ಸಮಸ್ತ ಖುತಬಾ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಹಮೀದ್ ದಾರಿಮಿ ಸಂಪ್ಯ

0

 

 


ಪುತ್ತೂರು: ಸಮಸ್ತ ಕೇರಳ ಜಂಇಯ್ಯತ್ತುಲ್ ಖುತಬಾ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಸಂಪ್ಯ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರು ಆಯ್ಕೆಯಾಗಿದ್ದಾರೆ. ಸಮಸ್ತ ಈ ಆಯ್ಕೆಯನ್ನು ಮಾಡಿರುತ್ತದೆ. ಇವರು ಪುತ್ತೂರು ತಾಲೂಕು ಜಂಇಯ್ಯತ್ತುಲ್ ಉಲಮಾದ ಕಾರ್ಯದರ್ಶಿ ಆಗಿದ್ದು, ದ.ಕ ಜಿಲ್ಲಾ ಜಂಇಯ್ಯತ್ತುಲ್ ಉಲಮಾ ಮುಶಾವರದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದ.ಕ ಜಿಲ್ಲೆಯ ಹಿರಿಯ ವಿದ್ವಾಂಸರಲ್ಲಿ ಓರ್ವರಾದ ಅಬ್ದುಲ್ ಹಮಿದ್ ದಾರಿಮಿ ಉಸ್ತಾದರು ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳಲ್ಲಿ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here