ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು – ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • ಉಪ್ಪಿನಂಗಡಿ ಗ್ರಾಮ ಪಂಚಾಯತ್

 

ಪಾರದರ್ಶಕವಾಗಿ ಕೆಲಸ ಮಾಡುವಂತೆ ತಿಳಿಸಲಾಗಿದೆ
ಸುದ್ದಿ ಬಿಡುಗಡೆಯ ಭ್ರಷ್ಟಾಚಾರ ವಿರುದ್ಧ ಆಂದೋಲನಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ನಮ್ಮ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಿ.ಸಿ. ಕೆಮರಾ ಅಳವಡಿಸಲಾಗಿದೆ, ಅದರ ಮೂಲಕ ಭ್ರಷ್ಟಾಚಾರ ನಿಗ್ರಹಿಸಲಾಗುವುದು ಮತ್ತು ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಈ ರೀತಿಯಲ್ಲಿ ಲಂಚ, ಭ್ರಷ್ಟಾಚಾರವನ್ನು ತಡೆಯಲು ಅಗತ್ಯ ಕ್ರಮ ಜರುಗಿಸಲಾಗಿದೆ. ಜನರೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಮತ್ತು ಕಚೇರಿಯಲ್ಲಿ ಯಾರಾದರೂ ಕೆಲಸಕ್ಕಾಗಿ ಬೇಡಿಕೆ ಇಟ್ಟಲ್ಲಿ ಅಂತಹ ವಿಚಾರವನ್ನು ಅಧ್ಯಕ್ಷರು ಅಥವಾ ಸದಸ್ಯರುಗಳ ಗಮನಕ್ಕೆ ದಾಖಲೆ ಸಮೇತ ತಿಳಿಸಿದಲ್ಲಿ ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಲಾಗುವುದು. ಸುರೇಶ್ ಅತ್ರಮಜಲು, ಸದಸ್ಯರು, ಗ್ರಾಮ ಪಂಚಾಯಿತಿ, ಉಪ್ಪಿನಂಗಡಿ.

ಶಾಸಕಾಂಗ ವ್ಯವಸ್ಥೆ ಸರಿಯಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ

ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸುದ್ದಿ ಬಳಗ ತೆಗೆದುಕೊಂಡ ಆಂದೋಲನ ಒಳ್ಳೆಯದಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು. ಶಾಸಕಾಂಗ ವ್ಯವಸ್ಥೆ ಸರಿಯಾಗಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ. ಜನಪ್ರತಿನಿಧಿಗಳು ಮನಸ್ಸು ಮಾಡಬೇಕು. ಜನರೂ ಕೂಡ ಭ್ರಷ್ಟಾಚಾರಕ್ಕೆ ಆಸ್ಪದ ಕೊಡಬಾರದು. ಕೃಷ್ಣ ರಾವ್ ಅರ್ತಿಲ, ಮಾಜಿ ಸದಸ್ಯರು, ವ್ಯವಸ್ಥಾಪನಾ ಸಮಿತಿ, ಸಹಸ್ರಲಿಂಗೇಶ್ವರ ದೇವಾಲಯ ಉಪ್ಪಿನಂಗಡಿ

 

ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಸಿದ್ಧ

ಭ್ರಷ್ಟಾಚಾರಕ್ಕೆ ನನ್ನ ತೀವ್ರ ಆಕ್ಷೇಪ ಇದೆ, ನಾನು ಭ್ರಷ್ಟಾಚಾರ ರಹಿತ, ಪ್ರಾಮಾಣಿಕವಾಗಿ ನನ್ನ ಗ್ರಾಮದ ಜನರಿಗೆ ಸರಕಾರದ ಸವಲತ್ತುಗಳು ತಲುಪುವಂತೆ ಸಹಕರಿಸುತ್ತಿದ್ದೇ ನೆ. ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಪಂಚಾಯತ್‌ನಲ್ಲಿ ಸಿಸಿ. ಕೆಮರಾ ಆಳವಡಿಸಲಾಗಿದ್ದು, ಅದನ್ನು ಆಗಾಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಭ್ರಷ್ಟಾಚಾರ ವಿರುದ್ಧದ ಸುದ್ದಿ ಬಿಡುಗಡೆಯ ಆಂದೋಲನಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಎಲ್ಲಾ ರೀತಿಯಲ್ಲೂ ಸಿದ್ಧರಾಗಿದ್ದೇವೆ. ಅಧಿಕಾರಿಗಳು, ಆಡಳಿತ ನಡೆಸುವವರು ಎಚ್ಚೆತ್ತು ಜನರ ಕಷ್ಟಗಳಿಗೆ ಶೀಘ್ರವಾಗಿ ಸ್ಪಂದಿಸುವಂತಾಗಲಿ.ಉಷಾಚಂದ್ರ ಮುಳಿಯ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಉಪ್ಪಿನಂಗಡಿ.

ಭ್ರಷ್ಟಾಚಾರ ನಿರ್ಮೂಲನೆ ದೊಡ್ಡ ಸಾಹಸ
ಸುದ್ದಿ ಪತ್ರಿಕೆಯ ಮೂಲಕ ಆರಂಭಿಸಲಾದ ಈ ಆಂದೋಲನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಪ್ರಯತ್ನ ದೊಡ್ಡ ಸಾಹಸ. ಅಧಿಕಾರಿಗಳು ಮಾತ್ರ ಅಲ್ಲದೆ ಜನರು ಸರಿಯಿರಬೇಕು. ಜನಪ್ರತಿನಿಧಿಗಳೂ ಇದರ ನಿರ್ಮೂಲನೆಗೆ ಪ್ರಯತ್ನ ಪಡಬೇಕು. ತಳಮಟ್ಟದಲ್ಲಿಯೇ ಭ್ರಷ್ಟಾಚಾರ ನಿರ್ಮೂಲನೆಗೆ ಜಾಗೃತವಾಗಬೇಕು. ಈಗಾಗಲೇ ತಾಲೂಕಿನಲ್ಲಿ ಜಾಗೃತಿ ಉಂಟಾಗಿದೆ. ಲಂಚ ಭ್ರಷ್ಟಾಚಾರ ನಿರ್ಮೂಲನೆಗೆ ನಾವು ಕೂಡ ಪ್ರಯತ್ನ ಮಾಡಬೇಕು. ಅಝೀಝ್ ಬಸ್ತಿಕ್ಕಾರ್, ಉಪ್ಪಿನಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರು

LEAVE A REPLY

Please enter your comment!
Please enter your name here