ಪುತ್ತೂರು ತಾ| ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಸಮದ್ ಬಾವ ಆಯ್ಕೆ

0

ಪುತ್ತೂರು : ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಅಬ್ದುಲ್ ಸಮದ್ ಬಾವ ಕೂರ್ನಡ್ಕರವರು ಆಯ್ಕೆಯಾಗಿದ್ದಾರೆ. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಕಥಾಸಮಯ, ಕಾವ್ಯ ಸಂಚಯ, ಕೃತಿಗಳ ಬಿಡುಗಡೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ದ.ಕ.ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟುರವರು ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರ ಶಿಫಾರಸಿನಂತೆ ಅಬ್ದುಲ್ ಸಮದ್ ಬಾವ ಅವರನ್ನು ನೇಮಕ ಮಾಡಿದ್ದಾರೆ. ಕೂರ್ನಡ್ಕ ನಿವಾಸಿಯಾಗಿರುವ ಅಬ್ದುಲ್ ಸಮದ್ ಬಾವಾ ಹಾಜಿಯವರು ಹಳೆಯ ನಾಣ್ಯ ಸಂಗ್ರಹ ಹಾಗೂ ಪ್ರದರ್ಶನ ನಡೆಸಿದ್ದು ಇದಕ್ಕೆ ಪ್ರಶಸ್ತಿ ಗಳಿಸಿದ್ದರು.  ವಿವಿಧ ಸಂಘಟನೆಗಳಲ್ಲಿ ಇವರು ಸಕ್ರಿಯರಾಗಿದ್ದಾರೆ.

LEAVE A REPLY

Please enter your comment!
Please enter your name here