ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • ಕೆದಂಬಾಡಿ ಗ್ರಾಮ ಪಂಚಾಯತ್

ಗ್ರಾಮಮಟ್ಟದಿಂದಲೇ ಆರಂಭವಾಗಬೇಕು
ಲಂಚ,ಭ್ರಷ್ಟಾಚಾರ ಗ್ರಾಮ ಮಟ್ಟದಿಂದಲೇ ಮುಕ್ತವಾಗಬೇಕು. ಗ್ರಾಮದಿಂದ ಮುಕ್ತವಾದರೆ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಮುಕ್ತವಾಗಲು ಸಾಧ್ಯವಿದೆ ಮುಖ್ಯವಾಗಿ ಗ್ರಾಮಸ್ಥರು ಎಚ್ಚೆತ್ತುಕೊಳ್ಳಬೇಕು. ಅಧಿಕಾರಿಗಳನ್ನು ಪ್ರಶ್ನಿಸುವ ಧೈರ್ಯವನ್ನು ಜನರು ಮಾಡಬೇಕು. ಕೆದಂಬಾಡಿಯನ್ನು ಲಂಚ,ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ಪಂಚಾಯತ್ ಆಡಳಿತ ಮಂಡಳಿ, ಅಧಿಕಾರಿ ವರ್ಗ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ. ಗ್ರಾಮಸ್ಥರು ನೇರವಾಗಿ ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಬಹುದು. – ಭಾಸ್ಕರ ರೈ ಮಿತ್ರಂಪಾಡಿ, ಉಪಾಧ್ಯಕ್ಷರು ಕೆದಂಬಾಡಿ ಗ್ರಾಪಂ

ಲಂಚ,ಭ್ರಷ್ಟಾಚಾರವನ್ನು ಜನರು ಪ್ರಶ್ನಿಸುವವರಾಗಬೇಕು

ಲಂಚ,ಭ್ರಷ್ಟಾಚಾರ ಮುಕ್ತ ಗ್ರಾಮ, ತಾಲೂಕು, ಜಿಲ್ಲೆ,ರಾಜ್ಯ,ದೇಶವಾಗಬೇಕಾದರೆ ಮೊದಲು ಜನರು ಎಚ್ಚೆತ್ತುಕೊಳ್ಳಬೇಕು. ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರಶ್ನಿಸುವ ಧೈರ್ಯವನ್ನು ಜನರು ಮಾಡಬೇಕು. ನಾನೇಕೆ ಲಂಚ ಕೊಡಲಿ ಎಂಬ ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿದ ಕೂಡಲೇ ಅದನ್ನು ಪ್ರಶ್ನಿಸುವ ಧೈರ್ಯ ಮಾಡಬೇಕು. ಕೆದಂಬಾಡಿ ಗ್ರಾಮವನ್ನು ಲಂಚ,ಭ್ರಷ್ಟಾಚಾರ ಮುಕ್ತ ಗ್ರಾಮ ಮಾಡುವಲ್ಲಿ ನಾವೆಲ್ಲರೂ ಪ್ರಯತ್ನ ಪಡುತ್ತೇವೆ. ಸುದ್ದಿ ಜನಾಂದೋಲನಕ್ಕೆ ನಮ್ಮೆಲ್ಲರ ಸಂಪೂರ್ಣ ಬೆಂಬಲ ಇದೆ. –ರಫೀಕ್ ನಂಜೆ, ವ್ಯಾಪಾರಸ್ಥರು ತಿಂಗಳಾಡಿ

