ನರಿಮೊಗರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ

0

  • ಅರ್ಜಿ ಸಲ್ಲಿಸಲು ಜೂ.6 ಅಂತಿಮ ದಿನ

ಪುತ್ತೂರು : ನರಿಮೊಗರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2022ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯು ಆಫ್‌ಲೈನ್ ಮುಖಾಂತರ ಜೂ.6ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಯಲ್ಲಿ ಹಾಜರಾಗಿ ಅರ್ಜಿ ನೊಂದಾಯಿಸಿಕೊಳ್ಳಬಹುದು.

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ಒಂದು ವರ್ಷ ತರಬೇತಿ ಅವಧಿಯ ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಎರಡು ವರ್ಷ ತರಬೇತಿ ಅವಧಿಯ ಇಲೆಕ್ಟ್ರಾನಿಕ್ ಮೆಕಾನಿಕ್, ಫಿಟ್ಟರ್ ಹಾಗೂ ಒಂದು ವರ್ಷ ತರಬೇತಿ ಅವಧಿಯ ಇಂಡಸ್ಟ್ರಿಯಲ್ ರೋಬೋಟಿಕ್ಸ್ ಮತ್ತು ಡಿಜಿಟಲ್ ಮಾನ್ಯಫಾಕ್ಚರಿಂಗ್ ವೃತ್ತಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ 7760644073, 8431188097 ಸಂಪರ್ಕಿಸಬಹುದು ಎಂದು ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here