ಪೆರಾಬೆ, ಕುಂತೂರು ಬಿಲ್ಲವ ಗ್ರಾಮಸಮಿತಿಯ ವಾರ್ಷಿಕ ಮಹಾಸಭೆ ಹಾಗು ಪುಸ್ತಕ ವಿತರಣೆ ಕಾರ್ಯಕ್ರಮ

0

ಆಲಂಕಾರು: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಿತಿ ಕುಂತೂರು ಪೆರಾಬೆ ಗ್ರಾಮ ಸಮಿತಿ ವತಿಯಿಂದ ಮೇ.22 ರಂದು ಆದಿತ್ಯವಾರ ಬೆಳಿಗ್ಗೆ ರಕ್ತೇಶ್ವರಿ ದೈವಸ್ಥಾನ ಮಾಯಿಲ್ಗದಲ್ಲಿ ಇದರ ವಾರ್ಷಿಕ ಮಹಾಸಭೆ ಹಾಗು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ಸಭಾ ಅಧ್ಯಕ್ಷತೆಯನ್ನು ಪೆರಾಬೆ ಕುಂತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ರವಿ ಮಾಯಿಲ್ಗ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆ ಯನ್ನು ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷರು ಬಿಲ್ಲವ ಸಂಘ ಪುತೂರು ಇವರು ಉದ್ಘಾಟಿಸಿ ಶುಭಹಾರೈಸಿದರು.  ಮುಖ್ಯ ಅತಿಥಿ ಗಳಾಗಿ ಪುತ್ತೂರು ಬಿಲ್ಲವ ಸಂಘದ ಉಫಾದ್ಯಕ್ಷರಾದ ಡಾ ಸದಾನಂದ ಕುಂದರ್, ಚಂದ್ರಕಲಾ .ಪಿ, ಕಾರ್ಯದರ್ಶಿ ನಾಗೇಶ್ ಬಲ್ನಾಡ್ ,ಕೋಶಾಧಿಕಾರಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲು ,ತಾಲೂಕು ಮಹಿಳಾ ಬಿಲ್ಲವ ಘಟಕದ ಕಾರ್ಯದರ್ಶಿ ವಿಮಲಾ,ವಲಯ ಸಂಚಾಲಕರಾದ ಉದಯ ಸಾಲ್ಯಾನ್ ಮಾಯಿಲ್ಗ , ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದ ಅಧ್ಯಕ್ಷ ಗಣರಾಜ್ ಕೆ ,ಮಾಯಿಲ್ಗ ದೈವಸ್ಥಾನದ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ ಮಾಯಿಲ್ಗ , ಪೆರಾಬೆ ಕುಂತೂರು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷ ಅಂಬಾಕ್ಷಿ ಮಾಯಿಲ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಒಟ್ಟು 40 ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.ಅನಿಲ್ ಊರುಸಾಗ್ ಕಾರ್ಯಕ್ರಮ ನಿರೂಪಿಸಿ , ಹರ್ಷಿತ್ ಮಾಯಿಲ್ಗ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿ, ವೈಶಾಲಿ ಮಾಯಿಲ್ಗ ಪ್ರಾರ್ಥಿಸಿದರು. ಪವನ್ ಇಡಾಲ, ಯೋಗೀಶ್ ನಡ್ಡೋಟು, ವಿಜಯ ಕೆದಿಲ, ಉಮೇಶ್ ಕರ್ಕೇರ, ಗಂಗಾಧರ ಕಲ್ಲಡ್ಕ, ಜಯಂತ್ ಪೂಜಾರಿ ನೆಕ್ಕಿಲಾಡಿ, ಸದಾನಂದ ಕುಮಾರ್ ಮಡ್ಯೋಟ್ಟು,ವಿನಯ ಕೆದಿಲ, ಸರೋಜಿನಿ ಮೂಲೆತ ಮಜಲು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here