ಪ್ರತಿ ಇಲಾಖೆಯಲ್ಲೂ ಒಬ್ಬ ಗ್ರಾಹಕ ಮಾರ್ಗದರ್ಶಿಯನ್ನು ನೇಮಕ ಮಾಡುವುದು ಸೂಕ್ತ
ಕಾನೂನು ಹಾಗೂ ನಿಯಮಾನುಸಾರ ಆಗುವಂತ ಕೆಲಸಗಳಿಗೂ ಕೂಡ ಜನರು ಲಂಚ ನೀಡುತ್ತಿರುವುದು ಅತ್ಯಂತ ವಿಷಾದನೀಯ. ಯಾವುದೇ ಅಧಿಕಾರಿ ನಿಯಮಾನುಸಾರ ಆಗದ ಕೆಲಸವನ್ನು ಮಾಡುವುದು ತುಂಬಾ ಕಡಿಮೆ. ಇವತ್ತು ಕಂದಾಯ ಇಲಾಖೆಯನ್ನೇ ಲಂಚ, ಭ್ರಷ್ಟಾಚಾರಕ್ಕೆ ಹೆಚ್ಚು ಬೊಟ್ಟು ಮಾಡುತ್ತಿದ್ದಾರೆ. ಆದರೆ ಪಿಡಬ್ಲ್ಯೂಡಿ ಇಲಾಖೆ, ಇಂಜಿನಿಯರಿಂಗ್ ಇಲಾಖೆ,ಆರ್‌ಟಿಒ ಆಫೀಸ್, ರಿಜಿಸ್ಟರ್ ಆಫೀಸ್ ಇಲ್ಲಿ ಎಲ್ಲವೂ ಮೌನದಲ್ಲೇ ಭ್ರಷ್ಟಾಚಾರಗಳು ನಡೆಯುತ್ತಿದೆ. ಇದಕ್ಕೆ ಕಾರಣ ಈ ಇಲಾಖೆಯಲ್ಲಿರುವ ಮಧ್ಯವರ್ತಿಗಳು. ಇದನ್ನು ಕಡಿಮೆ ಮಾಡಬೇಕಾದರೆ ಪ್ರತಿ ಇಲಾಖೆಯಲ್ಲೂ ಕೂಡ ಒಬ್ಬ ಮಾರ್ಗದರ್ಶಿಯನ್ನು ಸರಕಾರದಿಂದಲೇ ನೇಮಕ ಮಾಡಿದರೆ ಮಧ್ಯವರ್ತಿಗಳ ಪಿಡುಗನ್ನು ಹೋಗಲಾಡಿಸಬಹುದು. ಸುದ್ದಿ ಪತ್ರಿಕೆಯ ಈ ಅಭಿಯಾನದಿಂದ ಲಂಚ ಸ್ವೀಕರಿಸುವಾಗ ನೌಕರರು ಒಮ್ಮೆ ಯೋಚಿಸುವಂತೆ ಮಾಡಿರುವುದು ಸುಳ್ಳಲ್ಲ. ಡಾ. ಯು.ಪಿ ಶಿವಾನಂದರಿಗೆ ಹಾಗೂ ಬಳಗದವರಿಗೆ ಅಭಿನಂದನೆಗಳು. ಕೆದಂಬಾಡಿ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವಾಗಿ ಮಾಡುವಲ್ಲಿ ನಾವೆಲ್ಲರೂ ಪ್ರಯತ್ನ ಪಡುತ್ತೇವೆ.-ವಿಜಯ ಕುಮಾರ್ ರೈ ಕೋರಂಗ, ಅಧ್ಯಕ್ಷರು, ತಾಲೂಕು ಕೃಷಿಕ ಸಮಾಜ ಪುತ್ತೂರು

ಗ್ರಾಮಸ್ಥರು ಎಚ್ಚೆತ್ತುಕೊಳ್ಳಬೇಕಾಗಿದೆ
ಲಂಚ,ಭ್ರಷ್ಟಾಚಾರ ಮುಕ್ತ ಗ್ರಾಮ,ಜಿಲ್ಲೆ,ರಾಜ್ಯ,ದೇಶವಾಗಬೇಕಾದರೆ ಮೊದಲನೆಯದಾಗಿ ಗ್ರಾಮಸ್ಥರು ಎಚ್ಚೆತ್ತುಕೊಳ್ಳಬೇಕು. ಅಧಿಕಾರಿಗಳು ಮತ್ತು ಗ್ರಾಮಸ್ಥರು ನಾವು ಲಂಚ, ಭ್ರಷ್ಟಾಚಾರ ಮಾಡುವುದಿಲ್ಲ ಎಂಬ ತೀರ್ಮಾನವನ್ನು ಕೈಗೊಂಡರೆ ಮಾತ್ರ ಲಂಚ ಮುಕ್ತ ಗ್ರಾಮ ಸಾಧ್ಯ. ಅಧಿಕಾರಿಗಳು ಸರಿಯಾಗಿದ್ದರೂ ಕೆಲವೊಮ್ಮೆ ಮಧ್ಯವರ್ತಿಗಳ ಹಾವಳಿಯಿಂದ ಗ್ರಾಮಸ್ಥರು ಭಯಪಡುತ್ತಾರೆ. ಅಧಿಕಾರಿಗಳ ಬಳಿಗೆ ನೇರವಾಗಿ ತೆರಳಲು ಕೆಲವು ಸಲ ಮಧ್ಯವರ್ತಿಗಳು ಬಿಡುವುದಿಲ್ಲ ಇದನ್ನು ತಡೆಯುವ ಕೆಲಸ ಸರಕಾರದಿಂದ ಆಗಬೇಕು. ಕೆದಂಬಾಡಿ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮ ಮಾಡುವಲ್ಲಿ ನಾವೆಲ್ಲರೂ ಪ್ರಯತ್ನ ಪಡುತ್ತೇವೆ. ಸುದ್ದಿಯ ಈ ಆಂದೋಲನ ಇಂದಲ್ಲದಿದ್ದರೂ ಮುಂದಿನ ಜನಾಂಗಕ್ಕೆ ಪ್ರಯೋಜನ ತರಬಹುದು ಎಂಬುದು ನನ್ನ ಅನಿಸಿಕೆ. ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಅಧ್ಯಕ್ಷರು ಟಿಎಪಿಸಿಎಂಎಸ್ ಪುತ್ತೂರು

