ಮೈರ ಕರವೀರದಲ್ಲಿ ನಡೆದ ಹಲ್ಲೆ ಪ್ರಕರಣ ಮತ್ತಿಬ್ಬರು ಆರೋಪಿಗಳ ಬಂಧನ

0

ವಿಟ್ಲ: ಕೇಪು ಗ್ರಾಮದ ಮೈರ ಎಂಬಲ್ಲಿ ಎರಡು ಯುವಕರ ತಂಡಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕು ವಿಟ್ಲಕಸಬ ಗ್ರಾಮದ ಉಕ್ಕುಡ ದರ್ಬೆ ನಿವಾಸಿ ಮಹಮ್ಮದ್‌ರವರ ಪುತ್ರ ಅಬ್ದುಲ್ ಸಲಾಂ(23 ವ.) ಹಾಗೂ ಸ್ಥಳೀಯ ನಿವಾಸಿ ಮಹಮ್ಮದ್ ರವರ ಪುತ್ರ ಅಯೂಬ್ (24 ವ.)ಬಂಧಿತ ಆರೋಪಿಗಳು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಮಹಮ್ಮದ್ ಶರೀಫ್, ಉಕ್ಕುಡ ದರ್ಬೆ ನಿವಾಸಿ ಸಾದಿಕ್ ಎಂಬವರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ರಕ್ಷಿತ್‌ರವರು ಬೈಕ್‌ನಲ್ಲಿ ಅಡ್ಯನಡ್ಕದಿಂದ ಮೈರದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಮೈರ, ಕರವೀರ ಬಸ್ ಸ್ಟಾಂಡ್ ಬಳಿ ರಕ್ಷಿತ್ ಎಂಬವರಿಗೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಗಾಯಾಳು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

LEAVE A REPLY

Please enter your comment!
Please enter your name here