ಪಶ್ಚಿಮ ಬಂಗಾಳದ ಯುವಕ ಆಲಂಕಾರಿನಲ್ಲಿ ಆತ್ಮಹತ್ಯೆ

0

ಕಡಬ: ಕಡಬ ತಾಲೂಕು ಆಲಂಕಾರು ಗ್ರಾಮದ ಕೇಪುಳು ಎಂಬಲ್ಲಿ ಪಶ್ಚಿಮ ಬಂಗಾಳ ಮೂಲದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡವನನ್ನು ಪಶ್ಚಿಮ ಬಂಗಾಳದ ಗೋರಮಾರ್ ಜಿಲ್ಲೆಯ ಅಜೆರ್‌ಪರ್ ಗ್ರಾಮದ ಸುಶಾಂಕರ ಸರ್ಕಾರ್(22ವ) ಎಂದು ಗುರುತಿಸಲಾಗಿದೆ. ಈತ ಮಂಗಳೂರಿಗೆ ಸೆಂಟ್ರಿಂಗ್ ಕೆಲಸಕ್ಕೆಂದು ಬಂದಿದ್ದು ಆಲಂಕಾರಿಗೆ ಯಾವ ಕಾರಣಕ್ಕಾಗಿ ಬಂದಿದ್ದಾನೆ ಎಂಬ ವಿಚಾರ ಯಾರಿಗು ತಿಳಿದಿಲ್ಲವಾಗಿದೆ.

ಸ್ಥಳೀಯರು ಕೆಲಸ ಮಾಡುವ ವೇಳೆ ಶವವನ್ನು ಗಮನಿಸಿದ್ದು ತಕ್ಷಣ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದರೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಶವವನ್ನು ಕಡಬ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ಮೃತರ ಸಹೋದ್ಯೋಗಿಗಳಿಗೆ ಮಾಹಿತಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದ್ದು ಸಾವಿನ ಕಾರಣ   ನಿಗೂಢವಾಗಿದೆ. 

LEAVE A REPLY

Please enter your comment!
Please enter your name here