ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • ಬಲ್ನಾಡು ಗ್ರಾಮ ಪಂಚಾಯತ್

 

 

ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ

ಬಲ್ನಾಡು ಗ್ರಾ.ಪಂನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ನಮ್ಮ ಪಂಚಾಯತ್‌ನ ಆಡಳಿತ ವರ್ಗ, ಪಿಡಿಓ ಹಾಗೂ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಂಚ, ಭ್ರಷ್ಟಾಚಾರದ ಬಗ್ಗೆ ಗ್ರಾಮಸ್ಥರಿಂದ ಈ ತನಕ ಯಾವುದೇ ದೂರು ಬಂದಿಲ್ಲ. ಭ್ರಷ್ಟಾಚಾರಕ್ಕೆ ಬಲ್ನಾಡು ಗ್ರಾಮ ಪಂಚಾಯತ್‌ನಲ್ಲಿ ಹಿಂದೆಯೂ ಅವಕಾಶ ನೀಡಿಲ್ಲ. ಮುಂದೆಯೂ ಅದಕ್ಕೆ ಅವಕಾಶ ನೀಡುವುದಿಲ್ಲ. ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುವುದು. ಸುದ್ದಿ ಭ್ರಷ್ಟಾಚಾರ ಮುಕ್ತ ಗ್ರಾಮ ಜನಾಂದೋಲನ ಕಾರ್ಯ ಶ್ಲಾಘನೀಯ. ಶಾಸಕರು ಭ್ರಷ್ಟಾಚಾರ ರಹಿತವಾಗಿ ಎಲ್ಲಾ ಗ್ರಾಮಗಳ ಅಭಿವೃದ್ಧಿಯ ಕೆಲಸಗಳನ್ನು ಪ್ರಾಮಾಣಿಕತೆಯಿಂದ ನಡೆಸುತ್ತಿದ್ದಾರೆ. ಇಂದಿರಾ ಎಸ್.ರೈ ಅಧ್ಯಕ್ಷರು ಬಲ್ನಾಡು ಗ್ರಾ.ಪಂ.

ಇಲಾಖೆಗಳು ಪಾಸ್‌ಪೋರ್ಟ್ ಕಚೇರಿ ಮಾದರಿಯಾಗಿ ಕೆಲಸ ನಿರ್ವಹಿಸಬೇಕು

ಪಾಸ್‌ಪೋರ್ಟ್ ಕಚೇರಿಯಲ್ಲಿ ಯಾವುದೇ ರೀತಿಯ ಲಂಚ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಅಲ್ಲಿ ನೇರವಾಗಿ ಹೋಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯವಿದೆ. ಅದೇ ಮಾದರಿಯಲ್ಲಿ ಎಲ್ಲಾ ಇಲಾಖೆಗಳೂ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಸರಕಾರ ಎಲ್ಲಾ ಇಲಾಖೆಗಳನ್ನು ಪಾಸ್‌ಪೋರ್ಟ್ ಕಚೇರಿ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಆಗ ಜನರಿಗೆ ಉತ್ತಮ ಸೇವೆ ದೊರೆಯಲು ಸಾಧ್ಯ. ಜನರು ಕೊಡುವ ಅಭ್ಯಾಸವನ್ನು ನಿಲ್ಲಿಸಿದಾಗ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ. ಹಮೀದ್ ಸಾಜ, ಕಾರ್ಯದರ್ಶಿ ತಾಲೂಕು ಯುವಜನ ಒಕ್ಕೂಟ.

ಭ್ರಷ್ಟಾಚಾರ ಮುಕ್ತ ಗ್ರಾಮವಾಗಬೇಕು

ಬಲ್ನಾಡಿನಲ್ಲಿ ಉತ್ತಮ ಅಧಿಕಾರಿ ಹಾಗೂ ಸಿಬ್ಬಂದಿಗಳಿದ್ದು ಭ್ರಷ್ಟಾಚಾರ ರಹಿತವಾಗಿ ಸೇವೆ ನೀಡಲಾಗುತ್ತಿದೆ. ಸುದ್ದಿ ಜನಾಂದೋಲನ ವೇದಿಕೆಯಿಂದ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಯುತ್ತಿದ್ದು ನಾವು ಭ್ರಷ್ಟಾಚಾರ ಮುಕ್ತವಾದ ಸೇವೆ ನೀಡುವ ಮೂಲಕ ಲಂಚ ಮುಕ್ತ ಬಲ್ನಾಡು ಗ್ರಾಮ ನಿರ್ಮಾಣವಾಗಬೇಕು. ಲಂಚ ಕೊಡುವುದನ್ನು ನಿಲ್ಲಿಸಿದಾಗ ತಗೊಳ್ಳುವುದು ಕಡಿಮೆಯಾಗಿ ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಇದಕ್ಕೆ ಸಮಾಜದ ಪ್ರತಿಯೊಬ್ಬರೂ ಸಹಕರಿಸಬೇಕು. ಇಲಾಖೆಗಳು ಹಾಗೂ ಗ್ರಾ.ಪಂ ಸದಸ್ಯರಿಂದ ಸಂಸದರ ತನಕ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಸಹಕರಿಸಿದಾಗ ನಿಯಂತ್ರಣ ಸಾಧ್ಯ. ಎ.ಎಂ ಪ್ರವೀಣ ಚಂದ್ರ ಆಳ್ವ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್

ಸಕಾಲ ಯೋಜನೆಗೆ ಒಳಪಡಿಸಬೇಕು

ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸರಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಸರಕಾರಿ ಕಚೇರಿಗಳಲ್ಲಿನ ಸಿಸಿಟಿವಿಯಿಂದ ಹಿಡಿದು ಕಚೇರಿಗಳಲ್ಲಿ ಪಾರದರ್ಶಕತೆ ತಲುಪುವವರೆಗೆ ಈ ಎಲ್ಲಾ ಕ್ರಮಗಳು ಲಂಚ ವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿದೆ. ಸರಕಾರದ ಇನ್ನಷ್ಟು ಸೇವೆಗಳನ್ನು ಸಕಾಲ ಯೋಜನೆಗೆ ಒಳಪಡಿಸಬೇಕು. ಜನ ಪ್ರತಿನಿಧಿ ಮತ್ತು ಅಧಿಕಾರಿ ವರ್ಗದವರು ದುರಾಸೆ ಬಿಟ್ಟು ತಮ್ಮ ತಮ್ಮ ಕ್ಷೇತ್ರ ಗಳಲ್ಲಿ ಕಾರ್ಯವನ್ನು ಮುಕ್ತ ವಾಗಿ ನಿರ್ವಹಿಸಿದರೆ ಖಂಡಿತವಾಗಿ ಭ್ರಷ್ಟಾಚಾರವನ್ನು ಮುಕ್ತ ಮಾಡಬಹುದು. ಭ್ರಷ್ಟಾಚಾರ ಮುಕ್ತ ವಾಗಲು ಪ್ರತಿಯೊಬ್ಬರೂ ಸಹಕರಿಸುವ ಮುಖಾಂತರ ಪ್ರಧಾನಿ ಮೋದಿಜಿಯವರ ಕನಸು ನನಸಾಗುವಂತೆ ನಾವೆಲ್ಲರೂ ಒಂದಾಗೋಣ- ಪರಮೇಶ್ವರಿ ಭಟ್ ಬಬ್ಬಿಲಿ, ಉಪಾಧ್ಯಕ್ಷರು, ಬಲ್ನಾಡು ಗ್ರಾ.ಪಂ

LEAVE A REPLY

Please enter your comment!
Please enter your name here