ಲಂಚ,ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಕೆಲಸ ಶ್ಲಾಘನೀಯ
ಸಮಾಜದ ಒಳಿತಿಗಾಗಿ ಹೋರಾಟದ ಕಿಚ್ಚಿನಿಂದಲೇ ಎದ್ದು ಬಂದ ಡಾ.ಯು.ಪಿ.ಶಿವಾನಂದರು ಲಂಚ, ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಆಂದೋಲನದಿಂದ ಜನರು ಲಂಚ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಮಾಡಿರುವುದು ಶ್ಲಾಘನೀಯ ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. ಲಂಚ, ಭ್ರಷ್ಟಾಚಾರ ನಿಲ್ಲಬೇಕಾದರೆ ಮೊದಲು ಗ್ರಾಮಸ್ಥರು ಎಚ್ಚೆತ್ತುಕೊಳ್ಳಬೇಕು. ಲಂಚ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಕೆಲಸ ಗ್ರಾಮಸ್ಥರಿಂದ ಆಗಬೇಕು. ಕೇವಲ ತೋರ್ಪಡಿಕೆಗಾಗಿ ಆಗಬಾರದು. ಪ್ರತಿಯೊಬ್ಬರು ಕೂಡ ಇದರಲ್ಲಿ ಭಾಗಿಗಳಾದರೆ ಮತ್ತು ಈ ಬಗ್ಗೆ ಹೋರಾಟದ ಮನೋಭಾವವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಈ ಲಂಚ, ಭ್ರಷ್ಟಾಚಾರ ಇಲ್ಲದಾಗಬಹುದು. ಕೆದಂಬಾಡಿ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ನಾವೆಲ್ಲರೂ ಪ್ರಯತ್ನ ಮಾಡುತ್ತೇವೆ. – ಐ.ಸಿ.ಕೈಲಾಸ್ ಕೆದಂಬಾಡಿ, ಮಾಜಿ ಅಧ್ಯಕ್ಷರು ಜೆ.ಡಿ.ಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ

ಸುದ್ದಿ ಜನಾಂದೋಲನದಿಂದ ಗ್ರಾಮಸ್ಥರು ಜಾಗೃತರಾಗುತ್ತಿದ್ದಾರೆ

ಲಂಚ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಧೈರ್ಯ ಜನರಲ್ಲಿ ಬಂದಿದೆ. ಸುದ್ದಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಅಭಿನಂದನೆಗಳು. ಕೆದಂಬಾಡಿ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮ ಮಾಡುವಲ್ಲಿ ನಾವು ಪಂಚಾಯತ್ ಮಟ್ಟದಿಂದಲೇ ಪ್ರಯತ್ನ ಪಡುತ್ತಿದ್ದೇ ವೆ. ಮುಂದಿನ ದಿನಗಳಲ್ಲಿ ಗ್ರಾಮ ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. –ಸೂರ್ಯಪ್ರಸನ್ನ ರೈ , ನಿರ್ದೇಶಕರು ಕೆದಂಬಾಡಿಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ತಿಂಗಳಾಡಿ

LEAVE A REPLY

Please enter your comment!
Please enter your name here