ಮರ ಕಡಿಯುವ ವೇಳೆ ವಿದ್ಯುತ್ ತಂತಿ ತಾಗಿ ಕಾರ್ಮಿಕ ಮೃತ್ಯು

0

  • ನರಿಮೊಗರಿನಲ್ಲಿ ನಡೆದ ದುರ್ಘಟನೆ

ಪುತ್ತೂರು; ಮರ ಕಡಿಯುವ ವೇಳೆ ಮರ ಸಮೀಪದಲ್ಲೇ ಇದ್ದ ವಿದ್ಯುತ್ ತಂತಿಗೆ ತಾಗಿ ಮರಕಡಿಯುತ್ತಿದ್ದ ಕಾರ್ಮಿಕ ಮೃತಪಟ್ಟ ಘಟನೆ ನರಿಮೊಗರಿನಲ್ಲಿ ನಡೆದಿದೆ.


ಮಾಡನ್ನೂರು ನಿವಾಸಿ ಮಲ್ಲ ಎಂಬವರ ಪುತ್ರ ವಸಂತ(35) ಮೃತಪಟ್ಟ ಕಾರ್ಮಿಕ.  ಮರ ಕಡಿಯುವ ವೃತ್ತಿಯನ್ನು ಮಾಡುತ್ತಿದ್ದ  ಇವರು ಗುರುವಾರದಂದು ನರಿಮೊಗರು ಐಟಿಐ ಸಮೀಪದಲ್ಲಿ ಕೆಲಸ ಮಾಡುತ್ತಿದ್ದರು. ಮರವೊಂದನ್ನು ಕಡಿದು ಉರುಳಿಸುವ ವೇಳೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ವಿದ್ಯುತ್ ಶಾಕ್ ಹೊಡೆದು ಗಂಭೀರಾವಸ್ಥೆಯಲ್ಲಿದ್ದ ವಸಂತರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರು ವಿವಾಹಿತರಾಗಿದ್ದು ಪತ್ನಿ ಎರಡು ವರ್ಷ  ಪ್ರಾಯದ ಗಂಡು ಹಾಗೂ 9 ತಿಂಗಳು ಪ್ರಾಯದ ಹೆಣ್ಣು ಮಗು ಇದೆ. ಮೃತರು ತಂದೆ, ತಾಯಿ ಈರ್ವರು ಸಹೋದರಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ. ಮೃತರು ಹಲವು ವರ್ಷಗಳಿಂದ ಮರ ಕಡಿಯುವ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here