ್ಕಳ ಯಶಸ್ಸಿಗೆ ಕಾರಣೀಭೂತರಾದ ಶಿಕ್ಷಕರನ್ನು ಹಾಗೂ ಮುಖ್ಯಗುರುಗಳನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋ|ಪ್ರಕಾಶ್‌ಕಾರಂತ್(Dist.Governor Elect)ಅವರು ಸಾಧಕರನ್ನು ಹಾಗೂ ಸಾಧನೆಗೆ ಕಾರಣೀಭೂತರಾದ ಅಧ್ಯಾಪಕ ಸಮೂಹವನ್ನು ಸನ್ಮಾನಿಸಿ ಮಾತನಾಡುತ್ತ, ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಿಸಿಕೊಂಡು ಸಾಧಕರಾಗುವ ಮನೋಭಾವವನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸಿದರು. ವೃತ್ತಿಗಳಲ್ಲಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿರುವ ಅಧ್ಯಾಪನ ವೃತ್ತಿಯ ಮಹತ್ವದ ಬಗ್ಗೆ ಮಾತನಾಡುತ್ತಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಕ ಶಕ್ತಿಯಾದ ಅಧ್ಯಾಪಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಗೌರವ ಉಪಸ್ಥಿತಿಯನ್ನು ಡಾ.ದೀಪಕ್‌ರೈ,ರೋ| ಎ.ಜೆ.ರೈ, ಡಾ.ಶಿವಪ್ರಕಾಶ್.ಎಂ(ಅಧ್ಯಕ್ಷರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು)  ರವಿನಾರಾಯಣ.ಎಂ(ಸಂಚಾಲಕರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು), ರೋ| ಶಶಿಧರ್ ಕಿನ್ನಿಮಜಲು, ರೋ| ಶರತ್‌ಕುಮಾರ್‌ರೈ, ರೋ|ವೆಂಕಟೇಶ್ ಶೆಣೈ, ಮುಖ್ಯಗುರುಗಳಾದ  ಸತೀಶ್‌ಕುಮಾರ್‌ರೈ,  ಮಮತಾ ಹಾಗೂ ಸಂಧ್ಯಾ, ಇವರು ಉಪಸ್ಥಿತರಿದ್ದರು.

 

ಮುಖ್ಯ ಅತಿಥಿಗಳಾದ ಡಾ.ದೀಪಕ್‌ರೈಇವರು ಮಾತನಾಡಿ, ಸಾಧಕ ವಿದ್ಯಾರ್ಥಿಗಳು ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತ ಶಿಕ್ಷಕರನ್ನು ಶ್ಲಾಫಿಸಿದರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಶಾಲೆಯ ಹಿರಿಯ ವಿದ್ಯಾರ್ಥಿ  ವೆಂಕಟೇಶ್ ಶೆಣೈ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಹಿರಿಯ ಶಿಕ್ಷಕ ರಾಧಕೃಷ್ಣರೈ ಸಾಧಕ ವಿದ್ಯಾರ್ಥಿಗಳಾದ ಆತ್ಮೀಯಕಶ್ಯಪ್, ಮಯೂರ್ ಹಾಗೂ ಸಂಸ್ಥೆಯಮುಖ್ಯಗುರುಗಳಾದ ಶ್ರೀ ಸತೀಶ್‌ಕುಮಾರ್‌ರೈ ಹಾಗೂ ಸಂಸ್ಥೆಯಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ಅವರುತಮ್ಮತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ರೋ. ಪ್ರಕಾಶ್‌ಕಾರಂತ್ ಈ ಸಂದರ್ಭದಲ್ಲಿಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ರೋ.ಶರತ್‌ಕುಮಾರ್‌ರೈ ಸ್ವಾಗತಿಸಿ, ರೋ.ಶಶಿಧರ್ ಕಿನ್ನಿಮಜಲು ವಂದಿಸಿದರು. ೧೦ನೇ ತರಗತಿಯವಿದ್ಯಾರ್ಥಿನಿಯಾದಕು.ತನ್ವಿ ಶೆಣೈಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಹೆಗ್ಡೆ ist.Secretary RID.3181, A.G  .ವಿ.ಶೆಣೈ, A.G ಸಚ್ಚಿದಾನಂದ, ಕರ್ನಲ್ ಡಿ.ಜಿ.ಭಟ್, ನಿಕಟಪೂರ್ವ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಾಧಕ ವಿದ್ಯಾರ್ಥಿಗಳ ಪೋಷಕರು, ಹಾಗೂ ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ರೋ| ವಿಶ್ವಾಸ್ ಶೆಣೈಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.