ಮೇ 27ರಂದು ಎಸ್‌ಡಿಪಿಐ ವತಿಯಿಂದ ಮಂಗಳೂರಿನಲ್ಲಿ ಬೃಹತ್ ಜನಾಧಿಕಾರ ಸಮಾವೇಶ: ಇಕ್ಬಾಲ್ ಬೆಳ್ಳಾರೆ

0


ಪುತ್ತೂರು: ಎಸ್‌ಡಿಪಿಐ ವತಿಯಿಂದ ಮೇ 27 ಶುಕ್ರವಾರದಂದು ಅಪರಾಹ್ನ 2.30ಕ್ಕೆ ಮಂಗಳೂರು ಸಮೀಪದ ಕಣ್ಣೂರು ಮೈದಾನದಲ್ಲಿ ಬೃಹತ್ ಜನಾಧಿಕಾರ ಸಮಾವೇಶ ನಡೆಯಲಿದೆ ಎಂದು ಎಸ್‌ಡಿಪಿಐ ಜಿಲ್ಲಾ ಮಾಧ್ಯಮ ಸಂಯೋಜಕ ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತಗಳಿಲ್ಲದ ಕಾರಣ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಸರಕಾರವು ಆಡಳಿತದ ಚುಕ್ಕಾಣಿ ಹಿಡಿಯಿತು. ಬಿಜೆಪಿ ತನ್ನ ವಂಚನೆಯ ರಾಜಕೀಯದ ಮೂಲಕ ಜನಾದೇಶವನ್ನು ಧಿಕ್ಕರಿಸಿ ಇತರ ಪಕ್ಷಗಳ ಶಾಸಕರನ್ನು ಖರೀದಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅತ್ಯಂತ ದ್ವೇಷ ಮತ್ತು ಕೆಟ್ಟ ಆಡಳಿತವನ್ನು ನೀಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ಹಗರಣಗಳು ರಾಜಾರೋಷವಾಗಿ ನಡೆಯುತ್ತಿದೆ. ಸರಕಾರಿ ಗುತ್ತಿಗೆಯಲ್ಲಿ ೪೦% ಕಮಿ?ನ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ ಎಂದು ಸ್ವಯಂ ಗುತ್ತಿಗೆದಾರರೇ ಹೇಳಿಕೊಂಡಿರುವುದಲ್ಲದೆ, ಈ ಕೃತ್ಯ ವಿರೋಧಿಸುವ ಅಮಾಯಕ ಜೀವಗಳು ಇವರ ಹಗರಣಗಳಿಗೆ ಬಲಿಯಾಗುತ್ತಿವೆ. ರಾಜ್ಯದಲ್ಲಿ ದ್ವೇಷಪೂರಿತ ಮತ್ತು ಭ್ರಷ್ಟ ಆಡಳಿತ ಕಾಣಸಿಗುತ್ತದೆ. ಅಂಗನಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿ, ಬಾಣಂತಿಯರ ಆಹಾರದ ಕಿಟ್‌ಗಳಲ್ಲಿ ಭ್ರಷ್ಟಾಚಾರ ಮಾಡುತ್ತಾರೆಂದಾದರೆ ಇವರ ಪರಿಸ್ಥಿತಿ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಬಿಡಿಎನಲ್ಲಿ ಹಗರಣ, ಮೆಡಿಕಲ್ ಉಪಕರಣಗಳಲ್ಲಿ ಹಗರಣ, ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ನಡೆಯುತ್ತಿದೆ. ಪ್ರಕ್ಷುಬ್ಧವಾದ ವಾತಾವರಣದಲ್ಲಿ ಕರ್ನಾಟಕ ರಾಜ್ಯವಿದೆ. ಜನರ ಸಮಸ್ಯೆಗಳು ಬಹಳಷ್ಟಿವೆ. ನಿರುದ್ಯೋಗ, ರೈತರು, ಕಾರ್ಮಿಕರ ಸಮಸ್ಯೆಯಿದೆ. ಬೆಲೆಯೇರಿಕೆ ತಾಂಡವವಾಡುತ್ತಿದೆ. ಅಷ್ಟಿದ್ದರೂ ಭಾವನಾತ್ಮಕ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಮುಸ್ಲಿಂ ವ್ಯಾಪಾರ ಬಹಿ?ರ, ಮುಸ್ಲಿಂ ವಿದ್ಯಾರ್ಥಿನಿಯರ ಶಿರವಸ್ತ್ರ ವಿವಾದ, ಗೋಹತ್ಯೆ ತಡೆ ಕಾಯ್ದೆ, ಆಝಾನ್ ಕರೆ ತಡೆ, ಕ್ರೈಸ್ತ ಪಾದ್ರಿಗಳ ಮೇಲೆ ದಾಳಿ ಹೀಗೆ ದಿನಕ್ಕೊಂದು ವಿವಾದಗಳು ಮುನ್ನೆಲೆಗೆ ಬರುತ್ತಿವೆ. ಧರ್ಮಗಳ ನಡುವೆ ದ್ವೇಷ ಹರಡಿಸುವ ಪ್ರಕ್ರಿಯೆ ಸರ್ಕಾರ ಮತ್ತು ಸರ್ಕಾರ ಪೋಷಿತ ಸಂಘಪರಿವಾರದ ಸಂಘಟನೆಗಳು ನಡೆಸುತ್ತಿವೆ. ಭಯಭೀತಿಯಲ್ಲಿರುವ ರಾಜ್ಯವನ್ನು ರಕ್ಷಿಸಬೇಕೆನ್ನುವ ಜವಾಬ್ದಾರಿಯಿಂದ ಎಸ್‌ಡಿಪಿಐ ರಾಜ್ಯದ ಜನತೆಗೆ ಅರಿವು ಮೂಡಿಸಬೇಕು ಮತ್ತು ಪ್ರಬುದ್ಧರನ್ನಾಗಿ ಮಾಡಬೇಕ್ನನುವ ನಿಟ್ಟಿನಲ್ಲಿ ಜನಾಧಿಕಾರ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದರು.

