ನೆಲ್ಯಾಡಿ: ಮದುವೆ ವಾರ್ಷಿಕೋತ್ಸವ ಆಚರಣೆ

0

ನೆಲ್ಯಾಡಿ: ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ನೆಲ್ಯಾಡಿ ಇದರ ಕಾರ್ಯದರ್ಶಿ ಮೋಹನ್‌ಕುಮಾರ್ ದೋಂತಿಲ ಹಾಗೂ ಪ್ರೇಮ ದಂಪತಿಯ 29ನೇ ವರ್ಷದ ಮತ್ತು ಇವರ ಪುತ್ರ ಪ್ರಶಾಂತ್‌ಕುಮಾರ್ ಡಿ ಮತ್ತು ನೇತ್ರಾ ದಂಪತಿಯ ಪ್ರಥಮ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮಾಚರಣೆ ಮೇ 13ರಂದು ಕೌಕ್ರಾಡಿ ದೋಂತಿಲ ಶ್ರೀ ಲಕ್ಷ್ಮೀ ನಿಲಯದಲ್ಲಿ ನಡೆಯಿತು.

ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್ ಇವರಿಂದ ಜಾದೂ ಕಾರ್ಯಕ್ರಮ ನಡೆಯಿತು. ಬಳಿಕ ಮೋಹನ್‌ಕುಮಾರ್-ಪ್ರೇಮ ಹಾಗೂ ಪ್ರಶಾಂತ್‌ಕುಮಾರ್-ನೇತ್ರಾ ದಂಪತಿ ಕೇಕ್ ಕಟ್ ಮಾಡಿ ಸಂಭ್ರಮಾಚರಿಸಿಕೊಂಡರು. ಕಾರ್ಯಕ್ರಮದಲ್ಲಿ ಬಾಲಕೃಷ್ಣ ಬಾಣಜಾಲು, ಜನಾರ್ದನ ಬಾಣಜಾಲು, ಸುಂದರ ಬಾಣಜಾಲು, ಉಷಾ ಅಂಚನ್, ರಾಮಣ್ಣ ಶೆಟ್ಟಿ ದೋಂತಿಲ, ಚಂದ್ರಶೇಖರ ಬಾಣಜಾಲು, ಮಂಗಳೂರು ಕೆಎಂಸಿಯ ಉದ್ಯೋಗಿ ಹರೀಶ್ ಧರ್ಮಸ್ಥಳ, ಸಂಜೀವ ಪೂಜಾರಿ, ಶ್ರೀಧರ ಮೋಹಿನಿ ದೋಂತಿಲ, ಶ್ರೀನಿವಾಸ ಶೀಲಾವತಿ ದೋಂತಿಲ, ಪ್ರಜ್ವಲ್ ಡಿ., ಪ್ರಮೋಕ್ಷ ಡಿ., ಬೇಬಿ ವಿದ್ಯಾಶ್ರೀ, ಅನುಶ್ರೀ, ಜಯಲಕ್ಷ್ಮೀ, ಶ್ರೇಯಸ್ ಡಿ., ಚೈತ್ರಾ ಡಿ., ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here