ರಾಜ್ಯವನ್ನು ಆರಾಜಕತೆಗೆ ತಳ್ಳುತ್ತಿರುವ ಬಿಜೆಪಿ ಸರಕಾರವನ್ನು ವಿರೋಧಿಸಬೇಕಾದ ವಿರೋಧ ಪಕ್ಷಗಳು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಬಿಜೆಪಿಯ ಅಕ್ರಮಕ್ಕೆ ಪರೋಕ್ಷ ಬೆಂಬಲವಾಗುತ್ತಿದೆ. ಕಾಂಗ್ರೆಸ್‌ನಲ್ಲಿರುವ ಒಳಜಗಳ, ಮೃದು ಹಿಂದುತ್ವ, ಜೆಡಿಎಸ್ -ಕಾಂಗ್ರೆಸ್ ನಡುವಿನ ಕಚ್ಚಾಟ, ತಮ್ಮ ಪಕ್ಷದಿಂದ ನಿರಂತರವಾಗಿ ಬಿಜೆಪಿಗೆ ಹೋಗುತ್ತಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ನಿಷ್ಕ್ರಿಯ ಮತ್ತು ದಿವಾಳಿಯಾಗಿದೆ. ಪ್ರಜಾಪ್ರಭುತ್ವ ಮತ್ತು ಕಾನೂನು ಸುವ್ಯವಸ್ಥೆಯನ್ನು ಬೆಳೆಸುವುದಕ್ಕಾಗಿ ಗಟ್ಟಿಗೊಳಿಸಲು ನಾವೆಲ್ಲರೂ ಒಟ್ಟುಸೇರಬೇಕಾದ ಕಾಲ ಬಂದಿದೆ. ಈ ನಿಟ್ಟಿನಲ್ಲಿ ಮೇ ೨೭ರಂದು ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಐತಿಹಾಸಿಕ ಸಮಾವೇಶವನ್ನು ಆಯೋಜಿಸಲಾಗಿದೆ. ಸಮಾವೇಶದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕರಾದ ಎಂ.ಕೆ. ಫೈಝಿ, ಕೇರಳ ರಾಜ್ಯಾಧ್ಯಕ್ಷರಾದ ಅಶ್ರಫ್ ಮೌಲವಿ ಮುವಾಟ್ಟುಪುಝ, ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್, ತುಂಬೆ, ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಲಿತ ಮುಖಂಡರಾದ ಬಿ.ಆರ್ ಭಾಸ್ಕರ್ ಪ್ರಸಾದ್ ಹಾಗೂ ಇನ್ನಿತರ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ನಾಯಕರು, ಪ್ರಗತಿಪರ ಹೋರಾಟಗಾರರು, ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಎಸ್‌ಡಿಪಿಐ ಪುತ್ತೂರು ಕ್ಷೇತ್ರ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷ ನಿಸಾರ್ ಕುದ್ರಡ್ಕ, ಎಸ್‌ಡಿಪಿಐ ಸುಳ್ಯ ಕ್ಷೇತ್ರ ಉಪಾಧ್ಯಕ್ಷ್ಷ ಬಾಬು ಸವಣೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here